ಬೆಂಗಳೂರು,ಜೂನ್,20,2026 (www.justkannada.in): ಕಾಂಗ್ರೆಸ್ ಸರ್ಕಾರದಲ್ಲಿ ಮೇಕೆದಾಟು ಯೋಜನೆ ಜಾರಿ ಆಗಲ್ಲ. ಸುಮ್ಮನೆ ಬರೀ ಕಥೆ ಹೇಳುತ್ತಾರೆ ಎಂದು ಬಿಜೆಪಿ ಶಾಸಕ ಅಶ್ವಥ್ ನಾರಾಯಣ್ ಲೇವಡಿ ಮಾಡಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಅಶ್ವಥ್ ನಾರಾಯಣ್, ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರ ಸಹಕಾರ ನೀಡಿದೆ. ಕೋರ್ಟ್ ನಿಂದಲೂ ಯೋಜನೆಗೆ ಸಹಕಾರ ಸಿಕ್ಕಿದೆ. ಮೇಕೆದಾಟು ಯೋಜನೆ ಕಾನೂನುಬದ್ಧ, ನ್ಯಾಯಬದ್ಧವಾಗಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಈ ಯೋಜನೆ ಜಾರಿ ಆಗಲ್ಲ ಇವರ ಕಾಲದಲ್ಲಿ ಏನು ಆಗಲ್ಲ ಬರೀ ಕಥೆ ಹೇಳುತ್ತಾರೆ ಎಂದರು.
ಗ್ಯಾರಂಟಿ ಯೋಜನೆಗಳು ಮರುಪರಿಷ್ಕರಣೆ ಆಗಲಿ. ಯೋಜನೆಗಳ ದುರ್ಬಳಕೆಯಾಗುತ್ತಿದೆ. ಆದರೆ ಏಕಾಏಕಿ ಗ್ಯಾರಂಟಿಗಳನ್ನು ನಿಲ್ಲಿಸುವುದು ಬೇಡ. ಪರಿಷ್ಕರಣೆ ಜೊತೆಗ ಯೋಜನೆ ಸಹ ಮುಂದುವರಿಯಬೇಕು. ಮರುಪರಿಶೀಲನೆ ಪಿಳ್ಳೆನೆಪ ಮಾಡಿಕೊಂಡು ಯೋಜನೆ ನಿಲ್ಲಿಸಬಾರದು ಅಧಿಕಾರಿಗಳೂ ಸರಿಯಾಗಿ ಕಾರ್ಯನಿರ್ವಹಿಸಲಿ. ಎಲ್ಲರಿಗೂ ಕೊಡುವುದಾಗಿ ಹೇಳಿದ ಮೇಲೆ ಎಲ್ಲರಿಗೂ ಗ್ಯಾರಂಟಿ ಕೊಡಲಿ. ದಿನಾಂಕ ನಿಗದಿ ಮಾಡಿ ಯೋಜನೆಯ ಲಾಭ ಜನರಿಗೆ ಕೊಡಲಿ ಎಂದರು.
Key words: Mekedatu scheme, Congress, government, MLA, Ashwath Narayan
The post ಕಾಂಗ್ರೆಸ್ ಸರ್ಕಾರದಲ್ಲಿ ಮೇಕೆದಾಟು ಯೋಜನೆ ಜಾರಿ ಆಗಲ್ಲ- ಶಾಸಕ ಅಶ್ವಥ್ ನಾರಾಯಣ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




