ನವದೆಹಲಿ,ಜೂನ್,10,2025 (www.justkannada.in): ಜಾತಿಗಣತಿಗೆ ಅಪಸ್ವರಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಹೊಸದಾಗಿ ಜಾತಿಗಣತಿ ಸಮೀಕ್ಷೆಗೆ ಹೈಕಮಾಂಡ್ ಸೂಚಿಸಿದೆ. ಹೀಗಾಗಿ ಹೊಸದಾಗಿ ನಡೆಯುವ ಜಾತಿಗಣತಿಗೆ ಎಲ್ಲರೂ ಸಹಕಾರ ನೀಡಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಮನವಿ ಮಾಡಿದರು.
ಇಂದು ಹೈಕಮಾಂಡ್ ಜೊತೆ ಸಭೆ ಬಳಿಕ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಜೂನ್ 12ರಂದು ಜಾತಿಗಣತಿ ವರದಿ ಬಗ್ಗೆ ತೀರ್ಮಾನ ಮಾಡಲು ನಿಗದಿ ಆಗಿತ್ತು. ಜಾತಿಗಣತಿ ಬಗ್ಗೆ ಚರ್ಚಿಸಲು ವಿಶೇಷ ಸಂಪುಟ ಕರೆಯಲಾಗಿತ್ತು. ಜಾತಿಗಣತಿ ಬಗ್ಗೆ ಅನೇಕ ಮಠಾಧೀಶರು ವರಿಷ್ಠರನ್ನು ಭೇಟಿಯಾಗಿ ಸಂಖ್ಯೆಯ ಬಗ್ಗೆ ಆಕ್ಷೇಪ ಇದೆ ಅಂತಾ ಕೆಲವರು ಹೇಳಿದ್ದರು. ಹೀಗಾಗಿ ಅಪಸ್ವರ ಬರಬಾರದೆಂಬ ಉದ್ದೇಶದಿಂದ ಮತ್ತೆ ಜಾತಿಗಣತಿಗೆ ಸಲಹೆ ನೀಡಿದ್ದಾರೆ. ಅದ್ದರಿಂದ ಮತ್ತೆ ಜಾತಿಗಣತಿ ಸಮೀಕ್ಷೆ ಮಾಡಲು ತೀರ್ಮಾನಿಸಿದ್ದೇವೆ. ಹೊಸದಾಗಿ ನಡೆಯುವ ಜಾತಿಗಣತಿಗೆ ಎಲ್ಲರೂ ಸಹಕಾರ ನೀಡಿ ಎಂದರು.
ನಮ್ಮ ಸರ್ಕಾರದ ಬಗ್ಗೆ ಯಾರಿಗೂ ಆತಂಕ ಬೇಡ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಮೀಕ್ಷೆ ಮಾಡಲಿದ್ದೇವೆ. ಯಾವಾಗ ಸಮೀಕ್ಷೆ ಎಂದು ಸಂಪುಟ ಸಭೆ ಮಾಡಿ ಸಿಎಂ ತಿಳಿಸುತ್ತಾರೆ. ಆನ್ಲೈನ್ ಮೂಲಕವೂ ಮಾಹಿತಿ ನೀಡಲು ಅವಕಾಶ ನೀಡುತ್ತೇವೆ. ಅಪಸ್ವರ ಕೇಳಿ ಬಂದಿರುವುದಿಂದ ಮತ್ತೆ ಸಮೀಕ್ಷೆಮಾಡುತ್ತಿದ್ದೇವೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.
Key words: Everyone, cooperate, new, caste census, DCM, DK Shivakumar
The post ಹೊಸದಾಗಿ ನಡೆಯುವ ಜಾತಿಗಣತಿಗೆ ಎಲ್ಲರೂ ಸಹಕಾರ ನೀಡಿ- ಡಿಸಿಎಂ ಡಿಕೆ ಶಿವಕುಮಾರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.