ಬೆಂಗಳೂರು,ಜೂನ್,17,2025 (www.justkannada.in): ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ದ ಪ್ರತಿಭಟನೆಗೆ ಮುಂದಾಗಿರುವ ಬಿಜೆಪಿ ವಿರುದ್ದ ಡಿಸಿಎಂ ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಬಿಜೆಪಿಯವರು ಹೆಣದ ಮೇಲೆ ರಾಜಕೀಯ ಮಾಡುತ್ತಿದ್ದಾರೆ. ಅವರನ್ನ ಕೂಡ ಹೆಗಲ ಮೇಲೆ ಹೊರೋಣ. ಅವರು ಹೆಣದ ಮೇಲೆ ರಾಜಕೀಯ ಬಿಟ್ಟು ಇನ್ನೇನು ಮಾಡಿದ್ದಾರೆ. ನಾನು ಕೂಡ ಗುಜರಾತ್ ನ ಅಹಮದಾಬಾದ್ ಹೋಗಿದ್ದೆ. ನಾನು ಯಾವತ್ತೂ ಕೇಂದ್ರ ಸರ್ಕಾರವನ್ನ ದೂಷಿಸಲ್ಲ ಎಂದರು
ಬಿಜೆಪಿ ಪ್ರತಿಭಟನೆಗೆ ಸಾಮಾಜಿಕ ಕಾರ್ಯಕರ್ತರು ಸಹಕಾರ ನೀಡಲ್ಲ. ಕಾಲ್ತುಳಿತ ಪ್ರಕರಣದಲ್ಲಿ ಸರ್ಕಾರ ಸರಿಯಾದ ಕ್ರಮ ತೆಗೆದುಕೊಂಡಿದೆ. ಅನೇಕ ಕಡೆ ಕಾಲ್ತುಳಿತ ಆಗಿದೆ. ಅದನ್ನ ರಾಜಕೀಯವಾಗಿ ಬಳಸುತ್ತಿದ್ದಾರೆ ಎಂದು ಬಿಜೆಪಿ ವಿರುದ್ದ ಡಿಕೆ ಶಿವಕುಮಾರ್ ಕಿಡಿಕಾರಿದರು.
Key words: BJP, Politics, dead body, DCM, DK Shivakumar
The post ಹೆಣದ ಮೇಲೆ ರಾಜಕೀಯ: ಬಿಜೆಪಿ ಪ್ರತಿಭಟನೆಗೆ ಡಿಸಿಎಂ ಡಿ.ಕೆ ಶಿವಕುಮಾರ್ ಕಿಡಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.