ಬೆಂಗಳೂರು,ಜುಲೈ,2,2026 (www.justkannada.in): ಬೆಂಗಳೂರು ದಕ್ಷಿಣ ಜಿಲ್ಲೆಯ ಮಾದಪಟ್ಟಣದಲ್ಲಿ ಕಲ್ಲುಕ್ವಾರಿಯಲ್ಲಿ ಬಂಡೆ ಕುಸಿದು 7 ಮಂದಿ ಕಾರ್ಮಿಕರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ಸಾವಿನ ಹೊಣೆಯನ್ನ ಸರ್ಕಾರವೇ ಹೊರಬೇಕು ಎಂದಿದ್ದಾರೆ.
ಈ ಕುರಿತು ಮಾತನಾಡಿದ ಸಿ.ಟಿ ರವಿ ನಿನ್ನೆಯೂ ದುರಂತ ಆಗಿತ್ತು. ಇವತ್ತೂ ಆಗಿದೆ. ತಕ್ಷಣ ಪರಿಹಾರ ಘೋಷಣೆಗೆ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಗಣಿಗಾರಿಕೆ ನಡೆಯುವ ವೇಳೆ ನಿಯಮ ಉಲ್ಲಂಘನೆಯಾಗಿದೆ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಬೇಕು ಆಳುವವರ ಕುಮ್ಮಕ್ಕು ಇಲ್ಲದೆ ಇದು ನಡೆಯಲ್ಲ ಎಂದಿದ್ದಾರೆ.
ಗಣಿಗಾರಿಕೆ ನಡೆಯುವ ವೇಳೆ ನಿಯಮ ಉಲ್ಲಂಘನೆಯಾಗಿದೆ. ಕಾರ್ಮಿಕರ ಸಾವಿನ ಹೊಣೆ ಸರ್ಕಾರವೇ ಹೊರಬೇಕು. ಕೂಡಲೇ ಕ್ವಾರಿ ಮಾಲೀಕನನ್ನು ಬಂಧಿಸಿ ಎಂದು ಸಿ.ಟಿ ರವಿ ಒತ್ತಾಯಿಸಿದ್ದಾರೆ.
Key words: government, workers, deaths, MLC, C.T. Ravi
The post ಕಾರ್ಮಿಕರ ಸಾವಿನ ಹೊಣೆ ಸರ್ಕಾರವೇ ಹೊರಬೇಕು- MLC ಸಿ.ಟಿ ರವಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




