16
April, 2026

A News 365Times Venture

16
Thursday
April, 2026

A News 365Times Venture

ರಕ್ಷಣೆ ಕೋರಿ ಮೈಸೂರು ಎಸ್ ಪಿ ಕಚೇರಿ ಮೆಟ್ಟಿಲೇರಿದ ಪ್ರೇಮಿಗಳು

Date:

ಮೈಸೂರು,ಏಪ್ರಿಲ್,16,2026 (www.justkannada.in):  “ನಮಗೆ ರಕ್ಷಣೆ ಕೊಡಿ” ಎಂದು ಮನವಿ ಮಾಡಿಕೊಂಡು ತುಮಕೂರು ಮೂಲದ ಪ್ರೇಮಿಗಳ ಜೋಡಿ ಮೈಸೂರಿನ ಎಸ್‌ಪಿ ಕಚೇರಿಗೆ ಧಾವಿಸಿರುವ ಘಟನೆ ಬೆಳಕಿಗೆ ಬಂದಿದೆ.

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಸಂಗನಹಳ್ಳಿ ಗ್ರಾಮದ ಕೃಪಾ ಮತ್ತು ಧರಣೇಶ್ ಕಳೆದ ನಾಲ್ಕು ದಿನಗಳ ಹಿಂದೆ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆಯ ಮಹದೇಶ್ವರ ದೇವಸ್ಥಾನದಲ್ಲಿ ಪರಸ್ಪರ ಒಪ್ಪಿಗೆಯಿಂದ ಮದುವೆಯಾಗಿದ್ದಾರೆ. ಸುಮಾರು 2.5 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿ, ಒಂದೇ ಗ್ರಾಮ ಹಾಗೂ ಒಂದೇ ಜಾತಿಗೆ ಸೇರಿದವರಾದರೂ ಪೋಷಕರ ವಿರೋಧಕ್ಕೆ ಗುರಿಯಾಗಿದ್ದರು.

ಮದುವೆಗೆ ವಿಶೇಷವಾಗಿ ಹುಡುಗಿ ತಂದೆ ಶಿವಕುಮಾರ್ ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ, ಜೀವ ಭಯದ ಹಿನ್ನೆಲೆ ಇಬ್ಬರೂ ಓಡಿ ಬಂದು ವಿವಾಹವಾಗಿದ್ದಾರೆ ಎನ್ನಲಾಗಿದೆ.

“ನಾವು ಇಬ್ಬರೂ ಮೇಜರ್ ಆಗಿದ್ದೇವೆ. ಪರಸ್ಪರ ಒಪ್ಪಿಗೆ ಮೇರೆಗೆ ಮದುವೆಯಾಗಿದ್ದೇವೆ. ಆದರೆ ನನ್ನ ತಂದೆಯಿಂದ ನಮಗೆ ಜೀವ ಭಯವಿದೆ. ದಯವಿಟ್ಟು ರಕ್ಷಣೆ ನೀಡಿ,” ಎಂದು ನವಜೋಡಿಗಳು ಮನವಿ ಮಾಡಿದ್ದಾರೆ.

ಇನ್ನೊಂದೆಡೆ, ಕೃಪಾ ಕಾಣೆಯಾಗಿದ್ದಾಳೆ ಎಂದು ಬೆಂಗಳೂರಿನ ಪಿಣ್ಯಾ ಪೊಲೀಸ್ ಠಾಣೆಯಲ್ಲಿ ಆಕೆಯ ತಂದೆ ಈಗಾಗಲೇ ದೂರು ದಾಖಲಿಸಿದ್ದಾರೆ. ಆದರೆ “ನಾನು ಕಳೆದು ಹೋಗಿಲ್ಲ, ಸ್ವಯಂ ಇಚ್ಛೆಯಿಂದ ಮದುವೆಯಾಗಿದ್ದೇನೆ” ಎಂದು ಕೃಪಾ ಸ್ಪಷ್ಟಪಡಿಸಿದ್ದಾರೆ.

ENGLISH SUMMARY..

Mysuru: A couple from Tumakuru has approached the Mysuru SP office seeking protection, claiming threat to their lives.

Krupa and Dharanesh, from Sanganahalli village in Gubbi taluk, got married four days ago at Mahadeshwara Temple in K.R. Pet, Mandya district. The duo had been in a relationship for 2.5 years.

Despite belonging to the same village and caste, their marriage faced strong opposition from the girl’s father, Shivakumar. Fearing for their safety, the couple eloped and got married.

“We are both majors and married with mutual consent. We fear threat from my father. We need protection,” Krupa said.

Meanwhile, her father has filed a missing complaint at Peenya Police Station in Bengaluru. However, Krupa clarified that she is not missing and married by her own choice.

Key words: couple, Mysuru, SP office, protection, threat

The post ರಕ್ಷಣೆ ಕೋರಿ ಮೈಸೂರು ಎಸ್ ಪಿ ಕಚೇರಿ ಮೆಟ್ಟಿಲೇರಿದ ಪ್ರೇಮಿಗಳು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಕುಡಿಯುವ ನೀರಿಗಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿ- ಜಿಲ್ಲಾಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

ಬೆಂಗಳೂರು, ಏಪ್ರಿಲ್, 16,2026 (www.justkannada.in):  ರಾಜ್ಯದ ಐದು ಜಿಲ್ಲೆಗಳನ್ನು ಹೊರತುಪಡಿಸಿ ಬೇರೆ...

ಅನಧಿಕೃತ ಮದ್ಯ ಮಾರಾಟ ಅಂಗಡಿಗಳ ಮೇಲೆ ಕ್ರಮ ಕೈಗೊಳ್ಳಿ- ಶಾಸಕ ಪಿ. ರವಿಕುಮಾರ್ ಸೂಚನೆ

ಮಂಡ್ಯ,ಏಪ್ರಿಲ್,16,2026 (www.justkannada.in): ಜಿಲ್ಲೆಯಲ್ಲಿ ಮದ್ಯ ಮಾರಾಟ ಅಂಗಡಿಗಳು ಹೆಚ್ಚುತಿದ್ದು ಸಾರ್ವಜನಿಕ ಹಿತದೃಷ್ಟಿಯಿಂದ ...

ಕ್ಷೇತ್ರ  ಮರುವಿಂಗಡಣೆ ಬಿಲ್ : ಸಂಸದ ಡಾ. ಸಿ.ಎನ್ ಮಂಜುನಾಥ್ ಪ್ರತಿಕ್ರಿಯಿಸಿದ್ದು ಹೀಗೆ

ನವದೆಹಲಿ,ಏಪ್ರಿಲ್ ,16,2026 (www.justkannada.in):  ಕೇಂದ್ರ ಸರ್ಕಾರ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆಗೆ ಮುಂದಾಗಿದ್ದು...

ಜಗ್ಗಿ ವಾಸುದೇವ್ ಜೊತೆ ಡಿಕೆಶಿ ವೇದಿಕೆ ಹಂಚಿಕೊಂಡ ವಿಚಾರ: KN ರಾಜಣ್ಣ ಹೇಳಿಕೆಗೆ ಬಾಲಕೃಷ್ಣ ತಿರುಗೇಟು

ಬೆಂಗಳೂರು,ಏಪ್ರಿಲ್,16,2026 (www.justkannada.in):  ಕೇಂದ್ರ ಸಚಿವ ಅಮಿತ್‌ ಶಾ ಭಾಗವಹಿಸಿದ್ದ ಸದ್ಗುರು ಜಗ್ಗಿ...