2
October, 2026

A News 365Times Venture

2
Friday
October, 2026

A News 365Times Venture

ಮೈಸೂರು ದಸರಾ: ರಾಜಮನೆತನಕ್ಕೆ ಆಹ್ವಾನ ನೀಡಿದ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ

Date:

ಮೈಸೂರು ಅಕ್ಟೋಬರ್,2,2026 (www.justkannada.in) ನಗರಾಭಿವೃದ್ಧಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಇಂದು  ಮೈಸೂರು ಅರಮನೆಯಲ್ಲಿ ರಾಜವಂಶಸ್ಥೆ ಪ್ರಮೋದ ದೇವಿ ಹಾಗೂ ರಾಜಮನೆತನದ ಕುಟುಂಬದವರು  ಮೈಸೂರು ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಗೌರವಪೂರ್ವಕವಾಗಿ ಆಹ್ವಾನ ಪತ್ರಿಕೆ ನೀಡಿ ಆಹ್ವಾನಿಸಿದರು.

ನಂತರ ಮಾತನಾಡಿದ ಸಚಿವ ಯತೀಂದ್ರ ಸಿದ್ದರಾಮಯ್ಯ ಪ್ರತಿ ಬಾರಿಯಂತೆ ಈ ಬಾರಿಯೂ ಜಿಲ್ಲಾ ಉಸ್ತುವಾರಿ ಸಚಿವರಾಗಿ  ರಾಜಮನೆತನದ ಮಹಾರಾಜರಿಗೆ ದಸರಾ ಮಹೋತ್ಸವಕ್ಕೆ ಅಧಿಕೃತವಾಗಿ ಆಹ್ವಾನ ನೀಡಿದ್ದಾಗಿ ತಿಳಿಸಿದರು.

ರಾಜಮನೆತನದವರು ದಸರಾ ಆಚರಣೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ, ಅಂಬಾರಿ ಕಟ್ಟುವ ಸಮಯದಲ್ಲಿ ಕಳೆದ ಬಾರಿ ಹೆಚ್ಚಿನ ಜನಸಂದಣಿಯಿಂದ ವಿಳಂಬವಾಗಿದ್ದನ್ನು ನೆನಪಿಸಿ, ಈ ಬಾರಿ ಅಂಬಾರಿ ಕಟ್ಟುವ ಜಾಗದಲ್ಲಿ ಕಡಿಮೆ ಜನರಿಗೆ ಅವಕಾಶ ನೀಡಿ ಸುಸೂತ್ರವಾಗಿ ಕೆಲಸ ನಡೆಯುವಂತೆ ಸೂಕ್ತ ಸಲಹೆ ನೀಡಿದ್ದಾರೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಶಾಸಕರಾದ ಶ್ರೀವತ್ಸ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಉಪಾಧ್ಯಕ್ಷೆ ಡಾ: ಪುಷ್ಪ ಅಮರನಾಥ್ ಮೈಸೂರು ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಆಯುಬ್ ಖಾನ್,  ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ ಜಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಯುಕೇಶ್ ಕುಮಾರ್, ಮೈಸೂರಿನ ನಗರ ಪೊಲೀಸ್ ಆಯುಕ್ತ ಸೀಮಾ ಲಾಟ್ಕರ್,  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ,  ಅಪರರ ಜಿಲ್ಲಾಧಿಕಾರಿ ಐಶ್ವರ್ಯ ಆರ್,  ಮೈಸೂರು ಮಹಾನಗರ ಪಾಲಿಕೆ ಕಾರ್ಯ ಪಾಲಕ ಅಭಿಯಂತರರಾದ  ಸಿಂಧು ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

 

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ನೈಸ್ ಹಗರಣದಿಂದ ಗಮನ ಬೇರೆಡೆ ಸೆಳೆಯಲು ಕಾಂಗ್ರೆಸ್ SIR ನಾಟಕ- ಕೇಂದ್ರ ಸಚಿವ HDK

ಬೆಂಗಳೂರು,ಅಕ್ಟೋಬರ್,2,2026 (www.justkannada.in): ಸಿಎಂ ಕುಟುಂಬದ ನೈಸ್ ಭೂಕಬಳಿಕೆ ಹಗರಣವನ್ನು ಬಹಿರಂಗಪಡಿಸಿದ ಹಿನ್ನೆಲೆಯಲ್ಲಿ...

ಅ. 4 ರಂದು ಚೀ. ಜ.ರಾಜೀವ ಅವರ ‘ಪ್ರಿಯ ಗಾಂಧಿ’ ಕೃತಿ ಕುರಿತು ಸಂವಾದ

ಮೈಸೂರು.ಅಕ್ಟೋಬರ್‌,2,2026 (www.justkannada.in):  ಗಾಂಧಿ ಸ್ಮರಣೆಯ ವಿಶೇಷ ನೆಪದಲ್ಲಿ, ಹಿರಿಯ ಪತ್ರಕರ್ತ ಚೀ....

ಗಣೇಶ ಹಬ್ಬಕ್ಕೆಂದು ಬಂದಿದ್ದ ಯುವಕನ ಬರ್ಬರ ಹತ್ಯೆ

ಮೈಸೂರು ಅಕ್ಟೋಬರ್‌,1,2026 (www.justkannada.in): ಗಣೇಶ ಹಬ್ಬದ ಸಂಭ್ರಮಕ್ಕೆಂದು ಹಾಸನದಿಂದ ಮೈಸೂರಿಗೆ ಬಂದಿದ್ದ...

ಡಿಸ್ಟ್ರಿಕ್ ಜಡ್ಜ್‌ ಕಾರಿಗೆ ಆಟೋ ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ

ಮಂಗಳೂರು,ಅಕ್ಟೋಬರ್‌,1,2026 (www.justkannada.in): ದಕ್ಷಿಣ ಕನ್ನಡ ಜಿಲ್ಲಾ 1ನೇ ಹೆಚ್ಚುವರಿ ಜಿಲ್ಲಾ ಮತ್ತು...