2
June, 2026

A News 365Times Venture

2
Tuesday
June, 2026

A News 365Times Venture

ಗ್ರಾಮೀಣ ಪತ್ರಕರ್ತರ ಬಸ್ ಪಾಸ್ ಷರತ್ತುಗಳನ್ನು ಸರಳೀಕರಣ ಮಾಡಿ ಆದೇಶ: KUWJ ಸ್ವಾಗತ

Date:

ಬೆಂಗಳೂರು,ಜೂನ್,2,2026 (www.justkannada.in):  ಗ್ರಾಮೀಣ ಪತ್ರಕರ್ತರ ಉಚಿತ ಬಸ್ ಪಾಸ್ ಯೋಜನೆ ಜಾರಿಗೆ ಅಡ್ಡಿಯಾಗಿದ್ದ ಕಠಿಣ ಷರತ್ತುಗಳನ್ನು ತೆಗೆದು, ನಿಯಮಾವಳಿ ಸರಳೀಕರಣ ಮಾಡಿ ಸರ್ಕಾರ ಆದೇಶ ಹೊರಡಿಸಿದ್ದು, ಕೆಯುಡಬ್ಲ್ಯೂಜೆ ಸ್ವಾಗತಿಸಿದೆ.

ಬೀದರನಲ್ಲಿ ನಡೆದ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ಒತ್ತಾಯಕ್ಕೆ ಸ್ಪಂದಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅದೇ ವೇದಿಕೆಯಲ್ಲಿ ಕಠಿಣ ಷರತ್ತುಗಳನ್ನು ಕೈಬಿಡುವುದಾಗಿ ಭರವಸೆ ನೀಡಿದ್ದರು.

ಸರ್ಕಾರಕ್ಕೆ ಮೂರು ವರ್ಷ ತುಂಬಿದಾಗ ಕೆಯುಡಬ್ಲ್ಯೂಜೆ ಏರ್ಪಡಿಸಿದ್ದ ಸಂವಾದದಲ್ಲಿ ಭಾಗವಹಿಸಿದ್ದ ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರು ಈ ಬಗ್ಗೆ ವಾರದೊಳಗೆ ಕ್ರಮ ವಹಿಸುವುದಾಗಿ ತಿಳಿಸಿದ್ದರು. ಸಿಎಂ ಸೂಚನೆ ಮೇರೆಗೆ ಹೊಸ ಆದೇಶ ಹೊರಬಿದ್ದಿದೆ.

ಪೂರ್ಣಾವಧಿಗೆ ಸೀಮಿತವಾಗಿದ್ದನ್ನು ಬದಲಿಸಿ, ಅರೆಕಾಲಿಕ ವರದಿಗಾರರಿಗೂ ಯೋಜನೆ ವಿಸ್ತರಿಸಲಾಗಿದೆ. ಸೌಲಭ್ಯ ಪಡೆಯಲು 11 ತಿಂಗಳ ಲೈನೇಜ್ ಪಡೆದಿರುವ ಬ್ಯಾಂಕ್ ಸ್ಟೇಟ್ ಮೆಂಟ್ ಕಡ್ಡಾಯವಾಗಿದ್ದನ್ನು ಷರತ್ತಿನಲ್ಲಿ ಕೈಬಿಡಲಾಗಿದೆ.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ಸತತ ಹೋರಾಟಕ್ಕೆ ಸ್ಪಂದಿಸಿ ಬೇಡಿಕೆ ಈಡೇರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ (ಭಾವಿ ಸಿಎಂ) ಡಿ.ಕೆ.ಶಿವಕುಮಾರ್ ಅವರು ಈ ನಿಟ್ಟಿನಲ್ಲಿ ಸತತವಾಗಿ ಸ್ಪಂಧಿಸಿದ ಸಿಎಂ ಮಾಧ್ಯಮ ಸಲಹೆಗಾರಕೆ.ವಿ.ಪ್ರಭಾಕರ್ ಅವರಿಗೆ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಅಭಿನಂದನೆ ಸಲ್ಲಿಸಿದ್ದಾರೆ.

Key words: simplify, bus pass, rural journalists,  KUWJ

The post ಗ್ರಾಮೀಣ ಪತ್ರಕರ್ತರ ಬಸ್ ಪಾಸ್ ಷರತ್ತುಗಳನ್ನು ಸರಳೀಕರಣ ಮಾಡಿ ಆದೇಶ: KUWJ ಸ್ವಾಗತ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಚಾಮರಾಜನಗರದಲ್ಲಿ ಜಯದೇವದಿಂದ ವಾರಕ್ಕೊಮ್ಮೆ ಹೃದಯ ತಪಾಸಣೆಗೆ ಚಿಂತನೆ -ಡಾ. ಬಿ. ದಿನೇಶ್

ಮೈಸೂರು, ಜೂನ್,2,2026 (www.justkannada.in):  ಜಯದೇವ ಹೃದ್ರೋಗ ಸಂಸ್ಥೆಯಿಂದ ಚಾಮರಾಜನಗರ ವೈದ್ಯಕೀಯ ಕಾಲೇಜು...

IPLಗೂ ಡಾ. ರಾಜ್ ಕುಟುಂಬಕ್ಕೂ ವಿಶೇಷ ನಂಟು? ಕಾಕತಾಳೀಯವಾದರೂ ಕುತೂಹಲ ಮೂಡಿಸಿದ ಸಂಗತಿಗಳು!

  ಬೆಂಗಳೂರು, ಜೂ.೦೨,೨೦೨೬: ಕ್ರಿಕೆಟ್ ಅಭಿಮಾನಿಗಳ ಹಬ್ಬವೆಂದೇ ಕರೆಯಲಾಗುವ ಐಪಿಎಲ್‌ ಟ್ರೋಫಿ ಗೆಲುವಿನ...

“ಗಂಭೀರ ನೋಟ, ಸರಳ ಉಡುಗೆ: ನಟ ದರ್ಶನ್ ಅವರ ಹೊಸ ಫೋಟೋ ವೈರಲ್”

ಬೆಂಗಳೂರು,ಜೂನ್,3,2026 (www.justkannada.in):  ಕನ್ನಡ ಚಿತ್ರರಂಗದ ನಟ ದರ್ಶನ್ ಅವರ ಹೊಸ ಫೋಟೋ...

‘ಲಕ್ಸುರಿ ಸಿಎಂ’ ಡಿಕೆಶಿ? ಬ್ರ್ಯಾಂಡ್‌ ಗಳ ಮೇಲಿನ ಪ್ರೀತಿ ಮತ್ತೆ ಸುದ್ದಿಯಲ್ಲಿ

ಬೆಂಗಳೂರು.ಜೂನ್,6,2026 (www.justkannada.in): ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿಸಲಾಗುತ್ತಿರುವ ಡಿ.ಕೆ. ಶಿವಕುಮಾರ್...