ಬೆಂಗಳೂರು,ಏಪ್ರಿಲ್,9,2026 (www.justkannada.in): ಇಂದು 2025-26ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಶೇ.86 ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ.
ಈ ನಡುವೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹಲವು ವಿದ್ಯಾರ್ಥಿಗಳು ರಾಜ್ಯಕ್ಕೆ ಟಾಪರ್ ಆಗಿದ್ದಾರೆ. ಕಲಾವಿಭಾಗದಲ್ಲಿ ವಿಜಯನಗರ ಕೊಟ್ಟೂರಿನ ಇಂದು ಪಿಯು ಕಾಲೇಜಿನ ವಿದ್ಯಾರ್ಥಿನಿಯರಾದ ಅರ್ಚನಾ ಮತ್ತು ಸಂಗೀತ 600 ಅಂಕಗಳಿಗೆ 598 ಮಾರ್ಕ್ಸ್ ಪಡೆದು ಟಾಪರ್ ಆಗಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ದಕ್ಷಿಣ ಕನ್ನಡ ಅಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ದಿಶಾ 600ಕ್ಕೆ 600 ಅಂಕ ಗಳಿಸಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಮಂಗಳೂರಿನ ಎಕ್ಸ್ ಪರ್ಟ್ ಕಾಲೇಜಿನ ವಿದ್ಯಾರ್ಥಿಗಳಾದ ಶಮನ್ಯು ಎಸ್ ಶೆಟ್ಟಿ, ನಂದನ್ ನಾಯಕ್ ಇಬ್ಬರು 600ಕ್ಕೆ 598 ಅಂಕಗಳನ್ನ ಗಳಿಸಿ ಟಾಪರ್ ಆಗಿದ್ದಾರೆ.
Key words: Second PU, Result, toppers, state
The post ದ್ವಿತೀಯ ಪಿಯು ಫಲಿತಾಂಶ: ರಾಜ್ಯಕ್ಕೆ ಇವರೇ ಟಾಪರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




