22
August, 2026

A News 365Times Venture

22
Saturday
August, 2026

A News 365Times Venture

ವರ ಮಹಾಲಕ್ಷ್ಮಿ ಪೂಜೆಯಲ್ಲಿ ಭಾಗಿಯಾಗಿ ಸೌಹಾರ್ದತೆ ಸಂದೇಶ ಸಾರಿದ ಮುಸ್ಲೀಂ ಬಾಂಧವರು

Date:

ಮೈಸೂರು,ಆಗಸ್ಟ್,21,2026 (www.justkannada.in): ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಲಕ್ಷ್ಮಿಪುರಂನಲ್ಲಿರುವ ಶ್ರೀ ದುರ್ಗಾ ಫೌಂಡೇಶನ್ ಕಚೇರಿಯಲ್ಲಿ ಆಯೋಜಿಸಲಾಗಿದ್ದ ವಿಶೇಷ ಪೂಜೆ ಹಾಗೂ ಸೌಹಾರ್ದತಾ ಕಾರ್ಯಕ್ರಮದಲ್ಲಿ ಮುಸ್ಲೀಂ ಬಾಂಧವರು ಆಶಾ ಕಾರ್ಯಕರ್ತೆಯರು ಭಾಗವಹಿಸಿ ಸೌಹಾರ್ದತೆ ಸಂದೇಶ ಸಾರಿದರು.

ಕಚೇರಿಯಲ್ಲಿ ಲಕ್ಷ್ಮಿ ವಿಗ್ರಹಕ್ಕೆ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಮುಸ್ಲಿಂ ಬಾಂಧವರು ಹಾಗೂ ಆಶಾ ಕಾರ್ಯಕರ್ತೆಯರು ಭಾಗವಹಿಸಿ ವರಮಹಾಲಕ್ಷ್ಮಿ ಪೂಜೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.

ಪೂಜೆಯ ನಂತರ ಭಾಗವಹಿಸಿದ್ದವರಿಗೆ ಬಾಗಿನ ವಿತರಿಸಲಾಯಿತು. ಧರ್ಮ, ಜಾತಿ ಭೇದವಿಲ್ಲದೆ ಎಲ್ಲರೂ ಒಂದಾಗಿ ಹಬ್ಬವನ್ನು ಆಚರಿಸುವ ಮೂಲಕ ಪರಸ್ಪರ ಸೌಹಾರ್ದತೆ, ಸಹೋದರತ್ವ ಮತ್ತು ಸಾಮಾಜಿಕ ಏಕತೆಯ ಸಂದೇಶವನ್ನು ಸಾರಲಾಯಿತು.

ಕಾರ್ಯಕ್ರಮದಲ್ಲಿ ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್, ಕವಿತಾ , ವೀಣಾ, ರಮ್ಯಾ ,ಯಶಸ್ವಿನಿ, ಮುಸಲ್ಮಾನ್ ಬಾಂಧವರಾದ ಅಮ್ರೀನ್, ಫಾತಿಮಾ, ನಜೀರ ಬೇಗಮ್, ಐರನ್, ಹಾಗೂ ಪದಾಧಿಕಾರಿಗಳು, ಸದಸ್ಯರು ಹಾಗೂ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.

Key words: Mysore, Muslim, Vara Mahalakshmi Puja

The post ವರ ಮಹಾಲಕ್ಷ್ಮಿ ಪೂಜೆಯಲ್ಲಿ ಭಾಗಿಯಾಗಿ ಸೌಹಾರ್ದತೆ ಸಂದೇಶ ಸಾರಿದ ಮುಸ್ಲೀಂ ಬಾಂಧವರು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಸರ್ಕಾರದ ಆದಾಯ ಸಂಗ್ರಹ ಹೆಚ್ಚಳಕ್ಕೆ ಮಾರ್ಗದರ್ಶನ ನೀಡಿ: ಸಿಎಂ ಡಿ.ಕೆ ಶಿವಕುಮಾರ್ ಕರೆ

ಬೆಂಗಳೂರು, ಆಗಸ್ಟ್,21,2026 (www.justkannada.in):  ಹಣಕಾಸಿನ ವಿಚಾರದಲ್ಲಿ ಸರ್ಕಾರಕ್ಕೆ ಸಲಹೆ ಹಾಗೂ ಆದಾಯ...

ಡಿಕೆಶಿ ಭ್ರಷ್ಟರನ್ನು ರಕ್ಷಣೆ ಮಾಡುತ್ತಿರುವುದು ನಾಚಿಕೆಗೇಡು- ಸಂಸದ ಶೆಟ್ಟರ್

ಧಾರವಾಡ,ಆಗಸ್ಟ್,21,2026 (www.justkannada.in):  ಬಿ.ನಾಗೇಂದ್ರಗೆ ಮಂತ್ರಿಗಿರಿ ಕೊಡುವ ಅವಶ್ಯಕತೆ ಏನಿತ್ತು? ಸಿಎಂ ಡಿಕೆ...

ಕ್ವಿನ್ ಸಿಟಿಯಲ್ಲಿ ವಿದೇಶಿ ವಿವಿಗಳ ಕ್ಯಾಂಪಸ್ ಗೆ ಸರ್ಕಾರದ ಒಲವು: ಮೈಸೂರಿನಲ್ಲಿ ಏರೋಸ್ಪೇಸ್ ಪಾರ್ಕ್- ಸಚಿವ ಎಂ.ಬಿ ಪಾಟೀಲ್

ಬೆಂಗಳೂರು,ಆಗಸ್ಟ್,21,2026 (www.justkannada.in):  ದೊಡ್ಡಬಳ್ಳಾಪುರ ಮತ್ತು ಡಾಬಸಪೇಟೆ ನಡುವೆ ಅಭಿವೃದ್ಧಿಪಡಿಸುತ್ತಿರುವ ಕ್ವಿನ್ ಸಿಟಿಯಲ್ಲಿ...

ಅರ್ಜುನ ಅವಧೂತಗೆ ನೀಡಿದ್ದ ಗನ್‌ಮ್ಯಾನ್ ಭದ್ರತೆ ವಾಪಸ್

ಮೈಸೂರು,ಆಗಸ್ಟ್,21,2026 (www.justkannada.in):  ಅರ್ಜುನ ಅವಧೂತಗೆ ಭದ್ರತೆ ಮತ್ತು ಆತ್ಮರಕ್ಷಣೆ ದೃಷ್ಟಿಯಿಂದ ಉಚಿತವಾಗಿ...