10
September, 2026

A News 365Times Venture

10
Thursday
September, 2026

A News 365Times Venture

ಶಾಲಾ ಮಕ್ಕಳಿಗಾಗಿ ‘ಗ್ರಾಮಾನುಭವ’ ಕಾರ್ಯಕ್ರಮ ರಾಜ್ಯಾದ್ಯಂತ ಅನುಷ್ಠಾನಕ್ಕೆ ನಿರ್ಧಾರ- ಸಚಿವ ಮಧು ಬಂಗಾರಪ್ಪ

Date:

ಶಿವಮೊಗ್ಗ,ಸೆಪ್ಟಂಬರ್,8,2026 (www.justkannada.in): ನಮ್ಮ ನಗರಗಳ ವಿದ್ಯಾರ್ಥಿಗಳನ್ನು ಗ್ರಾಮೀಣ ಭಾರತದ ಬೇರುಗಳಿಗೆ ಜೋಡಿಸಿ ಈ ಕಂದಕವನ್ನು ಮುಚ್ಚುವ ಉದ್ದೇಶದಿಂದ ನಮ್ಮ ಸರ್ಕಾರವು ʻಗ್ರಾಮಾನುಭವʼ ಎಂಬ ಯೋಜನೆನ್ನು ಜಾರಿಗೆ ತರುತ್ತಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಈ ಬಗ್ಗೆ ಇಂದು ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ನೀವು ತಿನ್ನುವ ಅನ್ನವನ್ನು ಮಾಡುವ ಅಕ್ಕಿ ಎಲ್ಲಿಂದ ಬರುತ್ತದೆ, ಭತ್ತ ಗಿಡದಲ್ಲಿ ಬಿಡುತ್ತೋ, ಮರದಲ್ಲಿ ಬಿಡುತ್ತೋ…ʼ ಎಂದು ನಗರಗಳಲ್ಲಿ ಓದುವ ವಿದ್ಯಾರ್ಥಿಗಳನ್ನು ಕೇಳಿದರೆ ಉತ್ತರ ಗೊತ್ತಿರುವುದಿಲ್ಲ ಎಂದು ನಾವು ಮಾತನಾಡಿಕೊಳ್ಳುವುದುಂಟು. ನಮ್ಮ ದೇಶ ಈಗ ʻಗ್ರಾಮೀಣ ಭಾರತʼ, ʻನಗರ ಭಾರತʼ ಎಂದು ಎರಡು ಭಾಗಗಳಾಗಿವೆ. ಇದರ ನಡುವಿನ ಕಂದಕ ದಿನದಿಂದ ದಿನಕ್ಕೆ ಆಳವಾಗುತ್ತಿದೆ, ಅಗಲವಾಗುತ್ತಿದೆ. ಹೀಗಾಗಿ ನಮ್ಮ ನಗರಗಳ ವಿದ್ಯಾರ್ಥಿಗಳನ್ನು ಗ್ರಾಮೀಣ ಭಾರತದ ಬೇರುಗಳಿಗೆ ಜೋಡಿಸಿ ಈ ಕಂದಕವನ್ನು ಮುಚ್ಚುವ ಉದ್ದೇಶದಿಂದ ನಮ್ಮ ಸರ್ಕಾರವು ʻಗ್ರಾಮಾನುಭವʼ ಎಂಬ ಯೋಜನೆನ್ನು ಜಾರಿಗೆ ತರುತ್ತಿದೆ ಎಂದು ತಿಳಿಸಿದರು.

ಈ ಯೋಜನೆಯಡಿ ಜಿಲ್ಲಾ ಕೇಂದ್ರಗಳ ವ್ಯಾಪ್ತಿಯಲ್ಲಿರುವ ನಗರ ಪ್ರದೇಶದ ಸರ್ಕಾರಿ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 8, 9 ಮತ್ತು 11 ನೇ ತರಗತಿಯ ವಿದ್ಯಾರ್ಥಿಗನ್ನು ಹಳ್ಳಿಗಳಿಗೆ ಕರೆದುಕೊಂಡು ಹೋಗಿ ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಕಲೆ ಮತ್ತು ಸಂಸ್ಖೃತಿ ಸೇರಿದಂತೆ ಗ್ರಾಮೀಣ ಜೀವನದ ವಿಶಿಷ್ಟ ಅನುಭವ ಒದಗಿಸಲಾಗುತ್ತದೆ.

ಒಂದು ರಾತ್ರಿ ಸೇರಿದಂತೆ ಎರಡು ದಿನಗಳ ಕಾಲ ಗ್ರಾಮದಲ್ಲಿಯೇ ಉಳಿದುಕೊಳ್ಳುವ ಮಕ್ಕಳಿಗೆ ಗ್ರಾಮೀಣದ ಜನಜೀವನದ ಬಗ್ಗೆ, ಕೃಷಿ ಚಟುವಟಿಕೆಗಳ ಬಗ್ಗೆ, ಸಾಂಸ್ಕೃತಿಕ ಜಗತ್ತಿನ ಬಗ್ಗೆ ಮಾಹಿತಿ ನೀಡಲಾಗುತ್ತದೆ. Exposure Visit Framework ಅಡಿಯಲ್ಲಿ ಈ ಕಾರ್ಯಕ್ರಮವನ್ನು ನಾವು ರೂಪಿಸಿದ್ದೇವೆ. ಪ್ರತಿ ಶೈಕ್ಷಣಿಕ ಸಾಲಿನಲ್ಲಿಯೂ ಸೆಪ್ಟೆಂಬರ್‌ ನಿಂದ ಡಿಸೆಂಬರ್‌ ಒಳಗೆ ಈ ಕಾರ್ಯಕ್ರಮವನ್ನು ಜಾರಿಗೆ ತರಲಾಗುತ್ತದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಜನವರಿ ಅಥವಾ ಫೆಬ್ರವರಿಯಲ್ಲಿಈ  ಭೇಟಿ ಕುರಿತು ಶಾಲಾ ಮಟ್ಟದ ಸಂವಹನ ಚಟುವಟಿಕೆಗಳನ್ನು ನಡೆಸಬೇಕೆಂದು ಸೂಚಿಸಲಾಗಿದೆ. ಮೊದಲಿಗೆ ರಾಜ್ಯದ ಒಟ್ಟು 160 ಸರ್ಕಾರಿ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಅಂದಾಜು 2.46 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ನಗರ ಪ್ರದೇಶದ ಎಲ್ಲಾ ಪಿಎಂಶ್ರೀ ಮತ್ತು ಕೆಪಿಎಸ್‌ ಶಾಲೆಗಳಲ್ಲಿಯೂ ಈ ಯೋಜನೆ ಜಾರಿಗೆ ಬರಲಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನೇತೃತ್ವದ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ನೂರು ದಿನಗಳಾಗುತ್ತಿರುವ ಈ ಹೊತ್ತಿನಲ್ಲಿ ಈ ಯೋಜನೆಯನ್ನು ಪ್ರಕಟಿಸುತ್ತಿದ್ದೇವೆ ಎಂದು ಸಚಿವ ಮಧು ಬಂಗಾರಪ್ಪ ಹರ್ಷ ವ್ಯಕ್ತಪಡಿಸಿದರು.

Key words:  Implement, Gramanubhav,  program, school children, Minister, Madhu Bangarappa

The post ಶಾಲಾ ಮಕ್ಕಳಿಗಾಗಿ ‘ಗ್ರಾಮಾನುಭವ’ ಕಾರ್ಯಕ್ರಮ ರಾಜ್ಯಾದ್ಯಂತ ಅನುಷ್ಠಾನಕ್ಕೆ ನಿರ್ಧಾರ- ಸಚಿವ ಮಧು ಬಂಗಾರಪ್ಪ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಫ್ರಾನ್ಸ್‌ ಪ್ರವಾಸ: ಥೇಲ್ಸ್, ಸೋಮ್ಫಿ, ಸೆವೆನ್ಸಿಯಾ ಕಂಪನಿಗಳ ಜತೆ‌ ಮಾತುಕತೆ ನಡೆಸಿದ ಸಚಿವ ಎಂ.ಬಿ ಪಾಟೀಲ್

ಬೆಂಗಳೂರು,ಸೆಪ್ಟಂಬರ್,9,2026 (www.justkannada.in): ಬಂಡವಾಳ ಆಕರ್ಷಣೆಯ ಉದ್ದೇಶದಿಂದ ಉನ್ನತ ಮಟ್ಟದ ನಿಯೋಗದ ಜತೆ...

ಸಚಿವ ಸತೀಶ್ ಜಾರಕಿಹೊಳಿಗೆ ಇಡಿ ಶಾಕ್: ಮನೆ, ಕಚೇರಿ ಸೇರಿ 18 ಕಡೆಗಳಲ್ಲಿ ದಾಳಿ, ಪರಿಶೀಲನೆ

ಬೆಂಗಳೂರು,ಸೆಪ್ಟಂಬರ್,9,2026 (www.justkannada.in):  ಲೋಕೋಪಯೋಗಿ ಸಚಿವ ಸತೀಶ್​ ಜಾರಕಿಹೊಳಿ ಅವರಿಗೆ ಜಾರಿ ನಿರ್ದೇಶನಾಲಯ...

ಒಡಿಶಾ ಕಾಡಿನಲ್ಲಿ 5 ಒರಂಗುಟಾನ್ ಮರಿಗಳು ಪತ್ತೆ: ಅಂತರರಾಷ್ಟ್ರೀಯ ವನ್ಯಜೀವಿ ಕಳ್ಳಸಾಗಣೆ ಶಂಕೆ

ಭುವನೇಶ್ವರ, ಸೆಪ್ಟಂಬರ್,9,2026 (www.justkannada.in):  ಭಾರತದಲ್ಲಿ ಸ್ವಾಭಾವಿಕವಾಗಿ ಕಂಡುಬರದ, ಅತ್ಯಂತ ಅಪಾಯದಲ್ಲಿರುವ ಒರಂಗುಟಾನ್‌...

ಸತೀಶ್ ಜಾರಕಿಹೊಳಿ ನಿವಾಸದ ಮೇಲೆ ಇಡಿ ದಾಳಿ: ಕೇಂದ್ರದ ವಿರುದ್ದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಬೆಂಗಳೂರು,ಸೆಪ್ಟಂಬರ್,9,2026 (www.justkannada.in):  ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ನಿವಾಸದ ಮೇಲೆ...