ಬೆಂಗಳೂರು.ಜೂನ್,6,2026 (www.justkannada.in): ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿಸಲಾಗುತ್ತಿರುವ ಡಿ.ಕೆ. ಶಿವಕುಮಾರ್ ಅವರು ಮತ್ತೊಮ್ಮೆ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ಆದರೆ ಈ ಬಾರಿ ರಾಜಕೀಯ ಕಾರಣಕ್ಕೆ ಅಲ್ಲ… ಅವರ ಐಷಾರಾಮಿ ಜೀವನಶೈಲಿಗಾಗಿ!
ಪ್ರಮುಖ ಆರ್ಥಿಕ ಪತ್ರಿಕೆ ಇಕನಾಮಿಕ್ ಟೈಮ್ಸ್ ಪ್ರಕಟಿಸಿರುವ ವರದಿಯ ಪ್ರಕಾರ, ಡಿಕೆ ಶಿವಕುಮಾರ್ ಅವರು Prada, Gucci, Louis Vuitton, Ferragamo, Burberry ಮತ್ತು Fendi ಸೇರಿದಂತೆ ವಿಶ್ವದ ಖ್ಯಾತ ಐಷಾರಾಮಿ ಬ್ರ್ಯಾಂಡ್ ಗಳ ಉಡುಪು ಹಾಗೂ ಆಭರಣಗಳನ್ನು ಬಳಸುತ್ತಾರೆ.
ವಿಶೇಷವಾಗಿ ಅವರ ಸಿಗ್ನೇಚರ್ ಸ್ಟೈಲ್ ಆಗಿರುವ ಬಣ್ಣ ಬಣ್ಣದ ಸ್ಕಾರ್ಫ್ ಗಳು ಮತ್ತು ದುಬಾರಿ ವಾಚ್‌ಗಳು ರಾಜಕೀಯ ವಲಯದಲ್ಲಿ ಸಾಕಷ್ಟು ಗಮನ ಸೆಳೆದಿವೆ. ಸರಳತೆಯ ರಾಜಕೀಯದ ನಡುವೆ, ಡಿಕೆಶಿ ತಮ್ಮ ಐಷಾರಾಮಿ ಅಭಿರುಚಿಯನ್ನು ಎಂದಿಗೂ ಮರೆಮಾಚಿಲ್ಲ ಎಂಬುದು ಗಮನಾರ್ಹ.
ಒಮ್ಮೆ ತಮ್ಮ ದುಬಾರಿ ವಾಚ್ ಕುರಿತು ಕೇಳಲಾದ ಪ್ರಶ್ನೆಗೆ, “ನಾನು ಇಷ್ಟಪಟ್ಟ ವಾಚ್ ಧರಿಸುವ ಹಕ್ಕು ನನಗಿಲ್ಲವೇ?” ಎಂದು ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದರು.
2023ರ ಚುನಾವಣಾ ಅಫಿಡವಿಟ್ ಪ್ರಕಾರ, ಡಿಕೆ ಶಿವಕುಮಾರ್ ಕುಟುಂಬದ ಒಟ್ಟು ಆಸ್ತಿ ಮೌಲ್ಯ 1,400 ಕೋಟಿ ರೂಪಾಯಿಗೂ ಅಧಿಕವಾಗಿದೆ. ರಿಯಲ್ ಎಸ್ಟೇಟ್, ಶಿಕ್ಷಣ ಸಂಸ್ಥೆಗಳು, ಮೂಲಸೌಕರ್ಯ ಮತ್ತು ಕ್ವಾರಿ ಉದ್ಯಮ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅವರ ಹೂಡಿಕೆಗಳಿವೆ.
ರಾಜಕೀಯ ನಾಯಕರಲ್ಲಿ ಸಾಮಾನ್ಯವಾಗಿ ಕಾಣದ ಐಷಾರಾಮಿ ಫ್ಯಾಷನ್ ಮತ್ತು ಬ್ರ್ಯಾಂಡ್ ಪ್ರಿಯತೆಯ ಮೂಲಕ ಡಿಕೆ ಶಿವಕುಮಾರ್ ತಮ್ಮದೇ ಆದ ವಿಶಿಷ್ಟ ಇಮೇಜ್ ಕಟ್ಟಿಕೊಂಡಿದ್ದಾರೆ. ಇದೀಗ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ಸಜ್ಜಾಗಿರುವ ಅವರು, ರಾಜಕೀಯದ ಜೊತೆಗೆ ತಮ್ಮ ಸ್ಟೈಲ್‌ನಿಂದಲೂ ದೇಶದ ಗಮನ ಸೆಳೆಯುತ್ತಿದ್ದಾರೆ.
ENGLISH SUMMARY..
DK Shivakumar’s Luxury Style in Spotlight as He Prepares to Take Over as Karnataka CM
As Karnataka’s next Chief Minister, D. K. Shivakumar has once again drawn national attention—not just for politics, but also for his luxurious lifestyle and fashion choices.
According to media reports, Shivakumar is known for wearing premium international brands such as Prada, Gucci, Louis Vuitton (LV), Ferragamo, Burberry, and Fendi. His signature scarves, designer accessories, and luxury watches have become a part of his public image.
Unlike many politicians who project a simple lifestyle, Shivakumar has never shied away from displaying his taste for high-end fashion. Responding to criticism in the past, he reportedly defended his choice of luxury watches and accessories, saying he has the right to wear what he likes.
Election affidavits filed in 2023 showed that Shivakumar and his family possess assets worth over ₹1,400 crore, making him one of India’s wealthiest politicians. His wealth is spread across sectors including real estate, infrastructure, education, and quarrying.
Political observers say Shivakumar’s luxury style has evolved into a distinct political brand, setting him apart from many of his contemporaries. As he steps into the Chief Minister’s office, his combination of political influence and high-profile lifestyle continues to attract public attention.
Key words: DK Shivakumar, Luxury Style, Spotlight, Karnataka CM
The post ‘ಲಕ್ಸುರಿ ಸಿಎಂ’ ಡಿಕೆಶಿ? ಬ್ರ್ಯಾಂಡ್ ಗಳ ಮೇಲಿನ ಪ್ರೀತಿ ಮತ್ತೆ ಸುದ್ದಿಯಲ್ಲಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




