14
June, 2026

A News 365Times Venture

14
Sunday
June, 2026

A News 365Times Venture

ಬಿಡದಿ ಟೌನ್​ ಶಿಪ್​​​ ಗೆ​ ಅಂತಿಮ ಅಧಿಸೂಚನೆ ಪ್ರಕಟಿಸಿದ ಸರ್ಕಾರ

Date:

ಬೆಂಗಳೂರು, ಜೂನ್, 12,2026 (www.justkannada.in): ರಾಜ್ಯ ಸರ್ಕಾರವು  ಬಿಡದಿ ಟೌನ್ ಶಿಪ್‌ ಗೆ ಅಂತಿಮ ಅಧಿಸೂಚನೆ ಪ್ರಕಟಿಸಿದೆ.

ರೈತರ ವಿರೋಧದ ನಡುವೆಯೂ ನಗರಾಭಿವೃದ್ಧಿ ಇಲಾಖೆ ಅಂತಿಮ ಅಧಿಸೂಚನೆ ಹೊರಡಿಸಿದ್ದು, ಈ ಯೋಜನಾ ವ್ಯಾಪ್ತಿಯ 9 ಕಂದಾಯ ಗ್ರಾಮಗಳ ಪೈಕಿ ಪ್ರಾರಂಭಿಕವಾಗಿ 3 ಗ್ರಾಮಗಳ 519 ಎಕರೆ ಭೂಸ್ವಾಧೀನಕ್ಕೆ ನಿರ್ಧರಿಸಲಾಗಿದೆ.  ಮೊದಲ ಹಂತದ ಭೂ ಸ್ವಾಧೀನ ರಾಮನಗರ ಹಾಗೂ ಹಾರೋಹಳ್ಳಿ ತಾಲ್ಲೂಕು ವ್ಯಾಪ್ತಿಯಲ್ಲಿ ನಡೆಯಲಿದ್ದು, ಪ್ರತಿ ಎಕರೆಗೆ 2.07 ಕೋಟಿಯಿಂದ 2.50 ಕೋಟಿ ರೂಪಾಯಿವರೆಗೂ ದರ ನಿಗದಿ ಮಾಡಲಾಗಿದೆ.ಅಥವಾ ಶೇ.50ರಷ್ಟು ಅಭಿವೃದ್ಧಿ ಪಡಿಸಿರುವ ಭೂಮಿ ನೀಡಲು ಆದೇಶಿಸಲಾಗಿದೆ.

ಕೆಂಪಯ್ಯನಪಾಳ್ಯದ 384 ಎಕರೆ 22 ಗುಂಟೆ, ಮಂಡಲಹಳ್ಳಿಯ 71 ಎಕರೆ 13 ಗುಂಟೆ ಹಾಗೂ ವಡೇರಹಳ್ಳಿಯ 63 ಎಕರೆ 10 ಗುಂಟೆ ಭೂಸ್ವಾಧೀನಕ್ಕೆ ಅಧಿಸೂಚನೆಯಲ್ಲಿ ಪ್ರಕಟಿಸಿದೆ.

ಸರ್ಕಾರವು ಒಟ್ಟು 754 ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಿದ್ದು. ಈ ರೈತರಿಗೆ ತಮ್ಮ ಭೂಮಿಗೆ ಸಂಬಂಧಿಸಿದ ಎಲ್ಲಾ ಸೂಕ್ತ ದಾಖಲೆಗಳನ್ನು ಸಲ್ಲಿಸಿ, ನಿರ್ದಿಷ್ಟ ಸಮಯದಲ್ಲಿ ಪರಿಹಾರವನ್ನು ಪಡೆಯಲು ಸೂಚಿಸಲಾಗಿದೆ.

Key words: Government, final notification, Bidadi, Township

The post ಬಿಡದಿ ಟೌನ್​ ಶಿಪ್​​​ ಗೆ​ ಅಂತಿಮ ಅಧಿಸೂಚನೆ ಪ್ರಕಟಿಸಿದ ಸರ್ಕಾರ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಜವಾಬ್ದಾರಿ ವಹಿಸುವಾಗ ಸ್ಪಷ್ಟತೆ ಇರಬೇಕು- ಮುಂದುವರೆದ ಸಚಿವ ಕೃಷ್ಣಭೈರೇಗೌಡರ ಅಸಮಾಧಾನ?

ಬೆಂಗಳೂರು,ಜೂನ್,13,2026 (www.justkannada.in): ಖಾತೆ ಹಂಚಿಕೆಯಾದರೂ ಸಚಿವರ ಮುನಿಸು ಮುಂದುವರೆದಿದ್ದು  ಈ ಮಧ್ಯೆ...

ಬಿಡದಿ ಟೌನ್ ಶೀಪ್ ಯೋಜನೆ ಕುಮಾರಸ್ವಾಮಿ ಅವರದ್ದೇ – ಡಿ.ಕೆ ಸುರೇಶ್

ಬೆಂಗಳೂರು,ಜೂನ್,13,2026 (www.justkannada.in):  ಬಿಡದಿಯ ಟೌನ್ ಶಿಪ್ ಯೋಜನೆಗೆ ರಾಜ್ಯ ಸರ್ಕಾರ ಅಂತಿಮ...

ನಮ್ಮ ಸಮುದಾಯಕ್ಕೆ ಮತ್ತೆರಡು ಸಚಿವ ಸ್ಥಾನ ನೀಡಿ- ಸಚಿವ ಸತೀಶ್ ಜಾರಕಿಹೊಳಿ

ಬೆಂಗಳೂರು,ಜೂನ್,13,2026 (www.justkannada.in): ಎಸ್‌ ಟಿ ಸಮುದಾಯಕ್ಕೆ ಸಚಿವ ಸಂಪುಟದಲ್ಲಿ ಮತ್ತಷ್ಟು ಪ್ರಾತಿನಿಧ್ಯ...

‘ಉತ್ತರಕುಮಾರನ ಪೌರುಷ’ ಸಾಕು ಮಾಡಿ: ಕಸದ ಟೆಂಡರ್‌ ಭ್ರಷ್ಟಚಾರ CBI ತನಿಖೆಗೆ ವಹಿಸಿ- ಆರ್.ಅಶೋಕ್

ಬೆಂಗಳೂರು,ಜೂನ್,13,2026 (www.justkannada.in): ಬೆಂಗಳೂರಿನ ಕಸದ ಟೆಂಡರ್ ನಲ್ಲಿ ಆಗಿರುವ ಬ್ರಹ್ಮಾಂಡ ಭ್ರಷ್ಟಾಚಾರದ...