ನವದೆಹಲಿ, ಸೆಪ್ಟೆಂಬರ್ 1,2026 (www.justkannada.in): ಜಾಗತಿಕ ಯುದ್ಧ ಸಂಘರ್ಷಗಳು, ತೈಲ ಬೆಲೆ ಏರಿಕೆ ಹಾಗೂ ಪೂರೈಕೆ ಸರಪಳಿ ಅಡೆತಡೆಗಳ ನಡುವೆಯೂ ಭಾರತದ ಜಿಡಿಪಿ ಶೇ.7.8ರಷ್ಟು ಬೆಳವಣಿಗೆಯನ್ನ ದಾಖಲಿಸಿದೆ.
ಆರ್ಥಿಕತೆಯು ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್-ಜೂನ್) ನಿರೀಕ್ಷೆಗೂ ಮೀರಿದ ಅಂದರೆ ಶೇ. 7.8 ರಷ್ಟು ಜಿಡಿಪಿ(GDP) ಬೆಳವಣಿಗೆಯನ್ನು ದಾಖಲಿಸಿದೆ.
ಜಿಡಿಪಿ ಬೆಳವಣಿಗೆ ಕುರಿತು ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ದೇಶವಾಸಿಗಳಿಗೆ ಶುಭಾಶಯ ದೇಶದ ಶ್ರಮ ಹಾಗೂ ಸಂಕಲ್ಪಕ್ಕೆ ಸಂದ ಜಯವಿದು. ಜಾಗತಿಕ ಮಟ್ಟದಲ್ಲಿ ಯುದ್ದ ಬಿಕ್ಕಟ್ಟಿದ್ದರೂ ಭಾರತ ಪ್ರಗತಿ ಕಂಡಿದೆ.
ಈ ಭರ್ಜರಿ ಯಶಸ್ಸು ದೇಶದ 1.4 ಶತಕೋಟಿ ನಾಗರಿಕರ ಕಠಿಣ ಪರಿಶ್ರಮ ಮತ್ತು ಸಾಮೂಹಿಕ ಇಚ್ಛಾಶಕ್ತಿಗೆ ಸಂದ ಜಯ. ಜಗತ್ತು ಬಿಕ್ಕಟ್ಟುಗಳಲ್ಲಿದ್ದರೂ ಭಾರತ ಹೊಸ ದಾಖಲೆ ಬರೆದಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
Key words: PM Modi, happy, with, 7.8% GDP growth
The post ಶೇ.7.8ರಷ್ಟು ಜಿಡಿಪಿ ಜಿಗಿತ: ಪ್ರಧಾನಿ ಮೋದಿ ಸಂತಸ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




