25
May, 2026

A News 365Times Venture

25
Monday
May, 2026

A News 365Times Venture

ಸದ್ಯಕ್ಕೆ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ- ಪರೋಕ್ಷವಾಗಿ ತಾನೂ ಸಿಎಂ ಸ್ಥಾನದ ಆಕಾಂಕ್ಷಿಎಂದ್ರಾ ಸಚಿವ ಮಹದೇವಪ್ಪ

Date:

ಚಾಮರಾಜನಗರ, ಮೇ,23,2026 (www.justkannada.in): ಹೆಚ್ ಸಿ ಮಹದೇವಪ್ಪ ಮುಂದಿನ ಸಿಎಂ ಎಂದು ಘೋಷಣೆ ಕೂಗಿದ ವಿಚಾರ ಸಂಬಂಧ,  ಬೀದರ್ ನಿಂದ ಚಾಮರಾಜನಗರವರೆಗೂ ಸಿಎಂ ಎಂದು ಕೂಗುತ್ತಾರೆ.  ಕಳೆದ 40 ವರ್ಷಗಳಿಂದ ದಲಿತರು ಧ್ವನಿ ಇಲ್ಲದವರ ಜೊತೆ ಇದ್ದೇನೆ ಎಂದು ಸಮಾಜಕಲ್ಯಾಣ ಇಲಾಖೆ ಸಚಿವ ಹೆಚ್.ಸಿ ಮಹದೇವಪ್ಪ ತಿಳಿಸಿದರು.

ಚಾಮರಾಜನಗರದಲ್ಲಿ ಮಾತನಾಡಿದ ಸಚಿವ ಹೆಚ್.ಸಿ ಮಹದೇವಪ್ಪ, ಸದ್ಯಕ್ಕೆ ಸಿಎಂ ಕುರ್ಚಿ ಮೇಲೆ ಸಿದ್ದರಾಮಯ್ಯ ಇದ್ದಾರೆ. ಈಗ ಸಿದ್ದರಾಮಯ್ಯ ಕೂತಿದ್ದಾರೆ.  ಹೀಗಾಗಿ ಸಿಎಂ ಕುರ್ಚಿ ಖಾಲಿ ಇಲ್ಲ ಎಂದು ತಿಳಿಸಿದರು.

ಇಂದಿರಾ ಗಾಂಧಿ, ರಾಜೀವ್ ಗಾಂಧಿ ಉಗ್ರವಾದದ ವಿರುದ್ದ ಹೋರಾಡಿದರು. ಉಗ್ರವಾದದ ವಿರುದ್ದ ಹೋರಾಡಿ ತಮ್ಮ ಪ್ರಾಣವನ್ನೇ ಬಲಿಕೊಟ್ಟರು.  ಮೋದಿ ಸೇರಿದಂತೆ ಬಿಜೆಪಿಯವರು ಉಗ್ರರ ವಿರುದ್ದ ಮಾತನಾಡುತ್ತಾರೆ ಅಷ್ಟೆ. ಪ್ರಧಾನಿ ಆಗಿದ್ದ ವಾಜಪೇಯಿಗೆ ಸಾಂವಿಧಾನಿಕ ಹುದ್ದೆಯ ಜವಾಬ್ದಾರಿಯಿತ್ತು.  ಈಗ ಇವರು ಭಾವನಾತ್ಮಕ ಸೂಕ್ಷ್ಮ ವಿಚಾರ ಇಟ್ಟುಕೊಂಢು ರಾಜಕಾರಣ ಮಾಡಿದರು.  ವಿದೇಶದಿಂದ ಕಪ್ಪು ಹಣ ತರುವುದು,  2 ಕೋಟಿ ಉದ್ಯೋಗ ಸೃಷ್ಠಿ ಎಂದು 2014ರ ಚುನಾವಣಾ ಸಂದರ್ಭದಲ್ಲಿ ನೀಡಿದ್ದ ಭರವಸೆ ಏನಾಯ್ತು ಮೋದಿ ಆರ್ಥಿಕ ತಜ್ಞರ ಸಲಹೆ ಪಡೆಯದೇ ಬೇಜವಾಬ್ದಾರಿ ತೋರಿದರು ಎಂದು ವಾಗ್ದಾಳಿ ನಡೆಸಿದರು.

Key words: CM post, Minister, Mahadevappa, aspirant

The post ಸದ್ಯಕ್ಕೆ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ- ಪರೋಕ್ಷವಾಗಿ ತಾನೂ ಸಿಎಂ ಸ್ಥಾನದ ಆಕಾಂಕ್ಷಿಎಂದ್ರಾ ಸಚಿವ ಮಹದೇವಪ್ಪ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

MYSORE CRIME : ನಶೆಯಲ್ಲಿ ಪುಡಿ ರೌಡಿಗಳ ಹಾವಳಿ ; ಹಾಡಹಗಲೇ ದೌರ್ಜನ್ಯ, ಭಯದಲ್ಲಿ ನಾಗರಿಕರು!

  ಮೈಸೂರು, ಮೇ.೨೩,೨೦೨೬:  ನಗರದ ಹೃದಯ ಭಾಗಗಳಲ್ಲೇ ಗಾಂಜಾ ಮತ್ತು ಅಫೀಮ್ ನಶೆಯಲ್ಲಿ...

ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ತಂದಿದ್ದೇವೆ: ಟೀಕಾಕಾರರಿಗೆ ಸಚಿವ ಮಧು ಬಂಗಾರಪ್ಪ ತಿರುಗೇಟು

ಮೈಸೂರು,ಮೇ,23,2026 (www.justkannada.in): “ಒಬ್ಬ ಶಿಕ್ಷಣ ಸಚಿವನಾಗಿ ಸಾಹಿತಿ ದೇವನೂರು ಮಹದೇವ ಅವರ...

ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಸಿಎಂ  ಸಿದ್ದರಾಮಯ್ಯ

ಬೆಂಗಳೂರು,ಮೇ,23,2026 (www.justkannada.in): ಸೂರ್ಯನಗರದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗುವ ಮೂಲಕ...

ರಾಜಕಾರಣ ಬರುತ್ತೆ ಹೋಗುತ್ತೆ ಮಾತಿನ ಮೇಲೆ ನಿಗಾ ಇರಲಿ- ಶಾಸಕ ಇಕ್ಬಾಲ್ ಹುಸೇನ್ ಆಕ್ರೋಶ

ರಾಮನಗರ,ಮೇ,23,2026 (www.justkannada.in): ಡಿಸಿಎಂ ಡಿಕೆ ಶಿವಕುಮಾರ್ ವಿರುದ್ದ ಟೀಕಿಸಿದ್ದ ಜೆಡಿಎಸ್ ಯುವ...