22
April, 2026

A News 365Times Venture

22
Wednesday
April, 2026

A News 365Times Venture

ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಆರೋಪ: ಇಬ್ಬರ ಬಂಧನ

Date:

ಕೊಡಗು,ಏಪ್ರಿಲ್,22,2026 (www.justkannada.in):  ಅಮೆರಿಕಾ ಮೂಲದ ಪ್ರವಾಸಿ ಮಹಿಳೆಯ ಮೇಲೆ ಹೋಮ್ಸ್‌ ಸ್ಟೇ ಸಿಬ್ಬಂದಿಯಿಂದ ಅತ್ಯಾಚಾರ ನಡೆದಿರುವ ಆರೋಪ ಕೇಳಿ ಬಂದಿದೆ.

ವಿರಾಜಪೇಟೆಯ ಪೊನ್ನಂಪೇಟೆ ತಾಲೂಕಿನ ಕುಟ್ಟ ಗ್ರಾಮದ ದೇವಿ ವಿಲ್ಲಾ ಹೋಮ್ಸ್‌ ಸ್ಟೇನಲ್ಲಿ ಏಪ್ರಿಲ್ 12ರಂದು ನಡೆದಿದ್ದು, ಈಗ ತಡವಾಗಿ ಬೆಳಕಿಗೆ ಬಂದಿದೆ. ಹೋಮ್ಸ್‌ ಸ್ಟೇಯಿಂದ ಹಿಂದಿರುಗಿದ ಬಳಿಕ ಮಹಿಳೆ ಅಮೆರಿಕಾ ರಾಯಭಾರಿ ಕಚೇರಿಗೆ ಮಾಹಿತಿ ನೀಡಿದ್ದು, ನಂತರ ಮೈಸೂರಿನಲ್ಲಿ ದೂರು ದಾಖಲಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಆರೋಪ ಪ್ರಕಾರ, ಕೂಲ್‌ ಡ್ರಿಂಕ್ಸ್‌ ನಲ್ಲಿ ಮಾದಕ ವಸ್ತು ಬೆರೆಸಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಲಾಗಿದೆ. ಘಟನೆ ಬಳಿಕ ಮಹಿಳೆಯನ್ನು ಮೂರು ದಿನಗಳ ಕಾಲ ಹೋಮ್ ಸ್ಟೇಯಲ್ಲೇ ಇರಿಸಿಕೊಂಡು ಸಮಾಧಾನಪಡಿಸಲು ಯತ್ನಿಸಿದ್ದರೆಂಬ ಆರೋಪವೂ ಕೇಳಿಬಂದಿದೆ.

ಬಳಿಕ ಕುಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಹಾಗೂ ಹೋಮ್ಸ್ ಸ್ಟೇ ಮಾಲೀಕನನ್ನು ಬಂಧಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆರೋಪಿ ಜಾರ್ಖಾಂಡ್ ಮೂಲದವನು ಎನ್ನಲಾಗಿದ್ದು ಪ್ರಕರಣದ ಕುರಿತು ಪೊಲೀಸ್ ಇಲಾಖೆಯಿಂದ ಇನ್ನೂ ಅಧಿಕೃತ ಸ್ಪಷ್ಟನೆ  ಬರಬೇಕಿದೆ.

ENGLISH SUMMARY..

Kodagu Breaking: Foreign Tourist Alleges Rape at Homestay

Kodagu: A shocking incident has surfaced where a US-based woman tourist has alleged rape by a homestay staff member.

The incident reportedly took place on April 12 at Devi Villa Homestay in Kutta village, Ponnampet taluk of Virajpet constituency, and came to light later.

According to the complaint, the accused allegedly mixed drugs in a soft drink and sexually assaulted the woman. It is also alleged that she was kept at the homestay for three days afterward while attempts were made to pacify her.

After leaving the homestay, the woman informed the US Embassy and later filed a complaint in Mysuru. A case has now been registered at Kutta Police Station.

The accused, said to be from Jharkhand, along with the homestay owner, has reportedly been arrested. Police are yet to issue an official detailed statement.

Key words: Foreign woman, rape, Two, arrested

The post ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಆರೋಪ: ಇಬ್ಬರ ಬಂಧನ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಸಚಿವ ಜಮೀರ್ ಜೆಡಿಎಸ್ ಸೇರ್ತಾರಾ ಅನ್ನೋ ವಿಚಾರ: ಪಕ್ಷ ಯಾರನ್ನೂ ನೆಚ್ಚಿಕೊಂಡಿಲ್ಲ ಎಂದ ನಿಖಿಲ್

ಬೆಂಗಳೂರು,ಏಪ್ರಿಲ್,22,2026 (www.justkannada.in): ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಜೆಡಿಎಸ್ ಸೇರುತ್ತಾರೆಯೇ...

ಪಹಲ್ಗಾಮ್ ದಾಳಿಗೆ ವರ್ಷ :  ಕಣಿವೆ ದುಃಖದಲ್ಲಿ, ಹೊಂದಾಣಿಕೆ ಮತ್ತು ಹೆಚ್ಚಿದ ಭದ್ರತೆ.!

  ಶ್ರೀನಗರ, ಏ.೨೧,೨೦೨೬: ಕಾಶ್ಮೀರದ ಶ್ರೀನಗರ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಅಶಾಂತಿಯ ನಿಶ್ಶಬ್ದತೆ...

ಮೇ ತಿಂಗಳಲ್ಲಿ ರಾಜಕೀಯ ಬೆಳವಣಿಗೆ ಆಗುತ್ತೆ- ಕೆ.ಎನ್ ರಾಜಣ್ಣ

ಬೆಂಗಳೂರು,ಏಪ್ರಿಲ್,21,2026 (www.justkannada.in):  ಮೇ ತಿಂಗಳಿನಲ್ಲಿ ರಾಜ್ಯದಲ್ಲಿ ರಾಜಕೀಯ ಬೆಳವಣಿಗೆಯಾಗುತ್ತದೆ ಎಂದು ಮಾಜಿ...

ಬಿಜೆಪಿಯಿಂದ ಸುಳ್ಳು: ನಾವು ಯಾವಾಗಲೂ ಮಹಿಳಾ ಮೀಸಲಾತಿ ಪರ- ಸಿಎಂ ಸಿದ್ದರಾಮಯ್ಯ

ಚಾಮರಾಜನಗರ,ಏಪ್ರಿಲ್,21,2026 (www.justkannada.in):  ಮಹಿಳಾ ಮೀಸಲಾತಿ ಬಿಲ್ ವಿರೋಧಿಸಿದೆವು ಎಂದು ಬಿಜೆಪಿಯುವರು ಸುಳ್ಳೂ...