29
July, 2026

A News 365Times Venture

29
Wednesday
July, 2026

A News 365Times Venture

ಹಲಗಾ 70 MLD ಒಳಚರಂಡಿ ಸಂಸ್ಕರಣಾ ಘಟಕದ ಕಾಮಗಾರಿ ಅಂತಿಮ ಹಂತದಲ್ಲಿ: ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ

Date:

ಬೆಳಗಾವಿ, ಜುಲೈ 28,2026 (www.justkannada.in): ಬೆಳಗಾವಿ ತಾಲೂಕಿನ ಹಲಗಾ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ 70 MLD (ಮಿಲಿಯನ್ ಲೀಟರ್ ಪ್ರತಿದಿನ) ಸಾಮರ್ಥ್ಯದ ಒಳಚರಂಡಿ ಸಂಸ್ಕರಣಾ ಘಟಕ (STP) ಕಾಮಗಾರಿಯ ಸ್ಥಳಕ್ಕೆ ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಯೋಜನೆಯ ಪ್ರಗತಿ, ಗುಣಮಟ್ಟ ಹಾಗೂ ತಾಂತ್ರಿಕ ಅಂಶಗಳನ್ನು ಸ್ಥಳದಲ್ಲೇ ಪರಿಶೀಲಿಸಿದ ಸಚಿವರು, ಕಾಮಗಾರಿಯು ಶೇಕಡಾ 90ರಷ್ಟು ಪೂರ್ಣಗೊಂಡಿದ್ದು, ಉಳಿದಿರುವ ಸಣ್ಣಪುಟ್ಟ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಿ ಯೋಜನೆಯನ್ನು ಸಾರ್ವಜನಿಕ ಬಳಕೆಗೆ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಘಟಕದ ಅನುಷ್ಠಾನದ ಪ್ರಗತಿ, ತಾಂತ್ರಿಕ ವೈಶಿಷ್ಟ್ಯಗಳು ಹಾಗೂ ಕಾರ್ಯನಿರ್ವಹಣೆಯ ಕುರಿತಂತೆ ಅಧಿಕಾರಿಗಳಿಂದ ಸಚಿವರು ಸಮಗ್ರ ಮಾಹಿತಿ ಪಡೆದುಕೊಂಡರು.

ನಗರದಲ್ಲಿ ವೈಜ್ಞಾನಿಕ ಒಳಚರಂಡಿ ನಿರ್ವಹಣೆ, ಪರಿಸರ ಸಂರಕ್ಷಣೆ ಹಾಗೂ ಸ್ವಚ್ಛತೆಯನ್ನು ಬಲಪಡಿಸುವಲ್ಲಿ ಈ ಯೋಜನೆ ಮಹತ್ವದ ಪಾತ್ರ ವಹಿಸಲಿದೆ ಎಂದು ಸಚಿವರು ತಿಳಿಸಿದರು.
ಪರಿಶೀಲನಾ ವೇಳೆ ಸ್ಥಳೀಯ ಜನಪ್ರತಿನಿಧಿಗಳು, ಸಂಬಂಧಿತ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಯೋಜನೆಯ ಇಂಜಿನಿಯರ್‌ಗಳು ಉಪಸ್ಥಿತರಿದ್ದರು.

key words: Work,  Halaga, 70 MLD sewage,  final stage, Minister, Dr. Yatindra Siddaramaiah

The post ಹಲಗಾ 70 MLD ಒಳಚರಂಡಿ ಸಂಸ್ಕರಣಾ ಘಟಕದ ಕಾಮಗಾರಿ ಅಂತಿಮ ಹಂತದಲ್ಲಿ: ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

CWRC ಆದೇಶದ ವಿರುದ್ದ ಮೇಲ್ಮನವಿಗೆ ನಿರ್ಧಾರ- ಸಿಎಂ ಡಿಕೆ ಶಿವಕುಮಾರ್

ನವದೆಹಲಿ,ಜುಲೈ,29,2026 (www.justkannada.in):  ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸಿರುವ ಕಾವೇರಿ ನೀರು ನಿರ್ವಹಣಾ...

ಅತ್ಯಾಚಾರಿಗಳನ್ನ ಸಮರ್ಥಿಸಿದ್ದ ಜೋಶಿಗೆ ಶಿಕ್ಷಣ ಸಚಿವ ಸ್ಥಾನ: ಕನ್ನಡಿಗರೆಲ್ಲರೂ ತಲೆ ತಗ್ಗಿಸುವ ಸ್ಥಿತಿ- ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಜುಲೈ,29,2026 (www.justkannada.in):   ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಬಳಿಕ  ಕೇಂದ್ರ ಶಿಕ್ಷಣ ಸಚಿವ...

ತಮಿಳುನಾಡು ಸಿಎಂ ಖುಷಿ ಪಡಿಸಲು ರೈತರಿಗೆ ಅನ್ಯಾಯ: ಏಕೆ ಇಂತಹ ಕಪಟ ನಾಟಕ-ಬಿವೈ ವಿಜಯೇಂದ್ರ ಕಿಡಿ

ಶಿವಮೊಗ್ಗ,ಜುಲೈ,29,2026 (www.justkannada.in): ತಮಿಳುನಾಡು ಸಿಎಂ ಖುಷಿ ಪಡಿಸಲು ಕದ್ದುಮುಚ್ಚಿ ರಾತ್ರೋರಾತ್ರಿ ನೀರು...

ಅಮೋಘ ನಾಟಕವೊಂದರ ವಜ್ರ ಮಹೋತ್ಸವ ವರ್ಷ : ಜೊತೆಗಿರುವನು ಚಂದಿರ- ಒಂದು ಸುಂದರ ಬೆಳದಿಂಗಳು

ಬೆಂಗಳೂರು,ಜುಲೈ,29,2026 (www.justkannada.in): ಕಳೆದ ವಾರ ಇಳೆಗಿಳಿದಿಹ ಬೆಳದಿಂಗಳಲ್ಲಿ ಜಳಕ ಮಾಡಿದಂತಹ ಅನುಭವ...