23
April, 2026

A News 365Times Venture

23
Thursday
April, 2026

A News 365Times Venture

ಮೈಸೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಫಲಿತಾಂಶ –ಹೆಚ್ ಡಿ ಕೋಟೆ ಪ್ರಥಮ, ಪರಿಶ್ರಮಕ್ಕೆ ಫಲ

Date:

 ಮೈಸೂರು,ಏಪ್ರಿಲ್,23,2026 (www.justkannada.in): ಮೈಸೂರು ಜಿಲ್ಲೆಯಲ್ಲಿ 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಫಲಿತಾಂಶದಲ್ಲಿ ಒಟ್ಟು 94.49% ಉತ್ತೀರ್ಣ ಪ್ರಮಾಣ ದಾಖಲಾಗಿದ್ದು, ಹೆಗ್ಗಡದೇವನಕೋಟೆ ತಾಲ್ಲೂಕು 96.80% ಫಲಿತಾಂಶದೊಂದಿಗೆ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ.

ಈ ಸಾಧನೆಯ ಹಿಂದೆ ಹೆಗ್ಗಡದೇವನಕೋಟೆ ಬಿಇಒ ರಾಜು ಅವರ ಪರಿಶ್ರಮ ಪ್ರಮುಖ ಕಾರಣವಾಗಿದ್ದು, ಅವರ ನಿರಂತರ ಮೇಲ್ವಿಚಾರಣೆ ಮತ್ತು ಯೋಜಿತ ಕ್ರಮಗಳು ಈಗ ಫಲ ನೀಡಿವೆ ಎಂಬುದು ಸ್ಪಷ್ಟವಾಗಿದೆ.

ವಿಶೇಷವಾಗಿ, ವಿದ್ಯಾರ್ಥಿಗಳಿಗಾಗಿ ನಡೆಸಿದ ವಿಶೇಷ ತರಗತಿಗಳು ಉತ್ತಮ ಪ್ರತಿಫಲ ನೀಡಿದ್ದು, ದುರ್ಬಲ ವಿದ್ಯಾರ್ಥಿಗಳಿಗೂ ಉತ್ತೇಜನ ಸಿಕ್ಕಿದೆ. ಜೊತೆಗೆ, ಶಾಲಾ ವಾಸ್ತವ್ಯ (School Stay) ಕಾರ್ಯಕ್ರಮಗಳ ಮೂಲಕ ಗಡಿಜಿಲ್ಲೆಯ ಕಾಡಾಂಚಿನ ಹಾಗೂ ದೂರದ ಗ್ರಾಮಗಳಲ್ಲಿ ಶಿಕ್ಷಣದ ಮಹತ್ವದ ಅರಿವು ಮೂಡಿಸುವ ಕಾರ್ಯ ಯಶಸ್ವಿಯಾಗಿದೆ.

ಇದರಿಂದ, ಸಾಮಾನ್ಯವಾಗಿ ಹಿಂದುಳಿದ ಪ್ರದೇಶಗಳ ವಿದ್ಯಾರ್ಥಿಗಳಲ್ಲೂ ಆತ್ಮವಿಶ್ವಾಸ ಹೆಚ್ಚಾಗಿ, ಉತ್ತಮ ಫಲಿತಾಂಶ ಸಾಧಿಸಲು ಸಾಧ್ಯವಾಗಿದೆ.

ಇತರೆ ತಾಲ್ಲೂಕುಗಳಲ್ಲಿಯೂ ಉತ್ತಮ ಸಾಧನೆ ಕಂಡುಬಂದಿದ್ದು,

ಮೈಸೂರು ಗ್ರಾಮಾಂತರ – 96.46% (2ನೇ ಸ್ಥಾನ)

ಮೈಸೂರು ಉತ್ತರ – 96.32% (3ನೇ ಸ್ಥಾನ)

ಮೈಸೂರು ದಕ್ಷಿಣ – 94.13% (4ನೇ ಸ್ಥಾನ)

ಟಿ. ನರಸೀಪುರ – 94.00% (5ನೇ ಸ್ಥಾನ)

ಜಿಲ್ಲೆಯಲ್ಲಿ ಒಟ್ಟು 33,976 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅವರಲ್ಲಿ 32,105 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಒಟ್ಟಾರೆ, ಸಮಗ್ರ ಯೋಜನೆಗಳು, ಶಿಕ್ಷಕರ ಪರಿಶ್ರಮ ಹಾಗೂ ವಿದ್ಯಾರ್ಥಿಗಳ ಶ್ರಮದಿಂದ ಮೈಸೂರು ಜಿಲ್ಲೆ ಈ ಬಾರಿ ಗಮನಾರ್ಹ ಸಾಧನೆ ಮಾಡಿದ್ದು, ಹೆಗ್ಗಡದೇವನಕೋಟೆ ಮಾದರಿಯಾಗಿದೆ.

ENGLISH SUMMARY..

Mysuru SSLC Exam-1 Results 2026: H.D. Kote Tops District

Mysuru district recorded an overall pass percentage of 94.49% in SSLC Exam-1 (2026). H.D. Kote secured the 1st rank with 96.80%, followed by Mysuru Rural (96.46%) and Mysuru North (96.32%).

The achievement is largely credited to the efforts of BEO Raju, whose consistent monitoring and planning paid off. Special coaching classes boosted student performance, while school-stay initiatives helped create awareness in remote forest and border villages.

A total of 33,976 students appeared, and 32,105 passed, marking a strong performance for the district.

Key words: Mysuru, SSLC Results 2026, H.D. Kote, Tops, District

The post ಮೈಸೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಫಲಿತಾಂಶ –ಹೆಚ್ ಡಿ ಕೋಟೆ ಪ್ರಥಮ, ಪರಿಶ್ರಮಕ್ಕೆ ಫಲ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಕೇಸ್: ಕುಟ್ಟ ಹೋಂ ಸ್ಟೇ ಪರವಾನಗಿ ರದ್ದು

ಕೊಡಗು,ಏಪ್ರಿಲ್,23,2026 (www.justkannada.in):  ವಿದೇಶಿ ಮಹಿಳೆಯ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಡಗು...

ಮೋದಿ ಬಗ್ಗೆ ಖರ್ಗೆ ಹೇಳಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ: ಭಿತ್ತಿಪತ್ರ ಹಿಡಿದು ಆಕ್ರೋಶ

ಬೆಂಗಳೂರು,ಏಪ್ರಿಲ್,23,2026 (www.justkannada.in):  ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ...

ಪ್ರಧಾನಿ ಮೋದಿ ವಿರುದ್ದ ಆಕ್ಷೇಪಾರ್ಹ ಹೇಳಿಕೆ: ಖರ್ಗೆ ಅವರನ್ನ ವಜಾ ಮಾಡಿ-ಆರ್.ಅಶೋಕ್

ಬೆಂಗಳೂರು,ಏಪ್ರಿಲ್,22,2026 (www.justkannada.in): ಪ್ರಧಾನಿ ಮೋದಿ ಅವರ ಬಗ್ಗೆ ಅಕ್ಷೇಪಾರ್ಹ ಹೇಳಿಕೆ ನೀಡಿರುವ ...

1.70 ಲಕ್ಷ ರೂ. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ PSI ಮತ್ತು ಕಾನ್ ಸ್ಟೇಬಲ್

ಬಾಗಲಕೋಟೆ,ಏಪ್ರಿಲ್,22,2026 (www.justkannada.in):  ಲಂಚ ಸ್ವೀಕರಿಸುತ್ತಿದ್ದ ವೇಳೆ ಪೊಲೀಸ್ ಸಬ್ ಇನ್ ಸ್ಪೆಕ್ಟರ್,...