26
September, 2026

A News 365Times Venture

26
Saturday
September, 2026

A News 365Times Venture

ಹಾಲಿನ ದರ ಏರಿಕೆ; ಸಂಪುಟದಲ್ಲಿ ಚರ್ಚಿಸಿ ತೀರ್ಮಾನ: ಸಿಎಂ ಡಿ.ಕೆ ಶಿವಕುಮಾರ್

Date:

ಬೆಂಗಳೂರು,ಸೆಪ್ಟಂಬರ್,26,2026 (www.justkannada.in):  ಹಾಲಿನ ದರ ಹೆಚ್ಚಳದ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದರು.

ಫ್ರೀಡಂ ಪಾರ್ಕ್ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಡಿ.ಕೆ ಶಿವಕುಮಾರ್ ಅವರು, ಹಾಲಿನ ದರ ಏರಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಜಿಲ್ಲಾ ಹಾಲು ಒಕ್ಕೂಟಗಳ ಅಧ್ಯಕ್ಷರು ನನ್ನನ್ನು ಭೇಟಿಯಾಗಿ 12ರೂ. ಹೆಚ್ಚಳ ಮಾಡಿ. ಅದರಲ್ಲಿ 2 ರೂ. ಸಂಘಗಳಿಗೆ ಕೊಡಿ ಎಂದು ಮನವಿ ಮಾಡಿದ್ದಾರೆ. ನೆರೆಯ ರಾಜ್ಯಗಳಾದ ತೆಲಂಗಾಣ, ತಮಿಳುನಾಡು, ಆಂಧ್ರ ಪ್ರದೇಶಗಳಲ್ಲಿನ ಪರಿಸ್ಥಿತಿಯ ಬಗ್ಗೆ ವರದಿಗಳನ್ನು ಪಡೆದು, ಪರಿಶೀಲಿಸಿದ ನಂತರ ಮುಂದಿನ  ತೀರ್ಮಾನ ಮಾಡುತ್ತೇವೆ’ ಎಂದು ಹೇಳಿದರು.

‘ಹಾಲಿನ ಪ್ರಸ್ತುತ ದರದಿಂದ ಸಂಘಗಳಿಗೆ ನಷ್ಟವಾಗುತ್ತಿದೆ. ಬೆಲೆ ವಿಚಾರದಲ್ಲಿ ರೈತರಲ್ಲಿ ಆಕ್ರೋಶವಿದೆ. 50 ಸಾವಿರ ಹಾಲು ಉತ್ಪಾದಕರು ಹಾಲಿನ ದರ ಏರಿಕೆಗೆ ಆಗ್ರಹಿಸಿದ್ದಾರೆ. ರೈತರನ್ನು ಹಾಗೂ ಒಕ್ಕೂಟಗಳನ್ನು ರಕ್ಷಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಿದ್ದೇವೆ’ ಎಂದರು.

 

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

CRIME NEWS; ದೇವರಸನಹಳ್ಳಿಯಲ್ಲಿ ಮನೆಗೆ ನುಗ್ಗಿ ಹಲ್ಲೆ ಆರೋಪ: ಇಬ್ಬರ ವಿರುದ್ಧ ದೂರು

  ಮೈಸೂರು, ಸೆ.26, 2026: ನಂಜನಗೂಡು ತಾಲೂಕಿನ ದೇವರಸನಹಳ್ಳಿ ಗ್ರಾಮದಲ್ಲಿ ಮನೆಗೆ ಏಕಾಏಕಿ...

ಜ್ಞಾನೇಶ್‌ ಕುಮಾರ್‌ ಬರುವ ಮುಂಚೆಯೂ ಕಾಂಗ್ರೆಸ್‌ ಸೋಲುತ್ತಿದ್ರು – ಶಾಸಕ ಸುರೇಶ್‌ ಕುಮಾರ್‌ ಟಾಂಗ್‌

ಬೆಂಗಳೂರು,ಸೆಪ್ಟಂಬರ್‌,26,2026 (www.justkannada.in): ಕೇಂದ್ರ ಮುಖ್ಯ ಚುನಾವಣಾ ಆಯುಕ್ತ  ಜ್ಞಾನೇಶ್ ಕುಮಾರ್ ಅವರ...

ಎಸ್‌ಬಿಐ ಚೀಫ್ ಮ್ಯಾನೇಜರ್‌ಗೆ 1 ವರ್ಷ ಕಠಿಣ ಕಾರಾಗೃಹ, ₹50 ಸಾವಿರ ದಂಡ

  ಮೈಸೂರು, ಸೆ.26, 2026: ಮೃತ ಗ್ರಾಹಕರ ಖಾತೆ ಹಾಗೂ ಬ್ಯಾಂಕ್‌ನ ಆಂತರಿಕ...

ನಂದಿನಿ ಹಾಲಿನ ದರ ಏರಿಕೆ ವಿಚಾರ: ಇಂದು ಸಿಎಂ ನೇತೃತ್ವದಲ್ಲಿ ಸಭೆಯಲ್ಲಿ ಅಂತಿಮ ನಿರ್ಧಾರ

ಬೆಂಗಳೂರು,ಸೆಪ್ಟಂಬರ್‌,26,2026 (www.justkannada.in) ರಾಜ್ಯದಲ್ಲಿ ನಂದಿನಿ ಹಾಲಿನ ದರವನ್ನು ೧೦ ರೂ ಹೆಚ್ಚಳ...