27
September, 2026

A News 365Times Venture

27
Sunday
September, 2026

A News 365Times Venture

ಬಿಡದಿ ಟೌನ್ ಶಿಪ್ ವಿರುದ್ದ ವಿಧಾನಸೌಧದ ಒಳಗೆ ಹೊರಗೆ ಜಂಟಿಯಾಗಿ ಹೋರಾಟ- ಆರ್.ಅಶೋಕ್

Date:

ನವದೆಹಲಿ,ಆಗಸ್ಟ್,5,2026 (www.justkannada.in): ಬಿಡದಿ ಟೌನ್ ಶಿಪ್ ಯೋಜನೆ ವಿರುದ್ದ ವಿಧಾನಸೌಧದ ಒಳಗೆ ಹೊರಗೆ ಬಿಜೆಪಿ- ಜೆಡಿಎಸ್  ಜಂಟಿಯಾಗಿ ಹೋರಾಟ ಮಾಡುತ್ತೇವೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಆರ್.ಅಶೋಕ್, ವಿಧಾನ ಮಂಡಲ ಅಧೀವೇಶನದಲ್ಲಿ ಹೋರಾಟದ ಬಗ್ಗೆ ಚರ್ಚಿಸಿದ್ದೇವೆ.  ಹೆಚ್ ಡಿಕೆ ಜೊತೆ ಬೊಮ್ಮಾಯಿ, ಪಿಸಿ ಮೋಹನ್ ಚರ್ಚೆ ಮಾಡಿದ್ದೇವೆ. ವಿಧಾನ ಮಂಡಲ ಅಧಿವೇಶನಕ್ಕೂ ಮೊದಲು ಹೋರಾಟದ ಚರ್ಚೆ ಮಾಡಿದ್ದೇವೆ ಎಂದರು.

ರಾಜ್ಯದಲ್ಲಿ ಹೊಸ ಸಿಎಂ ಬಂದರೂ ಯಾವುದೇ ಬದಲಾವಣೆ ಆಗಿಲ್ಲ.  ಸಿಎಂ ಬದಲಾದರೂ ಏನು ಬದಲಾಗಿಲ್ಲ ಲಂಚ ತಾಂಡವಾಡುತ್ತಿದೆ. ದೆಹಲಿಗೆ ಹಣ ಕೊಡದಿದ್ದರಿಂದ ಸಚಿವನಾಗಿಲ್ಲವೆಂದು ಕಾಂಗ್ರೆಸ್ ನ ಕೆಲವು ಶಾಸಕರು ಬಹಿರಂಗವಾಗಿಯೇ ಹೇಳುತ್ತಿದ್ದಾರೆ. ಬಿಡದಿ ಲ್ಯಾಂಡ್ ಸ್ಕ್ಯಾಮ್ ಮಾಡಲು ಡಿಕೆ ಶಿವಕುಮಾರ್ ನಿರ್ಧರಿಸಿದ್ದಾರೆ. ಬಿಡದಿ ಟೌನ್ ಶಿಪ್ ಯೋಜನೆ ವಿರುದ್ದ ಹೋರಾಟ ಮಾಡಿದ್ದೇವೆ.  ಟೌನ್ ಶಿಪ್ ವಿರುದ್ದ ಜೆಡಿಎಸ್ ಕೂಡ ಹೋರಾಟ ಮಾಡಿದೆ. ವಿಧಾನಸೌಧದ ಒಳಗೆ ಹೊರಗೆ ಜಂಟಿಯಾಗಿ ಹೋರಾಟ ಮಾಡುತ್ತೇವೆ ಎಂದು ಆರ್.ಅಶೋಕ್ ತಿಳಿಸಿದರು.

Key words: Joint struggle, Vidhana Soudha, against, Bidadi Township, R. Ashok

The post ಬಿಡದಿ ಟೌನ್ ಶಿಪ್ ವಿರುದ್ದ ವಿಧಾನಸೌಧದ ಒಳಗೆ ಹೊರಗೆ ಜಂಟಿಯಾಗಿ ಹೋರಾಟ- ಆರ್.ಅಶೋಕ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ಅಧಿಕಾರಿಗಳ ಕೊರತೆ: ಸಾರ್ವಜನಿಕರು, ವಿದ್ಯಾರ್ಥಿಗಳಿಗೆ ತೊಂದರೆ ಆರೋಪ

  ಬೆಂಗಳೂರು, ಜೂ.27, 2026: ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರ ಕಚೇರಿಯಲ್ಲಿ ಪ್ರಮುಖ...

ಮೇಜರ್ ಮಣಿವಣ್ಣನ್ ಅವರಿಗೆ ಚೀಪ್ ಆಫ್ ಡಿಫೆನ್ಸ್ ಸ್ಟಾಫ್ ಅವರಿಂದ ಪ್ರಶಂಸಾ ಪತ್ರ

  ಬೆಂಗಳೂರು ಸೆ.೨೬,೨೦೨೬: ಪ್ರಸ್ತುತ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (BDA) ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿರುವ...

ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ:  ಚು.ಆಯೋಗ ವಿಸರ್ಜಿಸಿ, ಮುಖ್ಯಆಯುಕ್ತರನ್ನ ಬಂಧಿಸಿಬೇಕು-ಸಿಎಂ ಡಿಕೆಶಿ ಒತ್ತಾಯ

ಬೆಂಗಳೂರು ,ಸೆಪ್ಟಂಬರ್,26,2026 (www.justkannada.in): ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ಚುನಾವಣಾ ಆಯೋಗವನ್ನು ವಿಸರ್ಜಿಸಬೇಕು. ಮುಖ್ಯ...

ಯುವಕರು ಸಂಘಟಿತರಾಗಿ, ನಾರಾಯಣ ಗುರುಗಳ ತತ್ವಗಳನ್ನು ಅಳವಡಿಸಿಕೊಳ್ಳಲಿ:  ಸಚಿವ ಮಧು ಬಂಗಾರಪ್ಪ ಕರೆ

ಮೈಸೂರು, ಸೆಪ್ಟೆಂಬರ್ 26,2026 (www.justkannada.in): ನಾರಾಯಣ ಗುರುಗಳು ಇಡೀ ಮನು ಕುಲಕ್ಕೆ...