ಬೆಂಗಳೂರು,ಏಪ್ರಿಲ್,7,2026 (www.justkannada.in): ಸಚಿವ ಸಂಪುಟ ಪುನಾರಚನೆ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಈ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದರು.
ಈ ಕುರಿತು ಮಾತನಾಡಿದ ಗೃಹ ಸಚಿವ ಪರಮೇಶ್ವರ್ , ಯಾವುದೇ ತೀರ್ಮಾನ ನಾವು ಹೇಳಲು ಆಗಲ್ಲ ನಮ್ಮ ಅನಿಸಿಕೆಯಂತೆ ಹೈಕಮಾಂಡ್ ನಿರ್ಧಾರ ಮಾಡುವುದಿಲ್ಲ. ಊಹೆ ಮಾಡಿಕೊಂಡು ಪ್ರತಿದಿನ ಮಾತನಾಡುವುದು ಸರಿಯಲ್ಲ ಎಂದರು.
ಎರಡ್ಮೂರು ಬಾರಿ ಗೆದ್ದವರು ಸಭೆ ಮಾಡಿದ್ದನ್ನ ಹೈಕಮಾಂಡ್ ಗಮನಿಸಿದೆ. ಅದರ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ವರದಿ ನೀಡುತ್ತಾರೆ. ಸಮಸ್ಯೆ ಬಗೆಹರಿಸುವ ಕೆಲಸ ಮಾಡುತ್ತಾರೆ ಎಂದು ಹೇಳಿದರು.
ಇನ್ನೆರಡು ವರ್ಷ ಸಿಎಂ ಹೇಳಿಕೆ ವಿಚಾರ. ಮತ್ತೆ ಅದನ್ನೇ ಯಾಕೆ ಹೇಳೋದು ನಿನ್ನೆ ಹೇಳಿದ್ದು ಮುಗಿತು ಎಂದು ಪರಮೇಶ್ವರ್ ತಿಳಿಸಿದರು.
Key words: Cabinet restructure, High command, Home Minister, Parameshwar
The post ಸಂಪುಟ ಪುನಾರಚನೆ: ನಮ್ಮ ಅನಿಸಿಕೆಯಂತೆ ಹೈಕಮಾಂಡ್ ನಿರ್ಧಾರ ಮಾಡಲ್ಲ- ಗೃಹ ಸಚಿವ ಪರಮೇಶ್ವರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




