6
May, 2026

A News 365Times Venture

6
Wednesday
May, 2026

A News 365Times Venture

ಸಾರ್ವಜನಿಕರೇ ಎಚ್ಚರ: ಮೂತ್ರ ವಿಸರ್ಜನೆ ತಡೆಗೆ ಮೈಸೂರು ಪಾಲಿಕೆ ವಿನೂತನ ಕ್ರಮ

Date:

ಮೈಸೂರು,ಮೇ,6,2026 (www.justkannada.in):  ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ತಡೆದು ದುರ್ವಾಸನೆ ನಿವಾರಣೆಗೆ ಮೈಸೂರು ಮಹಾನಗರ ಪಾಲಿಕೆ ವಿನೂತನ ಯೋಜನೆ ಜಾರಿಗೆ ತಂದಿದೆ. ಇನ್ಮುಂದೆ ಖಾಲಿ ಕಾಂಪೌಂಡ್‌ಗಳ ಮುಂದೆ ನಿಂತು ಮೂತ್ರ ವಿಸರ್ಜನೆ ಮಾಡುವ ಮುನ್ನ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಮೈಸೂರು ಕೇಂದ್ರ ಬಸ್ ನಿಲ್ದಾಣದ ಮುಂಭಾಗದ ಸುಮಾರು 80 ಮೀಟರ್ ಉದ್ದದ ಕಾಂಪೌಂಡ್‌ ಗೆ ಸ್ಟೇನ್‌ ಲೆಸ್ ಸ್ಟೀಲ್ ರಿಫ್ಲಕ್ಷನ್ ಶೀಟ್‌ ಗಳನ್ನು ಅಳವಡಿಸಲಾಗಿದ್ದು, ಕನ್ನಡಿಯ ಮಾದರಿಯಲ್ಲಿ ಪ್ರತಿಬಿಂಬ ಕಾಣುವಂತೆ ವ್ಯವಸ್ಥೆ ಮಾಡಲಾಗಿದೆ. ಅದರ ಮುಂದೆ ನಿಂತವರ ಸಂಪೂರ್ಣ ಚಿತ್ರಣ ಹಿಂಬದಿಯವರಿಗೆ ಕಾಣುವಂತೆ ವಿನ್ಯಾಸಗೊಳಿಸಲಾಗಿದೆ.

ಕನ್ನಡಿಗಳ ಸುತ್ತ ಎಲ್ ಇಡಿ ಲೈಟ್‌ ಗಳನ್ನು ಅಳವಡಿಸಲಾಗಿದ್ದು, ಸಂಜೆ ವೇಳೆ ಸ್ಟ್ರೀಟ್ ಲೈಟ್ ಆನ್ ಆದಾಗ ಅವು ಸಹ ಬೆಳಗುವಂತೆ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಗಬ್ಬು ವಾಸನೆ ಸೃಷ್ಟಿಸುತ್ತಿದ್ದವರನ್ನು ತಡೆಯುವ ಉದ್ದೇಶದಿಂದ ಸುಮಾರು ₹9.5 ಲಕ್ಷ ವೆಚ್ಚದಲ್ಲಿ ಈ ಯೋಜನೆ ಜಾರಿಗೆ ತರಲಾಗಿದೆ.

ರಾಜ್ಯದಲ್ಲೇ ಮೊದಲ ಬಾರಿಗೆ ಜಾರಿಯಾಗಿರುವ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದ ಮುಂಭಾಗದ ಕಾಂಪೌಂಡ್‌ನಲ್ಲಿ ಅಳವಡಿಸಲಾಗಿದ್ದು, ನಗರ ಪಾಲಿಕೆಯ ಈ ನೂತನ ಪ್ರಯತ್ನಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Mysuru City Corporation has introduced a unique plan to stop public urination and foul smell near empty compound walls. Stainless steel mirror reflections with LED lights have been installed along an 80-meter compound wall near the city bus stand, making people conscious as their reflection becomes visible to everyone nearby. The pilot project, costing ₹9.5 lakh, is the first of its kind in Karnataka and has received public appreciation.

#Mysuru #MCC #SmartCity #PublicAwareness #CleanMysuru #SwachhBharat #Karnataka #InnovativeIdea #CityDevelopment #PublicHygiene

Key words: Mysuru, unique plan, stop, public urination

The post ಸಾರ್ವಜನಿಕರೇ ಎಚ್ಚರ: ಮೂತ್ರ ವಿಸರ್ಜನೆ ತಡೆಗೆ ಮೈಸೂರು ಪಾಲಿಕೆ ವಿನೂತನ ಕ್ರಮ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

DMK ಬೆನ್ನಿಗೆ ಚೂರಿ ಹಾಕಿ ಕಾಂಗ್ರೆಸ್ ಗೆದ್ದೆತ್ತಿನ ಬಾಲ ಹಿಡಿದಿದೆ-ಆರ್.ಅಶೋಕ್ ವ್ಯಂಗ್ಯ

ಬೆಂಗಳೂರು, ಮೇ 6,2026 (www.justkannada.in): ತಮಿಳುನಾಡಿನಲ್ಲಿ ಡಿಎಂಕೆ ಬೆನ್ನಿಗೆ ಚೂರಿ ಹಾಕಿರುವ...

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಭರ್ಜರಿ ಯಶಸ್ಸು: ರಾಜ್ಯ ನಾಯಕರ ವಿರುದ್ಧ ಕಾರ್ಯಕರ್ತರ  ಭುಗಿಲೆದ್ದ ಆಕ್ರೋಶ.

  Mysore, May.06,2026: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸಂಘಟನೆ ಮತ್ತೊಮ್ಮೆ ತನ್ನ ಶಕ್ತಿ...

ಸರ್ಕಾರದ ಯೋಜನೆಗಳಿಗೆ ಜನರ ಮೆಚ್ಚುಗೆ: ಜನಾಶೀರ್ವಾದದಿಂದ ಪಕ್ಷಕ್ಕೆ  ಗೆಲುವು-ಸಿಎಂ ಸಿದ್ದರಾಮಯ್ಯ

ಮೈಸೂರು, ಮೇ, 06,2026 (www.justkannada.in): ಕಾಂಗ್ರೆಸ್ ಸರ್ಕಾರದ ಯೋಜನೆಗಳು ಜನಮೆಚ್ಚುಗೆಗೆ ಪಾತ್ರವಾಗಿದ್ದು,...

ಹೈ ಕಮಾಂಡ್ ಹೇಳಿದ್ರೆ 5 ವರ್ಷ ಇರ್ತೇನೆ: ರಾಹುಲ್ ಗಾಂಧಿ ಕರೆದ್ರೆ ದೆಹಲಿಗೆ -ಸಿಎಂ ಸಿದ್ದರಾಮಯ್ಯ

ಮೈಸೂರು,ಮೇ,6,2026 (www.justkannada.in):  ಹೈಕಮಾಂಡ್ ಹೇಳಿದರೇ 5 ವರ್ಷ ಇರುತ್ತೇನೆ. ಹೈಕಮಾಂಡ್ ಏನು...