23
July, 2026

A News 365Times Venture

23
Thursday
July, 2026

A News 365Times Venture

ಮೈಸೂರು: ಪತ್ನಿ, ಮಕ್ಕಳನ್ನ ಹತ್ಯೆಗೈದು ಪತಿ ಆತ್ಮಹತ್ಯೆಗೆ ಶರಣು

Date:

ಮೈಸೂರು,ಜುಲೈ,21,2026 (www.justkannada.in): ಪತ್ನಿ, ಇಬ್ಬರು ಮಕ್ಕಳನ್ನು  ಹತ್ಯೆಗೈದು ಪತಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ  ಮೈಸೂರು ಜಿಲ್ಲೆ ಹುಣಸೂರು ಪಟ್ಟಣದ ನ್ಯೂ ಮಾರುತಿ ಬಡಾವಣೆಯಲ್ಲಿ ನಡೆದಿದೆ.

ಹರೀಶ್ (40), ಅವರ ಪತ್ನಿ ನಿಶ್ಚಿತಾ ಹಾಗೂ ಅವರ ಇಬ್ಬರು ಮಕ್ಕಳಲ್ಲಿ ನೆಕ್ಸಾ (7) ಮತ್ತು ಪ್ರಥಮ ತರಗತಿಯಲ್ಲಿ ಓದುತ್ತಿದ್ದ ರಕ್ಷಾ ಮೃತಪಟ್ಟವರು ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಘಟನಾ ಸ್ಥಳದಲ್ಲಿ ಡೆತ್‌ ನೋಟ್ ಪತ್ತೆಯಾಗಿದ್ದು,ಪೊಲೀಸರು ಅದನ್ನು ವಶಪಡಿಸಿಕೊಂಡು  ಪರಿಶೀಲನೆ ನಡೆಸುತ್ತಿದ್ದಾರೆ.

ಮೃತರ ಬಾಯಿಗೆ ಹಾಗೂ ಮೂಗಿಗೆ ಪ್ಲಾಸ್ಟರ್ ಹಾಕಲಾಗಿದ್ದು, ಹೆಂಡತಿ,‌ ಮಕ್ಕಳನ್ನ‌ ಪ್ಲಾಸ್ಟಿಕ್ ಕವರ್ ಸುತ್ತಿ ಹತ್ಯೆ ಮಾಡಿ ಬಳಿಕ ಹರೀಶ್ ಕೊಠಡಿಯಲ್ಲಿ ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.

ಹರೀಶ್ ಅವರ ತಂದೆ ಕೋಡಿ ಸತ್ಯನಾರಾಯಣ್ ಅವರು ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಹುಣಸೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

Key words: Mysore,  Husband, commits suicide, after, killing, wife , children

The post ಮೈಸೂರು: ಪತ್ನಿ, ಮಕ್ಕಳನ್ನ ಹತ್ಯೆಗೈದು ಪತಿ ಆತ್ಮಹತ್ಯೆಗೆ ಶರಣು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

KUWJ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗಳ ಪ್ರಕಟ: ಪುರಸ್ಕೃತರ ಪಟ್ಟಿ ಹೀಗಿದೆ..

ಬೆಂಗಳೂರು,ಜುಲೈ,21,2026 (www.justkannada.in): ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದಿಂದ ಕೊಡ ಮಾಡುವ...

ಫುಟ್ ಪಾತ್ ತೆರವು ವೇಳೆ GBA ಅಧಿಕಾರಿಗಳ ಮೇಲೆ ಹಲ್ಲೆ, ಪೆಪ್ಪರ್ ಸ್ಪ್ರೇ: 7 ಜನ ವಶಕ್ಕೆ

ಬೆಂಗಳೂರು,ಜುಲೈ,21,2026 (www.justkannada.in): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಫುಟ್ ಪಾತ್ ಒತ್ತುವರಿ ತೆರವು...

ಗೂಗಲ್ ಕಂಪನಿ ಜತೆ VTU ಶೈಕ್ಷಣಿಕ ಒಪ್ಪಂದ: ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಸಹಿ

ಬೆಂಗಳೂರು ಜುಲೈ, 21,2026 (www.justkannada.in): ಗೂಗಲ್‌ ಕಂಪನಿಯು ಇತಿಹಾಸದಲ್ಲೇ ಮೊದಲ ಬಾರಿಗೆ...

ಸರ್ಕಾರಿ ಪ್ರತಿನಿಧಿಗಳ ಮೇಲೆ ಹಲ್ಲೆ ಮಾಡಿದ ಯಾರನ್ನೂ ಸಹ ಬಿಡುವುದಿಲ್ಲ- ಸಚಿವ ಕೃಷ್ಣಭೈರೇಗೌಡ

ಬೆಂಗಳೂರು,ಜುಲೈ,21,2026 (www.justkannada.in): ಸರ್ಕಾರಿ ಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸುವುದು ಕಾನೂನಿನ ಗಂಭೀರ...