ಬೆಂಗಳೂರು,ಆಗಸ್ಟ್,27,2026 (www.justkannada.in): ಆಸ್ತಿ ಉಯಿಲಿನ ಸಾಕ್ಷಿಯೊಬ್ಬರನ್ನು ಪೊಲೀಸರು ಬಂಧಿಸಿದ ಹಿನ್ನೆಲೆ, ಬಂಧನವನ್ನು ಕಾನೂನು ಬಾಹಿರ ಎಂದು ಘೋಷಿಸಿದ ಹೈಕೋರ್ಟ್ ಈ ಸಂಬಂಧ ವೈಟ್ ಫೀಲ್ಡ್ ಪೊಲೀಸ್ ಠಾಣೆಯ ತನಿಖಾಧಿಕಾರಿಗೆ 3 ಲಕ್ಷ ರೂ. ದಂಡ ವಿಧಿಸಿದೆ.
ಆಸ್ತಿ ಉಯಿಲಿನ ಸಾಕ್ಷಿ ಕೆಎನ್ ಮೋಹನ್ ರೆಡ್ಡಿ ಬಂಧನ ಕಾನೂನು ಬಾಹಿರಬವೆಂದು ಆದೇಶಿಸಿದ ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠವು, ವೈಟ್ ಫೀಲ್ಡ್ ತನಿಖಾಧಿಕಾರಿ ಸುನೀಲ್ ಮತ್ತು ಎಸಿಬಿ ಡಿಸಿಪಿಗೆ ತರಾಟೆಗೆ ತೆಗದುಕೊಂಡು ಕಾನೂನು ಬಾಹಿರ ಬಂಧನಗಳನ್ನ ನಿಲ್ಲಿಸಲು ಸೂಚಿಸಿತು. 
ಆಗಸ್ಟ್ 27ಕ್ಕೆ ಹಾಜರಾಗಲು ನೋಟಿಸ್ ಕೊಟ್ಟು ಆಗಸ್ಟ್ 25ರಂದೇ ಬಂಧನ. ಮಾಡಿದ್ದೀರಿ. ಯಾವುದೇ ಕಾರಣಗಳಿಲ್ಲದ್ದಿದ್ದರೂ ಬಂಧಿಸುವ ಚಾಳಿ ಶುರುವಾಗಿದೆ. ಬಂಧಿಸುವುದು ಪೊಲೀಸರಿಗೆ ತಮಾಷೆಯಾಗಿದೆಯಾ? ದೂರುದಾರ ಪ್ರಭಾವಿಯಾಗಿದ್ದರೆ ಸಾಕು ಬಂಧಿಸುತ್ತೀರಾ? ಕೊಲೆಯಂತಹ ಕೇಸ್ ತನಿಖೆ ಬಿಟ್ಟು ಸಿವಿಲ್ ವ್ಯಾಜ್ಯ ಹಿಂದೆ ಬಿದ್ದಿದ್ದೀರಾ? ಇಲ್ಲಿ ಕಾನೂನಿನ ಆಡಳಿತವಿಲ್ಲ. ಪೊಲೀಸ್ ರಾಜ್ಯವಾಗುವುದನ್ನ ತಪ್ಪಿಸಿ ಇಲ್ಲವಾದರೇ ಉಕ್ಕಿನ ಕೈಗಳಿಂದ ನಿಲ್ಲಿಸಬೇಕಾಗುತ್ತದೆ ಎಂದು ನ್ಯಾಯಪೀಠ ಎಚ್ಚರಿಕೆ ನೀಡಿತು.
ಅಲ್ಲಿ ಇಲ್ಲಿ ಒಳ್ಳೆ ಕೆಲಸ ಮಾಡುತ್ತಾರೆಂದು ಬಿಟ್ಟಿದ್ದೇವೆ. ಸಿವಿಲ್ ಕೇಸ್ ನಲ್ಲಿ ಪೊಲೀಸರ ಮಧ್ಯಪ್ರವೇಶವೇಕೆ? ಉನ್ನತ ಅದಿಕಾರಿಗಳ ಒತ್ತಡದಿಂದ ಬಂಧಿಸಿದ್ದಾರಾ? ಎಸಿಪಿ, ಡಿಸಿಪಿ ಏನು ಮಾಡುತ್ತಿದ್ದಾರೆ? ನಿರ್ಲಕ್ಷ್ಯಕ್ಕೆ ಯಾರು ಹೊಣೆ? ಎಂದು ಕ್ಲಾಸ್ ತೆಗೆದುಕೊಂಡ ನ್ಯಾಯಪೀಠವು, ಆಸ್ತಿ ಉಯಿಲಿನ ಸಾಕ್ಷಿ ಬಂಧನ ಕಾನೂನು ಬಾಹಿರವೆಂದು ಘೋಷಿಸಿತು. ಹಾಗೆಯೇ ತನಿಖಾಧಿಕಾರಿ ಉನ್ನತಾಧಿಕಾರಿಗಳ ಜೇಬಿನಿಂದ 3 ಲಕ್ಷ ದಂಡ ಭರಿಸಲು ಆದೇಶ ಹೊರಡಿಸಿತು.
Key words: arrest, witness, property will, High Court, imposes, fine
The post ಆಸ್ತಿ ಉಯಿಲಿನ ಸಾಕ್ಷಿ ಬಂಧನ ಹಿನ್ನೆಲೆ: ತನಿಖಾಧಿಕಾರಿಗೆ 3 ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




