ಬೆಂಗಳೂರು,ಜೂನ್,12,2026 (www.justkannada.in): ಬಿಡದಿ ಟೌನ್ ಶಿಪ್ ಗೆ ಇದೀಗ ಸರ್ಕಾರ ಅಂತಿಮ ನೋಟಿಫಿಕೇಷನ್ ಹೊರಡಿಸಿದ್ದು ಟೌನ್ ಶಿಪ್ ಗೆ ವಿರೋಧಿಸಿ ಪ್ರತಿಭಟಿಸುತ್ತಿರುವ ರೈತರ ಮೇಲೆ ಎಫ್ ಐಆರ್ ಹಾಕುತ್ತಿದ್ದಾರೆ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಈ ಕುರಿತು ಮಾತನಾಡಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, 2006ರಲ್ಲಿ ಐದು ಟೌನ್ ಶಿಪ್ ಮಾಡಬೇಕೆಂದು ನಿರ್ಧಾರ ಮಾಡಿದ್ದೆ.ಇದಕ್ಕೆ ರೈತರು ವಿರೋಧ ಮಾಡಿದ್ದರಿಂದ ಯೋಜನೆ ಸ್ಥಗಿತಗೊಳಿಸಿದೆ. ರೈತರ ಭಾವನೆಗೆ ಬೆಲೆಕೊಟ್ಟು ಸ್ಥಗಿತ ಮಾಡಿದೆ. ಇದೀಘ ಸರ್ಕಾರ ಅಂತಿಮ ನೋಟಿಫಿಕೇಷನ್ ಹೊರಡಿಸಿದೆ.
ಟೌನ್ ಶಿಪ್ ವಿರೋಧಿಸಿ 470 ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆ ಮಾಡಲು ಹೊರಟಿರುವ ರೈತರ ಮೇಲೆ ಎಫ್ ಐಆರ್ ಹಾಕುತ್ತಿದ್ದಾರೆ. ಶಾಂತಿಯುತ ಪ್ರತಿಭಟನೆ ಮಾಡುವವರ ಮೇಲೆ ಪೊಲೀಸ್ ದೌರ್ಜನ್ಯ ನಡೆಯುತ್ತಿದೆ. ರೈತ ವಿರೋಧಿ ನೀತಿ ಅನುಸರಿಸುತ್ತಿರುವ ಜನಪ್ರತಿನಿಧಿಗಳು ಸೇರಿಕೊಂಡಿದ್ದಾರೆ ಎಂದು ಹೆಚ್ ಡಿಕೆ ಕಿಡಿ ಕಾರಿದರು.
Key words: Notification, Bidadi, Township, Union Minister, HDK
The post ಬಿಡದಿ ಟೌನ್ ಶಿಪ್ ಗೆ ಅಧಿಸೂಚನೆ: ಸರ್ಕಾರದ ವಿರುದ್ದ ಕೇಂದ್ರ ಸಚಿವ HDK ಕಿಡಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




