15
April, 2026

A News 365Times Venture

15
Wednesday
April, 2026

A News 365Times Venture

ಪ್ರೀತಿಸಿ ಬಳಿಕ ಮದುವೆಯಾಗದೆ ಶಿಕ್ಷಕಿಗೆ ವಂಚನೆ ಆರೋಪ: ಇಂಜಿನಿಯರ್ ವಿರುದ್ಧ ಪ್ರಕರಣ ದಾಖಲು

Date:

ರಾಯಚೂರು,ಏಪ್ರಿಲ್,11,2026 (www.justkannada.in): ಪ್ರೀತಿಸಿ ಬಳಿಕ ಮದುವೆಯಾಗದೆ ಶಿಕ್ಷಕಿಗೆ ವಂಚನೆ ಮಾಡಿದ ಆರೋಪದ ಮೇಲೆ ಇಂಜಿನಿಯರ್ ವಿರುದ್ಧ ರಾಯಚೂರಿನಲ್ಲಿ ಪ್ರಕರಣ ದಾಖಲಾಗಿದೆ.

ರಾಯಚೂರು ಜಿಲ್ಲೆಯ ದೇವದುರ್ಗ ಮೂಲದ ಇಂಜಿನಿಯರ್ ಮಲ್ಲಿಕಾರ್ಜುನ್ ವಿರುದ್ಧ ಶಿಕ್ಷಕಿ ದೂರು ನೀಡಿದ್ದಾರೆ. ಕಾಲೇಜು ದಿನಗಳಿಂದಲೂ ಯುವತಿ ಹಾಗೂ ಮಲ್ಲಿಕಾರ್ಜುನ ಇಬ್ಬರೂ ಪ್ರೀತಿಸುತ್ತಿದ್ದರು. ಪ್ರೀತಿ-ಪ್ರೇಮ ಎಂದು ಸುಮಾರು ವರ್ಷಗಳ ಕಾಲ ಈ ಜೋಡಿ ಒಟ್ಟಾಗಿ ಓಡಾಡಿದ್ದು,  ಅಲ್ಲದೇ ಮಲ್ಲಿಕಾರ್ಜುನ್ ಯುವತಿಯೊಂದಿಗೆ ಹಲವು ಬಾರಿ ಬಲವಂತವಾಗಿ ದೈಹಿಕ ಸಂಪರ್ಕವನ್ನೂ ಬೆಳೆಸಿದ್ದ ಎಂಬ ಆರೋಪ ಕೇಳಿ ಬಂದಿದೆ.

ಇದೀಗ ಈಗ ಜಾತಿ ನೆಪ ಹೇಳಿ ವಿವಾಹವಾಗಲು ನಿರಾಕರಿಸಿ ವಂಚನೆ ಮಾಡಿದ್ದಾನೆ ಎಂದು ಸಂತ್ರಸ್ತ ಶಿಕ್ಷಕಿ ಮಲ್ಲಿಕಾರ್ಜುನ್ ವಿರುದ್ಧ ರಾಯಚೂರು ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದಾರೆ. ಆತನ ಜೊತೆ ಓಡಡಿರುವ ಫೋಟೋ, ವಿಡಿಯೋ, ಆಡೀಯೋ, ಸಂದೇಶಗಳನ್ನು ದೂರಿನಲ್ಲಿ ಸಲ್ಲಿಕೆ ಮಾಡಿದ್ದಾರೆ. ಇಂಜಿನಿಯರ್ ಮಲ್ಲಿಕಾರ್ಜುನ್ ವಿರುದ್ಧ ಮಹಿಳಾ ಠಾಣೆಯಲ್ಲಿ ಎಫ್‌ ಐಆರ್ ದಾಖಲಾಗಿದೆ.

Key words: Case filed, against, engineer ,cheating teacher

The post ಪ್ರೀತಿಸಿ ಬಳಿಕ ಮದುವೆಯಾಗದೆ ಶಿಕ್ಷಕಿಗೆ ವಂಚನೆ ಆರೋಪ: ಇಂಜಿನಿಯರ್ ವಿರುದ್ಧ ಪ್ರಕರಣ ದಾಖಲು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಬೆಂಗಳೂರಿಗರ ಪಾಲಿಗೆ ಮರೀಚಿಕೆಯಾದ ಎ-ಖಾತೆ: ‘ಕೈ’ ಸರ್ಕಾರದ ಆಡಳಿತಕ್ಕೆ ಹಿಡಿದ ಕೈಗನ್ನಡಿ- ಆರ್ ಅಶೋಕ್

ಬೆಂಗಳೂರು,ಏಪ್ರಿಲ್,14,2026 (www.justkannada.in): ಬೆಂಗಳೂರಿನ ಸುಮಾರು 8.25 ಲಕ್ಷ ಬಿ-ಖಾತಾ ಆಸ್ತಿಗಳನ್ನು ಎ-ಖಾತಾವಾಗಿ...

ಸಿಎಂ ರಾಜಕೀಯ ಕಾರ್ಯದರ್ಶಿ ರಾಜೀನಾಮೆ:  ವರಿಷ್ಠರೇ ಇದಕ್ಕೆ ಸ್ಪಷ್ಟನೆ ಕೊಡಬೇಕು- ಸಚಿವ ಸತೀಶ್ ಜಾರಕಿಹೊಳಿ

ಬೆಳಗಾವಿ,ಏಪ್ರಿಲ್,14,2026 (www.justkannada.in):  ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಜೀರ್ ಅಹ್ಮದ್ ಬಿಡುಗಡೆಗೊಳಿಸಿದ...

ಡಾ.ಬಿ.ಆರ್ ಅಂಬೇಡ್ಕರ್ ರಚಿಸಿದ ಸಂವಿಧಾನದಿಂದಲೇ ರಾಜ್ಯದ ಸಿಎಂ ಆಗಿದ್ದೇನೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಏಪ್ರಿಲ್ ,14,2026 (www.justkannada.in):  ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ...

ಹಿರಿಯ ಶಾಸಕರ ಜೊತೆ ಐವರು ಹೊಸ ಶಾಸಕರಿಗೂ ಸಚಿವ ಸ್ಥಾನ ನೀಡಲಿ- ಕಾಂಗ್ರೆಸ್ ಶಾಸಕ ಆಗ್ರಹ

ದಾವಣಗೆರೆ,ಏಪ್ರಿಲ್,14,2026 (www.justkannada.in): ಸಚಿವ ಸಂಪುಟ ಪುನಾರಚನೆಗೆ ಆಗ್ರಹಿಸಿ ಹಿರಿಯ ಶಾಸಕರು ಹೈಕಮಾಂಡ್...