ಬೆಂಗಳೂರು,ಆಗಸ್ಟ್,25,2026 (www.justkannada.in): ಅಧಿವೇಶನದಲ್ಲಿ ವಿಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಸದನವನ್ನ ಬಂದ್ ಮಾಡಿ ಕಾಂಗ್ರೆಸ್ ಪಲಾಯಾನ ಮಾಡಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಆರ್.ಅಶೋಕ್, ಟಗರು 10 ಹೆಜ್ಜೆ ಹಿಂದಕ್ಕೆ ಹೋದರೆ ಕೇಡಂತೆ. ಟಗರು10 ಹೆಜ್ಜೆ ಹಿಂದೆ ಹೋದರೇ ಗುಮ್ಮುವುದು ಪಕ್ಕ. ಸಿದ್ದರಾಮಯ್ಯ ಅವರದ್ದೇ ಆದಂತಹ ಪಡೆ ಕಟ್ಟುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ನಾಗೇಂದ್ರ ಪರವಾಗಿ ಯಾರೂ ಬಂದಿಲ್ಲ. ಈ ಬಾರಿ ಪ್ರಿಯಾಂಕ್ ಖರ್ಗೆ ಸಹ ಕೈಮುಗಿದು ಸುಮ್ಮನಾದರು. ಸಂಪುಟ ವಿಸ್ತರಣೆ ಗೊಂದಲಕ್ಕೆ ಹೆದರಿ ಅಧಿವೇಶನ ಮುಂದೂಡಿಕೆ ಮಾಡಿದ್ದಾರೆ ಎಂದರು.
ವಿಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಕಾಂಗ್ರೆಸ್ ಪಲಾಯಾನ ಮಾಡಿದೆ. ನಾಗೇಂದ್ರ ವಿರುದ್ದ ಪ್ರಾಸಿಕ್ಯೂಸನ್ ಗೆ ಸಿಬಿಐ ಅನುಮತಿ ಕೇಳಿದೆ. ಉತ್ತರ ಕೊಡುವ ಬದಲು ಅಧಿವೇಶನವನ್ನ ಬಂದ್ ಮಾಡಿದ್ದಾರೆ ನಾಗೇಂದ್ರ ನ ಬಂದ್ ಮಾಡಿ ಅಂದ್ರೆ ಸದನವನ್ನೇ ಬಂದ್ ಮಾಡಿದ್ರಿ ಎಂದು ಲೇವಡಿ ಮಾಡಿದರು.
Key words: Congress, answer, opposition questions, Session, R. Ashok
The post ಸದನದಲ್ಲಿ ವಿಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಕಾಂಗ್ರೆಸ್ ಪಲಾಯಾನ-ಆರ್.ಅಶೋಕ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




