16
April, 2026

A News 365Times Venture

16
Thursday
April, 2026

A News 365Times Venture

ಸುಂಕ ಸಮರ : ಬಲಿಷ್ಠ ರಾಷ್ಟ್ರ ಭಾರತ ದೊಂದಿಗೆ ಸಂಬಂಧ ಹಾಳು ಮಾಡಬೇಡಿ-ಟ್ರಂಪ್ ಗೆ ನಿಕ್ಕಿ ಹ್ಯಾಲಿ ಸಲಹೆ

Date:

ವಾಷಿಂಗ್ಟನ್, ಆಗಸ್ಟ್​ 06,2025 (www.justkannada.in):  ಆಗಸ್ಟ್ 1 ರಿಂದ ಜಾರಿಗೆ ಬಂದ ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಶೇ. 25 ರಷ್ಟು ಹೆಚ್ಚಿಸುವುದಾಗಿ ಅಮೇರಿಕಾ ಅಧ್ಯಕ್ಷ ಟ್ರಂಪ್ ಸಂದರ್ಶನವೊಂದರಲ್ಲಿ ಹೇಳಿರುವ ವಿಚಾರಕ್ಕೆ ಸಂಬಂಧಿಸಿದಂತೆ ರಿಪಬ್ಲಿಕನ್ ನಾಯಕಿ ನಿಕ್ಕಿ ಹ್ಯಾಲಿ ಕಿಡಿಕಾರಿದ್ದಾರೆ.

ಚೀನಾದಂತಹ ಶತ್ರು ರಾಷ್ಟ್ರಕ್ಕೆ ರಿಯಾಯಿತಿಗಳನ್ನು ನೀಡಬೇಡಿ ಮತ್ತು ಭಾರತದಂತಹ ಮಿತ್ರ ರಾಷ್ಟ್ರದೊಂದಿಗಿನ ಸಂಬಂಧವನ್ನು ಹಾಳು ಮಾಡಬೇಡಿ ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​​ ಗೆ ರಿಪಬ್ಲಿಕನ್ ನಾಯಕಿ ನಿಕ್ಕಿ ಹ್ಯಾಲಿ ಸಲಹೆ ನೀಡಿದ್ದಾರೆ ಎಂದು ವರದಿಯಾಗಿದೆ.

ಈ ಕ್ರಮದಿಂದ ಅಮೆರಿಕ ಹಾಗೂ ಭಾರತದ ಸಂಬಂಧ ಹದಗೆಡಬಹುದು. ಭಾರತದಂತಹ ಬಲಿಷ್ಠ ಮಿತ್ರ ರಾಷ್ಟ್ರದೊಂದಿಗಿನ ಸಂಬಂಧ ಹಾಳು ಮಾಡಿಕೊಳ್ಳಬೇಡಿ. ಚೀನಾದಂತಹ ಶತ್ರು ರಾಷ್ಟ್ರಕ್ಕೆ ರಿಯಾಯಿತಿಗಳನ್ನು ನೀಡಬೇಡಿ  ಎಂದು ನಿಕ್ಕಿಹ್ಯಾಲಿ ಹೇಳಿದ್ದಾರೆ.  ಟ್ರಂಪ್ ಆಡಳಿತವು ಎರಡು ಮಾನದಂಡಗಳನ್ನು ಅಳವಡಿಸಿಕೊಂಡಿದೆ ಎಂದು ನಿಕ್ಕಿ ಹ್ಯಾಲಿ ಆರೋಪಿಸಿದರು. ಚೀನಾದೊಂದಿಗಿನ ವ್ಯಾಪಾರಕ್ಕಾಗಿ ಅಮೆರಿಕ 90 ದಿನಗಳ ಸುಂಕ ವಿನಾಯಿತಿ ನೀಡಿದೆ, ಆದರೆ ಭಾರತದ ಮೇಲೆ ರೊಚ್ಚಿಗೆದ್ದಿದೆ ಎಂದರು.

Key words: Tariff, relations, India, America, Nikki Haley, advises, Trump

The post ಸುಂಕ ಸಮರ : ಬಲಿಷ್ಠ ರಾಷ್ಟ್ರ ಭಾರತ ದೊಂದಿಗೆ ಸಂಬಂಧ ಹಾಳು ಮಾಡಬೇಡಿ-ಟ್ರಂಪ್ ಗೆ ನಿಕ್ಕಿ ಹ್ಯಾಲಿ ಸಲಹೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಕ್ಷೇತ್ರ ಮರು ವಿಂಗಡಣೆ ಮಸೂದೆ ಪ್ರತಿ ಸುಟ್ಟು ಹಾಕಿ ತಮಿಳುನಾಡು ಸಿಎಂ ಸ್ಟಾಲಿನ್ ಪ್ರತಿಭಟನೆ

ಚೆನ್ನೈ,ಏಪ್ರಿಲ್,16,2026 (www.justkannada.in):  ಕೇಂದ್ರ ಸರ್ಕಾರ ಜಾರಿ ಮಾಡಲು ಹೊರಟಿರುವ ಲೋಕಸಭಾ ಕ್ಷೇತ್ರ...

ನಮ್ಮದು ಕುಟುಂಬ ರಾಜಕಾರಣ ಅಲ್ಲ- ಹೆಚ್.ಡಿಕೆಗೆ ಯತೀಂದ್ರ ಸಿದ್ದರಾಮಯ್ಯ ತಿರುಗೇಟು

ಮೈಸೂರು,ಏಪ್ರಿಲ್ ,15,2026 (www.justkannada.in): ತಮ್ಮ ವಿರುದ್ದ ಕುಟುಂಬ ರಾಜಕಾರಣ ಆರೋಪ ಮಾಡಿದ್ದ...

ಕೃಷಿ ಪ್ರಾಯೋಗಿಕ (Agriculture Practical) ಪರೀಕ್ಷೆ: ವಿದ್ಯಾರ್ಥಿಗಳಿಗಾಗಿ ಉಚಿತ ತರಬೇತಿ ಕಾರ್ಯಾಗಾರ.

  ಮೈಸೂರು, ಏ.೧೫,೨೦೨೬: ಕೃಷಿ ಪ್ರಾಯೋಗಿಕ (Agriculture Practical) ಪರೀಕ್ಷೆಗೆ ಸಿದ್ಧರಾಗುತ್ತಿರುವ ವಿದ್ಯಾರ್ಥಿಗಳಿಗಾಗಿ...

ಮುಂದಿನ ಟಾರ್ಗೆಟ್ ನಾನೇ ಎಂದು ಪ್ರಚಾರ: ಸಿದ್ದರಾಮಯ್ಯ, ಡಿಕೆಶಿ ಜೊತೆ ಚರ್ಚೆ ಮಾಡ್ತೇನೆ- ಸಚಿವ ಜಮೀರ್

ಬೆಂಗಳೂರು,ಏಪ್ರಿಲ್,15,2026 (www.justkannada.in): ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಆರೋಪದ...