ಬೆಂಗಳೂರು,ಸೆಪ್ಟಂಬರ್,1,2026 (www.justkannada.in): ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು (BJP Bellary Chalo) ಖಂಡಿಸಿ ಇಂದಿನಿಂದ 10 ದಿನಗಳ ಕಾಲʼಬಿಜೆಪಿ ಬಳ್ಳಾರಿ ಚಲೋʼ ಪಾದಯಾತ್ರೆಗೆ ಹಮ್ಮಿಕೊಂಡಿದ್ದು ಈ ಬಗ್ಗೆ ಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿರುವ ಸಿಎಂ ಡಿಕೆ ಶಿವಕುಮಾರ್, ಬಿಜೆಪಿಯವರು ನಮಗೆ ಒಳ್ಳೆಯ ಅವಕಾಶ ಕೊಡುತ್ತಿದ್ದಾರೆ. ಬಿಜೆಪಿಯವರು ಪಾದಯಾತ್ರೆ ಮಾಡೋದು ಒಳ್ಳೆಯದೇ. ಪ್ರತಿತಂತ್ರಕ್ಕೆ ನಮ್ಮ ಪಕ್ಷ ನಾವೇನು ಕಡಿಮೆ ಇಲ್ಲ. ಹೋರಾಟ ಮಾಡಿ ಸ್ವಾತಂತ್ರ್ಯ ತಂದು ಕೊಟ್ಟವರು ನಾವು. ಸ್ವಾತಂತ್ರ್ಯ ಹೋರಾಟದಲ್ಲಿ ಇವರ್ಯಾರು ಇರಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ರಾಜ್ಯ ಸರ್ಕಾರದಿಂದ ಬರಪೀಡಿತ ತಾಲ್ಲೂಕು ಘೋಷಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಡಿಕೆ ಶಿವಕುಮಾರ್, ಈಗಾಗಲೇ 102 ತಾಲ್ಲೂಕು ಬರ ಎಂದು ಘೋಷಣೆ ಮಾಡಿದ್ದೇವೆ. ಇನ್ನೂ ಅನೇಕ ತಾಲ್ಲೂಕುಗಳ ಸಮೀಕ್ಷೆ ನಡೆಯುತ್ತಿದೆ. ವಾರ ಹಾಗೂ 15 ದಿನಕ್ಕೆ ವರದಿ ತರಿಸಿಕೊಂಡು ಘೋಷಿಸಬೇಕಿದೆ ಟೆಕ್ನಿಕಲ್ ಆಗಿ ಏನು ಆಗಬೇಕು ಎಂದು ಪರಿಶೀಲನೆ ಮಾಡುತ್ತೇವೆ. ಧಾರವಾಡ , ಗದಗದಲ್ಲಿ ಮಾಹಿತಿ ಕೊರತೆ ಬಗ್ಗೆ ತಿಳಿಸುತ್ತಾ ಇದ್ದರು. ಅದಕ್ಕಾಗಿ ಬಾಗಲಕೋಟೆಗೂ ಹೋಗುತಿದ್ದೇನೆ ಬರಗಾಲ ಇರುವ ತಾಲ್ಲೂಕು ಜಿಲ್ಲೆಗಳಲ್ಲಿ ಪರಿಶೀಲನೆ ಮಾಡುತ್ತೇನೆ. ಈಗ ನಮ್ಮ ಕನಕಪುರವ್ನೇ ಬರ ಎಂದು ಘೋಷಣೆ ಮಾಡಿಲ್ಲ. ತಲೆಕೆಡಿಸಿಕೊಳ್ಳಲು ಆಗುತ್ತಾ ಅದಕ್ಕೆ ಒಂದು ನಿಯಮ ಇದೆ ಕೇಂದ್ರ ಸರ್ಕಾರದ ನಿಯಮ ಇದೆ ಅದರ ಪ್ರಕಾರವೇ ಆಗುತ್ತೆ ಸ್ವಲ್ಪ ತಾಳ್ಮೆಯಿಂದ ಇರಬೇಕು ಎಂದು ತಿಳಿಸಿದರು.
Key words: BJP, Padayatre, CM, DK Shivakumar
The post ಬಿಜೆಪಿಯವರು ಪಾದಯಾತ್ರೆ ಮಾಡೋದು ಒಳ್ಳೆಯದೇ- ಸಿಎಂ ಡಿಕೆ ಶಿವಕುಮಾರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




