25
July, 2026

A News 365Times Venture

25
Saturday
July, 2026

A News 365Times Venture

ಮೈಸೂರು: ಯೂಟ್ಯೂಬ್ ಹಾಗೂ ಸಾಮಾಜಿಕ ಜಾಲತಾಣ ಮಾಧ್ಯಮ ಪ್ರತಿನಿಧಿಗಳಿಗೆ ಇಂದು ತರಬೇತಿ

Date:

ಮೈಸೂರು,ಜುಲೈ,23,2026 (www.justkannada.in): ಯೂಟ್ಯೂಬ್ ಚಾನೆಲ್‌ ಗಳು ಹಾಗೂ ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ಸುದ್ದಿ ಪ್ರಸಾರ ಮಾಡುವ ಮಾಧ್ಯಮ ಪ್ರತಿನಿಧಿಗಳಿಗಾಗಿ ಮೈಸೂರು ನಗರ ಪೊಲೀಸ್ ಆಯುಕ್ತರ ಕಚೇರಿ ವಿಶೇಷ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿದೆ.

ಇಂದು (ಜುಲೈ 23) ಸಂಜೆ 5 ಗಂಟೆಗೆ ಮೈಸೂರು ನಗರ ಪೊಲೀಸ್ ಆಯುಕ್ತರ ಕಚೇರಿಯ ಸಭಾಂಗಣದಲ್ಲಿ ಈ ತರಬೇತಿ ನಡೆಯಲಿದೆ.

ಡಿಜಿಟಲ್ ಮಾಧ್ಯಮಗಳ ಮೂಲಕ ಸುದ್ದಿ ಪ್ರಸಾರ ಮಾಡುವ ಸಂದರ್ಭದಲ್ಲಿ ಪಾಲಿಸಬೇಕಾದ ಕಾನೂನು ನಿಯಮಗಳು, ಸಾಮಾಜಿಕ ಜವಾಬ್ದಾರಿ, ನಿಖರ ಮಾಹಿತಿ ಪರಿಶೀಲನೆ, ಸೈಬರ್ ಕಾನೂನುಗಳು, ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ವಿಷಯಗಳು ಸೇರಿದಂತೆ ಹಲವು ಪ್ರಮುಖ ಅಂಶಗಳ ಕುರಿತು ಮಾಹಿತಿ ನೀಡಲಾಗುವ ಸಾಧ್ಯತೆಯಿದೆ.

ಯೂಟ್ಯೂಬ್ ಚಾನೆಲ್‌ ಗಳಲ್ಲಿ ಕಾರ್ಯನಿರ್ವಹಿಸುವ ಮಾಧ್ಯಮ ಪ್ರತಿನಿಧಿಗಳು ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಸುದ್ದಿ ಪ್ರಕಟಿಸುವವರು ಕಡ್ಡಾಯವಾಗಿ ಈ ತರಬೇತಿಯಲ್ಲಿ ಭಾಗವಹಿಸುವಂತೆ ಮೈಸೂರು ನಗರ ಪೊಲೀಸ್ ಇಲಾಖೆ ಮನವಿ ಮಾಡಿದೆ.

ENGLISH SUMMARY..

YouTube & Social Media Journalists Training Today

Mysuru: Mysuru City Police have organized a training session for media representatives working on YouTube channels and other social media platforms.

The program will be held today at 5:00 PM at the Conference Hall, Mysuru City Police Commissioner’s Office.

All YouTube channel journalists and digital media representatives are requested to attend the training session.

Key words: Mysore, YouTube, Social Media, Journalists, Training, Today

The post ಮೈಸೂರು: ಯೂಟ್ಯೂಬ್ ಹಾಗೂ ಸಾಮಾಜಿಕ ಜಾಲತಾಣ ಮಾಧ್ಯಮ ಪ್ರತಿನಿಧಿಗಳಿಗೆ ಇಂದು ತರಬೇತಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಮೈಸೂರಿನಲ್ಲಿ ಏಕಾದಶಿ ಸಂಭ್ರಮ: ಶ್ರೀ ಕೃಷ್ಣಧಾಮ ಮಠದಲ್ಲಿ ಭಕ್ತರಿಗೆ ಮುದ್ರಾಧಾರಣೆ

ಮೈಸೂರು,ಜುಲೈ,25,2026 (www.justkannada.in): ಆಷಾಢ ಮಾಸದ ಪ್ರಥಮ ಏಕಾದಶಿ ಪರ್ವಕಾಲ ಹಿನ್ನೆಲೆಯಲ್ಲಿ ಮೈಸೂರಿನ...

ಶಿಕ್ಷಕರ ಕೊರತೆ ಇರುವ ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳು ದತ್ತು ತೆಗೆದುಕೊಳ್ಳಬೇಕು: ಸಿಎಂ ಡಿ.ಕೆ ಶಿವಕುಮಾರ್

ಚಿತ್ರದುರ್ಗ, ಜುಲೈ,25,2026 (www.justkannada.in):  ಶಿಕ್ಷಕರ ಕೊರತೆ ಇರುವ ಸರ್ಕಾರಿ ಶಾಲೆಗಳನ್ನು ನಗರ...

ಕಾವೇರಿ ವಿವಾದ ಕುರಿತು ಆ.3ರಂದು ಸಭೆ: ತಮಿಳುನಾಡು ಸಿಎಂಗೆ ಕುರುಬೂರು ಶಾಂತಕುಮಾರ್ ಸಲಹೆ, ಮನವಿ

ಬೆಂಗಳೂರು,ಜುಲೈ,25,2026 (www.justkannada.in): ಕಾವೇರಿ ನೀರಿನ ವಿಚಾರ ಮೇಕೆದಾಟು ನಿರ್ಮಾಣ  ಸೌಹಾರ್ದ ಮಾತುಕತೆಗಾಗಿ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ನಾವು ಸಾಧಿಸಿದ್ದೇವೆ ಎಂದ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ

ನವದೆಹಲಿ,ಜುಲೈ,25,2026 (www.justkannada.in):  ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹೊಣೆಹೊತ್ತು ಕೇಂದ್ರ ಶಿಕ್ಷಣ...