ಮೈಸೂರು,ಜೂನ್,11,2025 (www.justkannada.in): ನವೆಂಬರ್ ನಲ್ಲಿ ಸಿಎಂ ಬದಲಾವಣೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ ಮಹದೇವಪ್ಪ, ಸಿಎಂ ಕುರ್ಚಿ ಗಟ್ಟಿಯಾಗಿದೆ. ಅದರ ಮೇಲೆ ಕುಳಿತಿರುವವರು ಗಟ್ಟಿಯಾಗಿದ್ದಾರೆ ಎಂದು ಹೇಳಿದ್ದಾರೆ.
ಇಡಿ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಹೆಚ್.ಸಿ ಮಹದೇವಪ್ಪ, ತನಿಖೆ ಸಂಸ್ಥೆಗಳು ದಾಳಿ ನಡೆಸಲು ಸಂವಿಧಾನದಲ್ಲಿ ಮುಕ್ತ ಅವಕಾಶ ನೀಡಲಾಗಿದೆ. ಇಡಿಗೆ ದೂರು ಹೋಗಿರುತ್ತೆ. ಆ ಹಿನ್ನಲೆ ದಾಳಿಯಾಗಿರತ್ತದೆ. ದಾಳಿಯಲ್ಲಿ ರಾಜಕೀಯ ಉದ್ದೇಶವಿರಬಾರದು ಎಂದು ತಿಳಿಸಿದರು.
ಕಾಲ್ತುಳಿತ ವಿಚಾರ ಕುರಿತು ನಾಳೆ ಬಿಜೆಪಿಯಿಂದ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿದ ಹೆಚ್.ಸಿ ಮಹದೇವಪ್ಪ, ವಿಪಕ್ಷಗಳು ಇರೋದೇ ವಿರೋಧ ಮಾಡೋಕೆ. ಕಾಲ್ತುಳಿತ ಘಟನೆ ಒಂದು ಹೃದಯವಿದ್ರಾವಕ ಘಟನೆ. ನಿರೀಕ್ಷೆಗಿಂತ ಹೆಚ್ಚಿನ ಜನ ಸೇರಿದ್ದರಿಂದ ದುರಂತ ಆಗಿದೆ. ಇಂತಹ ಘಟನೆಗಳು ಬೇರೆ ಕಡೆ ನಡೆದಾಗ ಯಾರು ರಾಜೀನಾಮೆ ಕೊಟ್ಟಿದ್ರು? ನೈತಿಕ ಹೊಣೆ ಅನ್ನೋದು ಮಹತ್ವದ್ದು. ತನಿಖೆ ನಡೆಯುತ್ತಿದೆ ಬಳಿಕ ಯಾರದು ತಪ್ಪು ಏನು ಎಲ್ಲಾ ತಿಳಿಯತ್ತೆ. ಜಾತಿಗಣತಿ ವಿಚಾರ ಕುರಿತು ನಾಳೆ ಕ್ಯಾಬಿನೆಟ್ ನಲ್ಲಿ ಚರ್ಚೆ ನಡೆಯುತ್ತದೆ. ಅಲ್ಲಿ ತೀರ್ಮಾನ ಆಗತ್ತದೆ ಎಂದರು.
ಇನ್ನು ಸಂಪುಟ ಪುನಾರಚನೆ ವಿಚಾರ, ಇದು ಹೈಕಮಾಂಡ್ ಗೆ ಬಿಟ್ಟ ವಿಚಾರ. ಈ ಬಗ್ಗೆ ನನಗೆ ಗೊತ್ತಿಲ್ಲ. ಹೈ ಕಮಾಂಡ್ ಪುನಾರಚನೆ ಬಗ್ಗೆ ನನ್ನ ಸಲಹೆ ಕೊಡಿ ಅಂತ ಕೇಳಿದರೇ ಕೊಡುತ್ತೇನೆ ಎಂದು ತಿಳಿಸಿದರು.
ಕಳೆದ ವರ್ಷದ ದಸರಾ ಲೆಕ್ಕ ಕೊಡದ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ಸಿ ಮಹದೇವಪ್ಪ, ಲೆಕ್ಕ ಕೊಡಿ ಅಂತ ಈಗಾಗಲೇ ಹೇಳಿದ್ದೇನೆ. ಜಿಲ್ಲಾಡಳಿತ ಲೆಕ್ಕ ಕೊಡುತ್ತದೆ. ಅದರಲ್ಲೇನು ಮುಚ್ಚು ಮರೆ ಇಲ್ಲ ಎಂದರು.
Key words: CM, Change, Mysore, Minister, H.C. Mahadevappa
The post ಸಿಎಂ ಕುರ್ಚಿ ಗಟ್ಟಿ, ಅದರ ಮೇಲೆ ಕುಳಿತಿರುವವರು ಗಟ್ಟಿಯಾಗಿದ್ದಾರೆ- ಸಚಿವ ಹೆಚ್.ಸಿ ಮಹದೇವಪ್ಪ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.