ಬೆಂಗಳೂರು,ಜೂನ್,24,2025 (www.justkannada.in): ವಸತಿ ಇಲಾಖೆಯಲ್ಲಿ ಹಣ ಪಡೆದು ಮನೆ ಹಂಚಿಕೆ ಆರೋಪಕ್ಕೆ ಸಂಬಂಧಿಸಿದಂತೆ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಪ್ರತಿಕ್ರಿಯಿಸಿದ್ದು ಶಾಸಕ ಬಿ.ಆರ್ ಪಾಟೀಲ್ ಆರೋಪದ ಬಗ್ಗೆ ತನಿಖೆಯಾಗಲಿ. ಸಿಬಿಐ ತನಿಖೆಗೂ ನೀಡಲಿ ಎಂದು ಸವಾಲು ಹಾಕಿದ್ದಾರೆ.
ಶಾಸಕ ಬಿ.ಆರ್ ಪಾಟೀಲ್ ಆರೋಪ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಜಮೀರ್ ಅಹ್ಮದ್ ಖಾನ್, ಹಣ ಪಡೆದು ಮನೆ ಕೊಟ್ಟರೆ ನನ್ನ ಕುಟುಂಬಕ್ಕೆ ಒಳ್ಳೆಯದಾಗುತ್ತಾ ಬಡವರ ಬಳಿ ಹಣ ತೆಗೆದುಕೊಂಡರೆ ಹುಳ ಬಿದ್ದು ಸಾಯ್ತಾರೆ. ಬಿಆರ್ ಪಾಟೀಲ್ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ 14 ಲಕ್ಷ ಮನೆ ಹಂಚಿಕೆ ಮಾಡಲಾಗಿತ್ತು ನಂತರ ಬಂದ ಸರ್ಕಾರ 5.8 ಲಕ್ಷ ಮನೆಗಳನ್ನ ನೀಡುತ್ತು. ಮೂರು ಹಂತದಲ್ಲಿ ನಾವು ಮನೆಗಳನ್ನ ಹಂಚಿಕೆ ಮಾಡುತ್ತೇವೆ. ಈಗ ನಾವು ಯಾವುದೇ ಹೊಸ ಟಾರ್ಗೆಟ್ ನೀಡಿಲ್ಲ ಎಂದರು.
ಬಿ. ಆರ್ ಪಾಟೀಲ್ ಸಚಿವರು ಹಣ ಪಡೆದಿದ್ದಾರೆ ಎಂದಿದ್ದಾರಾ..? ಬಿಆರ್ ಪಾಟೀಲ್ ಹೇಳಿಕೆ ಬಗ್ಗೆ ತನಿಖೆ ಆಗಲಿ ಬೇಕಾದರೆ ಸಿಬಿಐ ತನಿಖೆಗೆ ಕೊಡಲಿ. ಒಂದು ಮನೆ ಕಟ್ಟಬೇಕಾದರೆ7.5 ಲಕ್ಷ ಆಗುತ್ತೆ ಕೇಂದ್ರದಿಂದ 1.5 ಲಕ್ಷ ಬರುತ್ತೆ ಜಿಎಸ್ ಟಿ ಹಾಕಿ 1.3 ಲಕ್ಷ ವಾಪಸ್ ಬರುತ್ತೆ. ಬಡವರ ಬಳಿ ಹಣ ಪಡೆದ್ರೆ ಒಳ್ಳೆಯದಾಗುತ್ತಾ. ಬಿಆರ್ ಪಾಟೀಲ್ ಕರೆದು ಮಾತನಾಡುತ್ತೇನೆ ಎಂದು ಸಚಿವ ಜಮೀರ್ ತಿಳಿಸಿದರು.
Key words: money, house, BR Patil, allegations, Minister, Jameer
The post ಹಣ ಪಡೆದು ಮನೆ ಕೊಟ್ರೆ ಒಳ್ಳೆಯದಾಗುತ್ತಾ: ಬಿಆರ್ ಪಾಟೀಲ್ ಆರೋಪ ಬಗ್ಗೆ ತನಿಖೆಯಾಗಲಿ- ಸಚಿವ ಜಮೀರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.