11
June, 2026

A News 365Times Venture

11
Thursday
June, 2026

A News 365Times Venture

ಸೆಸ್ಕ್‌ ನಲ್ಲಿ ಅಪ್ರೆಂಟಿಸ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

Date:

ಮೈಸೂರು, ಮೇ ,11, 2026 (www.justkannada.in):  ಚಾಮುಂಡೇಶ್ವರಿ ವಿದ್ಯುತ್​​ ಸರಬರಾಜು ನಿಗಮ ನಿಯಮಿತ(ಚಾವಿಸನಿನಿ)ದಿಂದ 2026-27ನೇ ಸಾಲಿನ ಇಂಜಿನಿಯರಿಂಗ್‌ ಪದವೀಧರರು, ತಾಂತ್ರಿಕ ಪದವಿ, ಡಿಪ್ಲೊಮಾ ಮತ್ತು ಇತರೆ ಪದವೀಧರರಿಗೆ ಅಪ್ರೆಂಟಿಸ್ ತರಬೇತಿಗೆ​ ಅರ್ಜಿ ಆಹ್ವಾನಿಸಲಾಗಿದೆ.

ಅಪ್ರೆಂಟಿಸ್‌ ತರಬೇತಿಯ ಒಟ್ಟು 200 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಇಂಜಿನಿಯರಿಂಗ್‌ ​ಪದವಿ ಹೊಂದಿರುವ 80 ಹುದ್ದೆಗಳು, ಡಿಪ್ಲೊಮಾ ಪದವೀಧರರು 55 ಹಾಗೂ ಇತರೆ ಪದವಿ ಹೊಂದಿರುವ 65 ಅಪ್ರೆಂಟಿಸ್‌ ಹುದ್ದೆಗಳಿಗೆ ಒಂದು ವರ್ಷದ ಅವಧಿಗೆ ನೇಮಕಾತಿ ಮಾಡಲಾಗುವುದು. ಈ ಅವಧಿಯಲ್ಲಿ ಗೌರವಧನ ನೀಡಲಾಗುತ್ತದೆ.

ತರಬೇತಿಯಲ್ಲಿ ಇಂಜಿನಿಯರಿಂಗ್ ಅಪ್ರೆಂಟಿಸ್​ ಹುದ್ದೆಗೆ ಅಭ್ಯರ್ಥಿಗಳು ಎಲೆಕ್ಟ್ರಿಕಲ್​ ಮತ್ತು ಎಲೆಕ್ಟ್ರಾನಿಕ್ಸ್ ಹಾಗೂ ಸಿವಿಲ್​ ಇಂಜಿನಿಯರಿಂಗ್​ ವಿಷಯದಲ್ಲಿ ಪದವಿ ಹೊಂದಿರಬೇಕು. ಡಿಪ್ಲೊಮಾ ಅಪ್ರೆಂಟಿಸ್​ ಹುದ್ದೆಗೆ ಎಲೆಕ್ಟ್ರಿಕಲ್​ ಮತ್ತು ಎಲೆಕ್ಟ್ರಾನಿಕ್ಸ್​ ಹಾಗೂ ಸಿವಿಲ್​ ಇಂಜಿನಿಯರಿಂಗ್​ ಡಿಪ್ಲೊಮಾ ಪದವಿ ಪಡೆದಿರಬೇಕು. ಪದವೀಧರ ಅಪ್ರೆಂಟಿಸ್​ ಹುದ್ದೆಗೆ ಬಿಕಾಂ, ಬಿಬಿಎ, ಬಿಸಿಎ, ಬಿಎ, ಬಿಎಸ್ಸಿ ಪದವಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 2022, 2023, 2024, 2025 ಮತ್ತು 2026ನೇ ಸಾಲಿನಲ್ಲಿ ಉತ್ತೀರ್ಣರಾದವರು ಅರ್ಜಿ ಸಲ್ಲಿಕೆಗೆ ಅರ್ಹರಾಗಿದ್ದಾರೆ.

ಅಭ್ಯರ್ಥಿಗಳು ಆನ್‌ ಲೈನ್‌ ಅಪ್ಲಿಕೇಷನ್‌ ಸಲ್ಲಿಸಲು ಮೇ 8ರಿಂದ  ಪ್ರಕ್ರಿಯೆ ಆರಂಭವಾಗಿದ್ದು, ಮೇ 29 ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕವಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ಚಾವಿಸನಿನಿಯ ಅಧಿಕೃತ ವೆಬ್‌ಸೈಟ್‌ https://cescmysore.karnataka.gov.in (ಪ್ರಕಟಣೆಗಳು/ಪ್ರಕಟಣೆಗಳು 2026-27/ನಲ್ಲಿ ಕ್ಲಿಕ್‌ ಮಾಡಿ) ಮಾಹಿತಿ ಪಡೆಯಬಹುದಾಗಿದೆ.

Key words: Applications, invited, apprentice, CESC

The post ಸೆಸ್ಕ್‌ ನಲ್ಲಿ ಅಪ್ರೆಂಟಿಸ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: ಸರ್ಕಾರಕ್ಕೆ ಕುಟುಕಿದ JDS

ಬೆಂಗಳೂರು, ಜೂನ್​​, 12,2026 (www.justkannada.in): ಗೃಹಲಕ್ಷ್ಮಿ ಯೋಜನೆಯಲ್ಲಿ ಆಗುತ್ತಿರುವ ದುರ್ಬಳಕೆ ತಡೆಯಲು...

ಪ್ರಧಾನಿಯಾಗಿ ಮೋದಿ 12 ವರ್ಷ: ಮೈಸೂರಿನಲ್ಲಿ ಅಭಿನಂದನಾ ಜಾಥಾ, ವಿಶೇಷ ಅರ್ಚನೆ

ಮೈಸೂರು,ಜೂನ್,10,2026 (www.justkannada.in): ಪ್ರಧಾನಿಯಾಗಿ ನರೇಂದ್ರ ಮೋದಿ  12 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ...

ಡಿಸಿಎಂ ಸ್ಥಾನ ಕೈತಪ್ಪಿದ್ದಕ್ಕೆ ನನಗೆ ಅಸಮಾಧಾನ ಇಲ್ಲ-ಸಚಿವ ಎಂ.ಬಿ ಪಾಟೀಲ್

ಬೆಂಗಳೂರು,ಜೂನ್,10,2026 (www.justkannada.in):  ಡಿಸಿಎಂ ಸ್ಥಾನ ಕೈತಪ್ಪಿದ್ದಕ್ಕೆ ನನಗೆ ಅಸಮಾಧಾನವಿಲ್ಲ ಎಂದು ಬೃಹತ್...

ಮೋದಿ ಸಾಧನೆ ಬಗ್ಗೆ ಬಿಜೆಪಿ ಸಂಭ್ರಮ ಪ್ರಜಾಪ್ರಭುತ್ವ ವಿರುದ್ಧದ ಅತಿದೊಡ್ಡ ಅಣಕ-ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಜೂನ್,10,2026 (www.justkannada.in): ಭಾರತದ ಪ್ರಜಾಪ್ರಭುತ್ವವನ್ನು ಹಾಳುಗೆಡವುವ ಮೂಲಕ ದೀರ್ಘಾವಧಿ ಪ್ರಧಾನಿಯಾಗಿ ಮುಂದುವರಿದಿರುವ...