1
September, 2026

A News 365Times Venture

1
Tuesday
September, 2026

A News 365Times Venture

ಸಿಎಂ ಡಿಕೆಶಿ ಅವರ 6ನೇ ಗ್ಯಾರಂಟಿ – ಹಿಂದೂಗಳಿಗೆ ‘ಸುನ್ನತ್ ಗ್ಯಾರಂಟಿ’- ಸಚಿವ ರಾಯರೆಡ್ಡಿ ಹೇಳಿಕೆಗೆ ಆರ್.ಅಶೋಕ್ ವ್ಯಂಗ್ಯ

Date:

ಬೆಂಗಳೂರು,ಆಗಸ್ಟ್,31,2026 (www.justkannada.in):  ಇಸ್ಲಾಂ ಧರ್ಮವೇ ಶ್ರೇಷ್ಠ ಎಂದು ಹೇಳಿಕೆ ನೀಡಿರುವ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರಿಗೆ ವಿಪಕ್ಷ ನಾಯಕ ಆರ್.ಅಶೋಕ್ ತಿರುಗೇಟು ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಆರ್.ಅಶೋಕ್,  ಸಿಎಂ ಡಿಕೆಶಿ ಅವರ 6ನೇ ಗ್ಯಾರಂಟಿ – ಹಿಂದೂಗಳಿಗೆ ‘ಸುನ್ನತ್ ಗ್ಯಾರಂಟಿ’ ಎಂದು ವ್ಯಂಗ್ಯವಾಡಿದ್ದಾರೆ.

ಸಿಎಂ ಡಿಕೆ ಶಿವಕುಮಾರ್ ಅವರೇ, ಹಿಂದೂಗಳ ಮತ ಬೇಕಾದಾಗ ದೇವಸ್ಥಾನ ಸುತ್ತುವ ನಾಟಕ ಆಡುವ ನಿಮಗೆ, ಅಧಿಕಾರ ಸಿಕ್ಕ ಮೇಲೆ ನಿಮ್ಮದೇ ಸಂಪುಟದ ಸಚಿವರು ಅದೇ ಹಿಂದೂ ಧರ್ಮವನ್ನು ಅವರಹೇಳನ ಮಾಡಿದಾಗ ಮೌನ ವಹಿಸುವುದೇಕೆ? ಎಂದು ಪ್ರಶ್ನಿಸಿದ್ದಾರೆ.

ನಿಮ್ಮ ಸಂಪುಟದ ಸಚಿವ ಬಸವರಾಜ ರಾಯರೆಡ್ಡಿ ಅವರು “ಇಸ್ಲಾಂ ಧರ್ಮವೇ ಶ್ರೇಷ್ಠ, ನಾನು ಮಠಕ್ಕೆ ಹೋಗುವುದಿಲ್ಲ” ಎಂದು ಬಹಿರಂಗವಾಗಿ ನೀಡಿರುವ ಪ್ರಚೋದನಾಕಾರಿ ಹೇಳಿಕೆ ಇಡೀ ರಾಜ್ಯಾದ್ಯಂತ ಕೋಟ್ಯಂತರ ಹಿಂದೂಗಳ ಭಾವನೆಗೆ ಧಕ್ಕೆ ತಂದಿದೆ.

ಧರ್ಮದ ಬಗ್ಗೆ ಯಾರಿಗಾದರೂ ಅವರವರ ವೈಯಕ್ತಿಕ ನಂಬಿಕೆ ಇರಬಹುದು. ಆದರೆ ಜವಾಬ್ದಾರಿಯುತ ಸಚಿವ ಸ್ಥಾನದಲ್ಲಿದ್ದುಕೊಂಡು ಕೋಟ್ಯಂತರ ಹಿಂದೂಗಳ ಆರಾಧನೆ, ಪವಿತ್ರ ಮಠ-ಮಾನ್ಯಗಳು ಮತ್ತು ಸನಾತನ ಪರಂಪರೆಯ ಬಗ್ಗೆ ಹಗುರವಾಗಿ ಮಾತನಾಡುವುದು ಅಹಂಕಾರ ಮತ್ತು ಹಿಂದೂ ಧರ್ಮದ ಮೇಲಿನ ಬಹಿರಂಗ ದಾಳಿ, ಹಿಂದೂಗಳ ಶ್ರದ್ಧೆ, ನಂಬಿಕೆಗಳಿಗೆ ಮಾಡಿರುವ ಘೋರ ಅಪಮಾನ.

ಕರ್ನಾಟಕದ ಕೋಟ್ಯಾಂತರ ಹಿಂದೂಗಳಿಗೆ ರಾಯರೆಡ್ಡಿ ಅವರ ಅವಹೇನಕಾರಿ ಹೇಳಿಕೆಗಿಂತಲೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಜಾಣ ಮೌನವೇ ಹೆಚ್ಚಿನ ಆಕ್ರೋಶ ತರಿಸುತ್ತಿದೆ ನಿಮ್ಮ ಈ ಮೌನವೇ ರಾಜ್ಯಕ್ಕೆ ಒಂದು ಸ್ಪಷ್ಟ ಸಂದೇಶ ನೀಡುತ್ತಿದೆ ಎಂದು ಕಿಡಿಕಾರಿದ್ದಾರೆ.

ಹಿಂದೂ ವಿರೋಧಿ ಅವಹೇಳನಕಾರಿ ಹೇಳಿಕೆಯನ್ನು ಬಹಿರಂಗವಾಗಿ ಖಂಡಿಸಿ.

“ಹಿಂದೂಗಳ ಭಾವನೆ ನಜ್ಜುಗುಜ್ಜಾದರೂ ಚಿಂತೆಯಿಲ್ಲ, ಓಲೈಕೆ ರಾಜಕಾರಣಕ್ಕಾಗಿ ಸಚಿವರನ್ನು ಮಾತ್ರ ರಕ್ಷಿಸಬೇಕು!” ಇದೇ ಕಾಂಗ್ರೆಸ್‌ ಪಕ್ಷದ ಹಿಂದೂ ವಿರೋಧಿ ಮನಸ್ಥಿತಿಯ ಅಸಲಿ ಮುಖವಲ್ಲವೇ? ಸಿಎಂ ಡಿಕೆ ಶಿವಕುಮಾರ್ ಅವರೇ , ಈಗ ನಿಮಗಿದು ಅಗ್ನಿಪರೀಕ್ಷೆ! ರಾಯರೆಡ್ಡಿ ಅವರ ಈ ಹಿಂದೂ ವಿರೋಧಿ ಅವಹೇಳನಕಾರಿ ಹೇಳಿಕೆಯನ್ನು ಬಹಿರಂಗವಾಗಿ ಖಂಡಿಸಿ.

ಕೋಟ್ಯಂತರ ಹಿಂದೂಗಳ ಧಾರ್ಮಿಕ ಭಾವನೆಗೆ ಮಾಡಿರುವ ಅವರಿಂದ ತಕ್ಷಣವೇ ಸಾರ್ವಜನಿಕ ಕ್ಷಮೆಯಾಚನೆ ಮಾಡಿಸಿ. ಅವರು ಅದಕ್ಕೆ ಸಿದ್ಧರಿಲ್ಲದಿದ್ದರೆ, ಅವರನ್ನು ತಕ್ಷಣವೇ ಸಚಿವ ಸಂಪುಟದಿಂದ ವಜಾಗೊಳಿಸಿ. ಇವೆರಡನ್ನೂ ಮಾಡದಿದ್ದರೆ ರಾಜ್ಯದ ಕೋಟ್ಯಾಂತರ ಹಿಂದೂಗಳ ಈ ಪ್ರಶ್ನೆಗಳಿಗೆ ನಿಮ್ಮ ಮೌನವೇ ಉತ್ತರವಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಸನಾತನ ಧರ್ಮವನ್ನು ನಿಂದಿಸಿದ್ದು ರಾಯರೆಡ್ಡಿ ಅವರ ವೈಯಕ್ತಿಕ ಅಭಿಪ್ರಾಯವೋ? ಅಥವಾ ಇದು ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಮ್ಮತಿ ಪಡೆದ hidden ಅಜೆಂಡಾನೋ?”

ಹಿಂದೂಗಳ ಮತಗಳನ್ನು ಪಡೆದು ಅಧಿಕಾರಕ್ಕೇರಿ, ಅದೇ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ದಿನನಿತ್ಯ ತುಚ್ಛವಾಗಿ ನಿಂದಿಸುವ ಈ ನೀಚ ರಾಜಕಾರಣವನ್ನು ಕರ್ನಾಟಕ ಎಂದಿಗೂ ಸಹಿಸುವುದಿಲ್ಲ.

ಹಿಂದೂ ಧರ್ಮ ಮತ್ತು ಮಠ-ಮಾನ್ಯಗಳ ಮೇಲೆ ದಾಳಿಯಾದಾಗ ಕಣ್ಣು, ಕಿವಿ, ಬಾಯಿ ಮುಚ್ಚಿ ಕುಳಿತುಕೊಳ್ಳುವ ಮುಖ್ಯಮಂತ್ರಿ ಡಿಕೆಶಿ ಅವರು  ಈ ಧಾರ್ಮಿಕ ನಿಂದನೆಯ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ರಾಯರೆಡ್ಡಿ ಅವರು ತಕ್ಷಣ ಬಹಿರಂಗ ಕ್ಷಮೆ ಕೇಳಬೇಕು, ಇಲ್ಲವೇ ಸಂಪುಟದಿಂದ ಹೊರನಡೆಯಬೇಕು! ಡಿ.ಕೆ. ಶಿವಕುಮಾರ್ ಅವರೇ – ಕೋಟ್ಯಂತರ ಹಿಂದೂಗಳ ಧಾರ್ಮಿಕ ಭಾವನೆ ದೊಡ್ಡದೋ ಅಥವಾ ನಿಮ್ಮ ಸಚಿವರ ಕುರ್ಚಿ ಮತ್ತು ಮತಬ್ಯಾಂಕ್ ದೊಡ್ಡದೋ? ಕರ್ನಾಟಕ ನೋಡುತ್ತಿದೆ. ರಾಜ್ಯದ ಜನತೆ ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂದು ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

CM DKS, 6th guarantee, ‘Sunnat guarantee,’R.Ashok

The post ಸಿಎಂ ಡಿಕೆಶಿ ಅವರ 6ನೇ ಗ್ಯಾರಂಟಿ – ಹಿಂದೂಗಳಿಗೆ ‘ಸುನ್ನತ್ ಗ್ಯಾರಂಟಿ’- ಸಚಿವ ರಾಯರೆಡ್ಡಿ ಹೇಳಿಕೆಗೆ ಆರ್.ಅಶೋಕ್ ವ್ಯಂಗ್ಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಶೇ.7.8ರಷ್ಟು ಜಿಡಿಪಿ ಜಿಗಿತ: ಪ್ರಧಾನಿ ಮೋದಿ ಸಂತಸ

ನವದೆಹಲಿ, ಸೆಪ್ಟೆಂಬರ್ 1,2026 (www.justkannada.in): ಜಾಗತಿಕ ಯುದ್ಧ ಸಂಘರ್ಷಗಳು, ತೈಲ ಬೆಲೆ...

ಗೃಹ ಸಚಿವ ಪ್ರಿಯಾಂಕ್ ಖರ್ಗೆಗೆ ಜೀರೋ ಟ್ರಾಫಿಕ್: ಬಿ.ಸಿ ಪಾಟೀಲ್ ಆಕ್ಷೇಪ

ಬೆಂಗಳೂರು,ಸೆಪ್ಟಂಬರ್,1,2026 (www.justkannada.in):  ಗೃಹ ಸಚಿವ ಪ್ರಿಯಾಂಕ್ ಖರ್ಗೆಗೆ ಜೀರೋ ಟ್ರಾಫಿಕ್ ನೀಡಿದ್ದಕ್ಕೆ...

ಬಿಜೆಪಿಯವರು ಪಾದಯಾತ್ರೆ ಮಾಡೋದು ಒಳ್ಳೆಯದೇ- ಸಿಎಂ ಡಿಕೆ ಶಿವಕುಮಾರ್

ಬೆಂಗಳೂರು,ಸೆಪ್ಟಂಬರ್,1,2026 (www.justkannada.in): ಕಾಂಗ್ರೆಸ್‌ ಸರ್ಕಾರದ ವೈಫಲ್ಯಗಳನ್ನು (BJP Bellary Chalo) ಖಂಡಿಸಿ...

ಮಾಫಿ ಸಾಕ್ಷಿಗೆ ಸಮ್ಮತಿ ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ ನಟ ದರ್ಶನ್

ಬೆಂಗಳೂರು,ಸೆಪ್ಟಂಬರ್,1,2026 (www.justkannada.in):  ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎ14 ಪ್ರದೋಷ್ ಮಾಫಿ...