ಬೆಂಗಳೂರು,ಜೂನ್,17,2026 (www.justkannada.in): ಬಿಡದಿಯಲ್ಲಿ ಟೌನ್ ಶಿಪ್ ನಿರ್ಮಾಣಕ್ಕೆ ರೈತರ ಭೂಮಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಬಿವೈ ವಿಜಯೇಂದ್ರ, ರೈತರನ್ನ ಒಕ್ಕಲೆಬ್ಬಿಸುವ ಕೆಲಸ ಮಾಡಬಾರದು. ಸರ್ಕಾರ ರೈತರ ಭೂಸ್ವಾಧೀನವನ್ನು ತಕ್ಷಣ ಕೈಬಿಡಬೇಕು ಎಂದು ಆಗ್ರಹಿಸಿದರು.
ಬಿಡದಿಯಲ್ಲಿ ಬಿಜೆಪಿ ನಾಯಕರ ವಿರುದ್ದ ಪೋಸ್ಟರ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಬಿವೈ ವಿಜಯೇಂದ್ರ, ನಮ್ಮನ್ನು ಕಾಂಗ್ರೆಸ್ ಶಾಸಕರು ಎಂದು ಸಿಎಂ ಭಾವಿಸಿದಂತಿದೆ. ನಮ್ಮ ವಿರುದ್ದ ಪೋಸ್ಟರ್ ಆಂದೋಲನಕ್ಕೆ ಹೆದರಲ್ಲ ಎಂದರು.
ಗ್ಯಾರಂಟಿ ಯೋಜನೆ ಪರಿಷ್ಕರಣೆ ವಿಚಾರ, ಐಟಿ ಪಾವತಿದಾರರಿಗೆ ಗೃಹಲಕ್ಷ್ಮೀ ಹಣ ಏಕೆ ಎಂದಿದ್ದಾರೆ. ಈಗ ನಿಮಗೆ ಐಟಿ ಪಾವತಿದಾರರ ನೆನಪಾಗಿದ್ಯಾ? ನಿಮ್ಮ ಗ್ಯಾರಂಟಿ ಅನುಷ್ಟಾನ ಸಮಿತಿ ಕತ್ತೆ ಕಾಯುತ್ತಿದೆಯಾ? ಹಣ ಕ್ರೂಢೀಕರಿಸಲು ಒಂದೊಂದಕ್ಕೆ ಕತ್ತರಿ ಹಾಕುತ್ತಿದ್ದಾರೆ ಎಂದು ಬಿವೈ ವಿಜಯೇಂದ್ರ ಕಿಡಿಕಾರಿದರು.
Key words: government, land acquisition, farmers, BY Vijayendra
The post ಸರ್ಕಾರ ಬಿಡದಿ ರೈತರ ಭೂಸ್ವಾದೀನ ತಕ್ಷಣ ಕೈ ಬಿಡಬೇಕು- ಬಿವೈ ವಿಜಯೇಂದ್ರ ಆಗ್ರಹ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




