ಬಾಗಲಕೋಟೆ,ಮೇ,23,2026 (www.justkannada.in): ರಾಜ್ಯದಲ್ಲಿ ಸಚಿವ ಸಂಪುಟ ಪುನಾರಚನೆ ವಿಚಾರ ಸದ್ದು ಮಾಡುತ್ತಿದ್ದು ಶಾಸಕರು ದೆಹಲಿಗೆ ತೆರಳಿ ಲಾಬಿ ನಡೆಸಲು ಶುರಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅಬಕಾರಿ ಸಚಿವ ಆರ್.ಬಿ ತಿಮ್ಮಾಪುರ, ಶಾಸಕರು ಮಂತ್ರಿಯಾಗಲು ಬಯೋಸೋದು ತಪ್ಪಲ್ಲ ಎಂದಿದ್ದಾರೆ.
ಮೇ 27 ರಂದು 30 ಶಾಸಕರು ದೆಹಲಿಗೆ ಹೋಗುತ್ತೇವೆ ಎಂಬ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿಕೆ ಕುರಿತು ಮಾತನಾಡಿದ ಸಚಿವ ತಿಮ್ಮಾಪುರ, ನಮ್ಮ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ. ಸಹಜವಾಗಿ ಅವರು ಅಭಿಪ್ರಾಯಗಳನ್ನ ಹೇಳುತ್ತಾರೆ. ಶಾಸಕರು ತಮ್ಮ ಅಭಿಪ್ರಾಯಗಳನ್ನ ತಿಳಿಸುವುದು ತಪ್ಪಲ್ಲ. ಶಾಸಕರು ಮಂತ್ರಿ ಆಗಲು ಬಯಸೋದು ತಪ್ಪಲ್ಲ ಎಂದರು.
ಹೈಕಮಾಂಡ್ ಆಳೆದು ತೂಗಿ ಯಾರನ್ನ ಮಂತ್ರಿ ಮಾಡಬೇಕೆಂದು ಗಮನದಲ್ಲಿಟ್ಟುಕೊಂಡು ಮಾಡುತ್ತಾರೆ ಎಂದು ಸಚಿವ ತಿಮ್ಮಾಪುರ ತಿಳಿಸಿದರು.
Key words: MLAs, become, ministers, R.B. Thimmapura
The post ಶಾಸಕರು ಮಂತ್ರಿಯಾಗಲು ಬಯೋಸೋದು ತಪ್ಪಲ್ಲ- ಸಚಿವ ಆರ್.ಬಿ ತಿಮ್ಮಾಪುರ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




