ಮೈಸೂರು,ಜೂನ್,7,2025 (www.justkannada.in): ಆರ್ ಸಿಬಿ ಸಂಭ್ರಮಾಚರಣೆ ದುರಂತದಲ್ಲಿ 11 ಮಂದಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ, ಡಿಸಿಎಂ ಹಾಗೂ ಗೃಹಸಚಿವರು ಸಂಬಂಧಪಟ್ಟವರು ರಾಜೀನಾಮೆ ನೀಡಬೇಕು. ಈ ಸಾವುಗಳಿಗೆ ಇವರುಗಳೇ ನೇರ ಹೊಣೆ ಎಂದು ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಆಗ್ರಹಿಸಿದರು.
ಮೈಸೂರಿನಲ್ಲಿ ಇಂದು ಮಾತನಾಡಿದ ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್, ನಿಮ್ಮ ಕೈಯ್ಯಲ್ಲಿ 11 ಜನರ ಸಾವಿನ ರಕ್ತವಿದೆ. ಇದೊಂದು ಪ್ರೈವೇಟ್ ಕಾರ್ಯಕ್ರಮವಲ್ಲ. ಇದೊಂದು ಚೀಪ್ ರೇಟ್ ಗಿಮಿಕ್. ಕಾರ್ಯಕ್ರಮದಲ್ಲಿ ಅವರ ಮಕ್ಕಳು, ಮೊಮ್ಮಕ್ಕಳಿಗೆ ವೇದಿಕೆ ಕಲ್ಪಿಸಿಕೊಡುತ್ತಾರೆ. ಐಪಿಎಲ್ ಮ್ಯಾಚ್ ಗೆದ್ದಿರುವುದು ಒಂದು ದೊಡ್ಡ ಶಾಪ. ರಾಜ್ಯಸರ್ಕಾರ ಒತ್ತಡಕ್ಕೆ ಮಣಿದು ತರಾತುರಿಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ್ದು ಸರಿಯಲ್ಲ. ಆರ್ ಸಿಬಿ ಹೆಸರಿನಲ್ಲಿ ಕನ್ನಡಿಗರು ಇರುವುದು ಇಬ್ಬರೇ. ಆದರೂ ಕನ್ನಡಿಗರ ಭಾವನೆ ಹೆಚ್ಚಾಗಿದೆ. ಒಂದು ಕಾರ್ಯಕ್ರಮ ನಡೆಸುವಾಗ ಹಲವು ಮುಂಜಾಗ್ರತಾ ಕ್ರಮಕೈಗೊಳ್ಳಬೇಕು. ನೂರು ಆಂಬುಲೆನ್ಸ್, ಸ್ಟ್ರಚರ್, ಹಗ್ಗ. ,ಕ್ರೌಡ್ ಕಟ್ಟಿಂಗ್ ಉಪಕರಣ ಇಟ್ಟುಕೊಳ್ಳಬೇಕು. ಇಂಟೆಲಿಜೆನ್ಸ್ ಫೇಲ್ ಆದ ಮೇಲೆ ಲಾ ಅಂಡ್ ಆರ್ಡರ್ ಆದ್ರೂ ಕಾರ್ಯನಿರ್ವಹಿಸಬೇಕಿತ್ತಲ್ಲವೇ? ಎಂದು ಪ್ರಶ್ನಿಸಿದರು.
ಆರ್ ಸಿಬಿ ಗೆಲುವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಭಾಸ್ಕರ್ ರಾವ್
ಇದೇ ವೇಳೆ ಆರ್ ಸಿಬಿ ಗೆಲುವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಭಾಸ್ಕರ್ ರಾವ್, ಆರ್ ಸಿಬಿ ಬೆಟ್ಟಿಂಗ್ ನಿಂದ ಗೆದ್ದು ಬಂದಿದ್ದಾರಾ? ಇದು ಬೆಟ್ಟಿಂಗ್ ನಿಂದ ಗೆದ್ದು ಬಂದಿದ್ದಾರಾ ಎಂಬ ಅನುಮಾನ ಮೂಡುತ್ತದೆ. ಆರ್‌ಸಿಬಿ ಕರ್ನಾಟಕ, ಭಾರತದ ತಂಡವಲ್ಲ. ಇದೊಂದು ಖಾಸಗಿ ಕ್ಲಬ್ ಹರಾಜು ಹಾಕಿ ಖರೀದಿಸಿರುವ ತಂಡ. ಇಂತಹ ತಂಡದ ಬಗ್ಗೆ ಸರ್ಕಾರಕ್ಕೇ ಯಾಕಿಷ್ಟು ಪ್ರೀತಿ? ಆರ್ ಸಿಬಿ ಟೀಂ ಹೈಜಾಕ್ ಮಾಡಿಕೊಳ್ಳಲು ಸರ್ಕಾರ ಯತ್ನ ಮಾಡಿತು. ಡಿಪಿಆರ್ ಅನುಮತಿ ಪಡೆಯದೇ ಕಾರ್ಯಕ್ರಮ ನಡೆಸಿದರು. ಇವರೇನು ಹಣ ಹೂಡಿದ್ರಾ? ಟೀಂ ಕಟ್ಟಿದ್ರಾ? ಗೆಲ್ಲಿಸಿದ್ರಾ? ಹೈಕೋರ್ಟ್ ನಿರ್ದೇಶನ ಉಲ್ಲಂಘಿಸಿ ಕಾರ್ಯಕ್ರಮ ಮಾಡಿದ್ದಾರೆ. ಬೆಂಗಳೂರಿನಲ್ಲಿ ಏಳು ಏಜೆನ್ಸಿಗಳದ್ದೂ ತಪ್ಪಿದೆ. ಪರಸ್ಪರ ಒಬ್ಬರಿಗೊಬ್ಬರು ಹೊಂದಾಣಿಕೆ ಇಲ್ಲದೆ ಕಾರ್ಯಕ್ರಮ ಯಡವಟ್ಟಾಗಿದೆ. ಬೆಂಗಳೂರಿನಲ್ಲಿ ರಾತ್ರಿಯಿಡೀ ಸಂಭ್ರಮ ನಡೆಸಿ ಮರುದಿನ ಕಾರ್ಯಕ್ರಮ ನಡೆಸಿದ್ದು ತಪ್ಪು? ಎಂದು ಭಾಸ್ಕರ್ ರಾವ್ ಟೀಕಿಸಿದರು.
Key words: Stampede case, CM, DCM, Home Minister, resign, Bhaskar Rao
The post 11 ಜನರ ಸಾವಿಗೆ ನೀವೇ ನೇರ ಹೊಣೆ: ಸಿಎಂ, ಡಿಸಿಎಂ. ಗೃಹ ಸಚಿವರೇ ರಾಜೀನಾಮೆ ನೀಡಿ- ಭಾಸ್ಕರ್ ರಾವ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.