19
July, 2025

A News 365Times Venture

19
Saturday
July, 2025

A News 365Times Venture

ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಕಠಿಣ ತಯಾರಿ ಮುಖ್ಯ- ಡಾ. ಎಂ.ಬಿ ಬೋರಲಿಂಗಯ್ಯ

Date:

ಮೈಸೂರು,ಏಪ್ರಿಲ್,17,2025 (www.justkannada.in):  ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಕಠಿಣ ತಯಾರಿ ಮುಖ್ಯ ಎಂದು ದಕ್ಷಿಣವಲಯದ ಪೊಲೀಸ್ ಉಪ ಮಹಾನಿರೀಕ್ಷಕ ಡಾ. ಎಂ. ಬಿ ಬೋರಲಿಂಗಯ್ಯ ತಿಳಿಸಿದರು.

ಗುರುವಾರ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ 50 ದಿನಗಳ ಐಎಎಸ್‌ ಹಾಗೂ ಕೆಎಎಸ್ ಪರೀಕ್ಷಾ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಉದ್ಯೋಗ ಮಾರುಕಟ್ಟೆಯಲ್ಲೀಗ ಸ್ಪರ್ಧೆ ಹೆಚ್ಚಿದೆ. ಯಾವುದೇ ಜಾಬ್ ನೋಟಿಫಿಕೇಷನ್ ಪ್ರಕಟವಾಗಲಿ. ಇರುವುದು ಕೆಲವೇ ಹುದ್ದೆಗಳಾಗಿದ್ದರೂ ಸಾವಿರ, ಲಕ್ಷ ಸಂಖ್ಯೆಯಲ್ಲಿಅಭ್ಯರ್ಥಿಗಳು ಅರ್ಜಿ ಸಲ್ಲಿಸಿರುತ್ತಾರೆ. ಸರ್ಕಾರಿ ನೌಕರಿಗಿರುವ ಸೆಳೆತನ ಅಂತದ್ದು. ಕಠಿಣ ಪರಿಶ್ರಮವಿದ್ದರೆ ಇಂತಹ ಉದ್ಯೋಗಗಳನ್ನು ನೀವು ಪಡೆಯಬಹುದು ಎಂದು‌ ಶಿಬಿರಾರ್ಥಿಗಳಿಗೆ ಕಿವಿಮಾತು ಹೇಳಿದರು.

ನಾನು ಕೂಡ ಹಳ್ಳಿಯಲ್ಲಿಯೇ ಹುಟ್ಟಿ ಬೆಳೆದು ಮೈಸೂರು ಮೆಡಿಕಲ್ ಕಾಲೇಜಿನಲ್ಲಿ‌ಓದಿ ಯುಪಿಎಸ್ಸಿ ಪರೀಕ್ಷೆ ತಯಾರಿಗೆ ದೆಹಲಿಗೆ ಹೋಗಿದ್ದೆ. ಇಲ್ಲಿ ಬಹುತೇಕರು ಗ್ರಾಮೀಣ ಭಾಗದವರೇ ಇದ್ದೀರಿ. ಶ್ರಮಪಟ್ಟು ಓದಿ. ಪ್ರಸ್ತುತ ಪರೀಕ್ಷೆ ತಯಾರಿಗೆ ದೆಹಲಿಗೆ ಹೋಗಬೇಕೆಂದಿಲ್ಲ, ಮೈಸೂರಿನ ಕೆಎಸ್ಒಯು ನಡೆಸುತ್ತಿರುವ ತರಬೇತಿಯು ಅತ್ಯುತ್ತಮ ತರಬೇತಿ ಕೇಂದ್ರವಾಗಿದೆ ಎಂದರು.

ಹಾರ್ಡ್ ವರ್ಕ್ ಪರಿಶ್ರಮದ ಜೊತೆಗೆ ಓದಿನಲ್ಲಿ ತಯಾರಿ ಇರಲಿ.  ನಿದ್ರೆಯು ಮುಖ್ಯ. ನಿದ್ದೆಗೆಟ್ಟಿ ಓದುವುದು ಬೇಡ. ಎಲ್ಲದಕ್ಕೂ ಸಮಯಪಾಲನೆ ಇದ್ದರೆ ಒಳಿತು. ತಯಾರಿ ಸಮಯದಲ್ಲಿ ವಿದ್ಯಾರ್ಥಿಗಳು ಗುಂಪು ರಚಿಸಿಕೊಂಡು ಆಯ್ಕೆವಾರು ವಿಷಯಗಳನ್ನು ಚರ್ಚಿಸಿ. ಸಾಧ್ಯವಾದಷ್ಟು ಸಾಮಾಜಿಕ ಜಾಲತಾಣದ ಗೀಳಿನಿಂದ ‌‌ದೂರವಿದ್ದು,  ದೈನಂದಿನ ದೈಹಿಕ ಚಟುವಟಿಕೆ ಕಡೆಗೆ ಗಮನಹರಿಸಿ ಎಂದರು.

ಸ್ಪರ್ಧಾತ್ಮಕ ಪರೀಕ್ಷಾ ಸಿದ್ಧತೆ ಕುರಿತು ಮಾತನಾಡಿದ ಮೈಸೂರು ಮಹಾನಗರ ಪಾಲಿಕೆಯ ಉಪಆಯುಕ್ತ ಜಿ.ಎಸ್ ಸೋಮಶೇಖರ್, ಪರೀಕ್ಷೆ ಎದುರಿಸುವುದಕ್ಕೆ ದೃಢ ಮನಸ್ಸುಇರಬೇಕು. ಪರೀಕ್ಷೆ ಯಶಸ್ಸಿನ ತಂತ್ರಗಳ ಬಗ್ಗೆಅಭಿಪ್ರಾಯ ಹಂಚಿ ಕೊಂಡ ಅವರು, ಆತ್ಮವಿಶ್ವಾಸ, ಸಮಯಪಾಲನೆ, ನೆನಪಿನ ಶಕ್ತಿ, ಪರೀಕ್ಷೆ ಬರೆಯುವ ತಂತ್ರ ಕಲಿತರೆ ಗೆಲುವುನಿ ಮ್ಮದೆ ಎಂದು ಹೇಳಿದರು.

ನಾವು ಸಾವಿರ ಜನರಿಗಿನ್ನ ಮುಂದೆ ಇದ್ದೀವಿ ಎನ್ನುವ ಭರವಸೆ ಇರಲಿ. ಪರೀಕ್ಷೆ ಬರೆದ ಮೊದಲ ಬಾರಿಯಲ್ಲಿಆಯ್ಕೆಯಾಗಬೇಕು ಎನ್ನುವ ಛಲ ಇರಲಿ ಆದರೆ ಆಗದೆ ಇದ್ದಾಗ ಛಲ ಬಿಡದೆ ಮತ್ತೆ ಮತ್ತೆ ಪ್ರಯತ್ನಿಸಿ ಎಂದರು.

ಯುಪಿಎಸ್ಸಿಕೆಪಿಎಸ್ಸಿಪರೀಕ್ಷೆಗೆತಯಾರಿನಡೆಸಿದರೆಇನ್ನಿತರಬೇರೆಸ್ಪರ್ಧಾತ್ಮಕಪರೀಕ್ಷೆಗೂಕೂಡಅನುಕೂಲವಾಗಲಿದೆ. ದಿನದ 24 ಗಂಟೆಯನ್ನುವಿಂಗಡಿಸಿಕೊಂಡುಸಮಯಪರಿಪಾಲಿಸಿಎಂದುಹೇಳಿದರು.

ಪರೀಕ್ಷೆ ಬಗ್ಗೆ ತಿಳಿವಳಿಕೆ ಇರಬೇಕು. ಪಠ್ಯಕ್ರಮ, ಪರೀಕ್ಷೆ ಮಾದರಿ, ಹಿಂದಿನ ವರ್ಷದ ಪ್ರಶ್ನೆಪ್ರತ್ರಿಕೆಗಳ ಅಧ್ಯಯನದ ಜೊತೆಗೆ ಪ್ರತಿ ನಿತ್ಯ ದಿನಪತ್ರಿಕೆ, ನಿಮ್ಮಿಷ್ಟದ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಿ ಎಂದು ಸಲಹೆನೀಡಿದರು.

ಕುಲಪತಿ ಪ್ರೊ.ಶರಣಪ್ಪವಿ.ಹಲಸೆ ಅವರು ಮಾತನಾಡಿ,  ವಿದ್ಯಾರ್ಥಿಗಳು ಸತತ ಪ್ರಯತ್ನ ಪಟ್ಟು ಓದಬೇಕು. ನಿಮ್ಮ ನಿರಂತರ ಪ್ರಯತ್ನದಿಂದ ಎಲ್ಲವೂ ಸಾಧ್ಯ. ಶಿಕ್ಷಣ ಉದ್ಯೋಗದ ಜೊತೆಗೆ ಶಿಸ್ತನ್ನು ಕಲಿಸುತ್ತದೆ ಎಂದು ಹೇಳಿದರು.

ಬಾಬಾಸಾಹೇಬ್ ಅಂಬೇಡ್ಕರ್ ಅವರು ಕಷ್ಟಪಟ್ಟಿ ಓದಿ ವಿಶ್ವಜ್ಞಾನಿ ಆಗಿದ್ದಾರೆ.  ನಿರಂತರ ಪರಿಶ್ರಮದಿಂದ ಮಾತ್ರ‌‌ ಇದೆಲ್ಲಾ ಸಾಧ್ಯ. ಹೀಗಾಗಿ ನಿಮ್ಮ ಓದು ನಿರಂತರವಾಗಿರಲಿ ಎಂದು ತಿಳಿಸಿದರು.

ಕುಲಸಚಿವ ಪ್ರೊ.ಕೆ.ಬಿಪ್ರವೀಣ ಅವರು ಮಾತನಾಡಿ, ವಿದ್ಯಾರ್ಥಿಗಳು ಹಾರ್ಡ್ ವರ್ಕ್ ಜೊತೆಗೆ ಸ್ಮಾರ್ಟ್ ವರ್ಕ್ ಮಾಡಬೇಕು. ಆಸೆ ಪಟ್ಟು ಓದಿ. ವಿವಿಯ ಆವರಣದಲ್ಲಿ ಎಲ್ಲಾ ರೀತಿಯ ಸೌಕರ್ಯಗಳಿವೆ. ಇವುಗಳನ್ನು ಉಪಯೋಗಿಸಿಕೊಳ್ಳಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪರೀಕ್ಷಾಂಗ ಕುಲಸಚಿವ ಪ್ರೊ. ಹೆಚ್.ವಿಶ್ವನಾಥ್, ಹಣಕಾಸು ಅಧಿಕಾರಿ ಪ್ರೊ. ನಿರಂಜನ್‌ ರಾಜ್‌, ಅಧ್ಯಯನ ಕೇಂದ್ರದ ಡೀನ್‌ ಪ್ರೊ. ರಾಮನಾಥಂನಾಯ್ಡು,   ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ, ಸಿದ್ದೇಶ್‌ ಹೊನ್ನೂರ್‌, ಗಣೇಶ್‌ ಕೆ.ಜಿ. ಕೊಪ್ಪಲ್‌, ಇದ್ದರು.

ಕಾರ್ಯಕ್ರಮದಲ್ಲಿ ದಕ್ಷಿಣವಲಯದ ಪೊಲೀಸ್ ಉಪ ಮಹಾನಿರೀಕ್ಷಕ ಡಾ.ಎಂ.ಬಿ ಬೋರಲಿಂಗಯ್ಯ ಮತ್ತು ಮಹಾನಗರ ಪಾಲಿಕೆಯ ಉಪ ಆಯುಕ್ತ ಜಿ.ಎಸ್ ಸೋಮಶೇಖರ್ ಅವರನ್ನು ಕರಾಮುವಿ ಸ್ಪರ್ಧಾತ್ಮಕ ತರಬೇತಿ ಕೇಂದ್ರದ ವತಿಯಿಂದ ಸನ್ಮಾನಿಸಲಾಯಿತು.

Key words: Mysore, KSOU, Competitive Examination, Training Centre

The post ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಕಠಿಣ ತಯಾರಿ ಮುಖ್ಯ- ಡಾ. ಎಂ.ಬಿ ಬೋರಲಿಂಗಯ್ಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಿಸುವುದಿಲ್ಲ- ಸಚಿವ ಕೆ.ವೆಂಕಟೇಶ್

ಮೈಸೂರು,ಜುಲೈ,19,2025 (www.justkannada.in): ಗ್ಯಾರಂಟಿ ಯೋಜನೆಗಳನ್ನ ನಿಲ್ಲಿಸುತ್ತಾರೆಂದು ಬಿಜೆಪಿ ಜೆಡಿಎಸ್ ಅಪಪ್ರಚಾರ ಮಾಡುತ್ತಿವೆ....

ಕರ್ತವ್ಯದ ವೇಳೆ ಮೃತಪಟ್ಟ ಪವರ್ ಮ್ಯಾನ್ ಕುಟುಂಬಕ್ಕೆ 1.06 ಕೋಟಿ ರೂ. ಪರಿಹಾರ ವಿತರಣೆ

ಮೈಸೂರು, ಜುಲೈ 19, 2025 (www.justkannada.in): ನಿಗಮದ ಸಿಬ್ಬಂದಿ ಹಾಗೂ ಅಧಿಕಾರಿಗಳ...

OPS ಜಾರಿ ಬಗ್ಗೆ ಸಮಿತಿ ವರದಿ ಬಂದ ಬಳಿಕ‌ ಚರ್ಚಿಸಿ ತೀರ್ಮಾನ: ಸಿಎಂ ಭರವಸೆ

ಮೈಸೂರು ಜು 19, ೨೦೨೫:  ಏಳನೇ ವೇತನ‌ ಆಯೋಗದ ಶಿಫಾರಸ್ಸನ್ನು ಯಥಾವತ್ತಾಗಿ...

ಮಾಹಿತಿ ಹಕ್ಕು ಆಯೋಗ : ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ ನವೆಂಬರ್‍ನಲ್ಲಿ ಅದಾಲತ್ ಮಾದರಿ ಕಲಾಪ

ದಾವಣಗೆರೆ ಜುಲೈ.18, ೨೦೨೫:  ಆರ್.ಟಿ.ಐ. ಕಾಯಿದೆಯಡಿ ಸಲ್ಲಿಕೆಯಾಗುವ ಎರಡನೇ ಮೇಲ್ಮನವಿ ಪ್ರಕರಣಗಳನ್ನು...