16
March, 2026

A News 365Times Venture

16
Monday
March, 2026

A News 365Times Venture

ವಿದ್ಯಾರ್ಥಿಗಳು ಓದಿನ ಜೊತೆಗೆ ಕ್ರೀಡೆಗೂ ಪ್ರಾಶಸ್ತ್ಯ ನೀಡಿ – ಡಾ.ಈ.ಸಿ.ನಿಂಗರಾಜ್ ಗೌಡ.

Date:

ಮೈಸೂರು, ಮಾರ್ಚ್ 16,2026 (www.justkannada.in): ಈಗಿನ ವಿದ್ಯಾರ್ಥಿಗಳು ಓದುವುದರ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಿ ಸ್ಪರ್ಧೆಗಳಲ್ಲಿ ವಿಜೇತರಾಗುವ ಮೂಲಕ ರಾಜ್ಯಕ್ಕೆ, ದೇಶಕ್ಕೇ ಕೀರ್ತಿ ತರಬೇಕೆಂದು ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯಡಾ.ಈ.ಸಿ.ನಿಂಗರಾಜ್ ಗೌಡ ತಿಳಿಸಿದರು.

ಮೈಸೂರಿನ ಲಲಿತಾದ್ರಿಪುರದಲ್ಲಿರುವ ಸಿಲಿಕಾನ್ ಸಿಟಿ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಬ್ಯಾಸ್ಕೆಟ್ ಬಾಲ್ ಕೋರ್ಟ್ ಮತ್ತು ಗ್ರಂಥಾಲಯವನ್ನು ಉದ್ಘಾಟಿಸಿ ಈ.ಸಿ.ನಿಂಗರಾಜ್ ಗೌಡ ಮಾತನಾಡಿದರು.

ಬ್ಯಾಸ್ಕೆಟ್ ಬಾಲ್ ಒಂದು ಜನಪ್ರಿಯ ಕ್ರೀಡೆಯಾಗಿದೆ. ಈ ಆಟವನ್ನು ಎರಡು ತಂಡಗಳು ಆಡುತ್ತವೆ. ಪ್ರತೀ ತಂಡದಲ್ಲಿ ಸಾಮಾನ್ಯವಾಗಿ 5 ಆಟಗಾರರು ಮೈದಾನದಲ್ಲಿ ಇರುತ್ತಾರೆ.  ಬ್ಯಾಸ್ಕೆಟ್ ಬಾಲ್‌ ನಲ್ಲಿ ಆಟಗಾರರು ಚೆಂಡನ್ನು ಎದುರಾಳಿ ತಂಡದ ಹೂಪ್ (ಬಾಸ್ಕೆಟ್)ಒಳಗೆ ಹಾಕಬೇಕು.  ಹೀಗೆ ಮಾಡಿದಾಗ ಅಂಕಗಳು ಸಿಗುತ್ತವೆ. ಹೂಪ್ ಒಳಗೆ ಸಾಮಾನ್ಯ ಶಾಟ್ ಮಾಡಿದರೆ 2 ಅಂಕಗಳು ಸಿಗುತ್ತವೆ. ಮೂರು ಅಂಕಗಳ ರೇಖೆ (3-point line) ಹೊರಗಿನಿಂದ ಹಾಕಿದರೆ – 3 ಅಂಕಗಳು ಸಿಗುತ್ತವೆ. ಫ್ರೀ ತ್ರೋ ಮಾಡಿದರೆ 1 ಅಂಕ ಸಿಗುತ್ತದೆ.  ಸಾಮಾನ್ಯವಾಗಿ ಪಂದ್ಯವನ್ನು 4 ಭಾಗಗಳು (quarters) ಆಗಿ ಆಡುತ್ತಾರೆ. ಪ್ರತಿಯೊಂದು ಭಾಗಕ್ಕೆ ನಿರ್ದಿಷ್ಟ ಸಮಯ ಇರುತ್ತದೆ ಎಂದು ವಿವರಿಸಿದರು.

ಬ್ಯಾಸ್ಕೆಟ್ ಬಾಲ್ ಅನ್ನು 1891 ರಲ್ಲಿ ಜೇಮ್ಸ್ ನಾಯಿಸ್ಮೀತ್ (James Naismith) ಎಂಬ ಶಿಕ್ಷಕರು ಅಮೇರಿಕಾದಲ್ಲಿ ಕಂಡುಹಿಡಿದರು.  ಮೈಕಾಲ್ ಜೋರ್ಢಾನ್ ರವರಂತಹ ಪ್ರಸಿದ್ಧ ಆಟಗಾರರು ಇದ್ದಾರೆ ಎಂದರು.

ಗ್ರಂಥಾಲಯ ಎಂದರೆ ಪುಸ್ತಕಗಳು, ಪತ್ರಿಕೆಗಳು, ಮ್ಯಾಗ್ಜೈನ್ ಗಳು ಹಾಗೂ ಜ್ಞಾನಕ್ಕೆ ಸಂಬಂಧಿಸಿದ ವಿವಿಧ ಮಾಹಿತಿಗಳನ್ನು ಸಂಗ್ರಹಿಸಿ ಜನರಿಗೆ ಓದಲು ಮತ್ತು ಅಧ್ಯಯನ ಮಾಡಲು ನೀಡುವ ಸ್ಥಳವಾಗಿದೆ. ಗ್ರಂಥ ಎಂದರೆ ಪುಸ್ತಕ, ಆಲಯ ಎಂದರೆ ಸ್ಥಳ. ಆದ್ದರಿಂದ ಗ್ರಂಥಾಲಯವೆಂದರೆ ಪುಸ್ತಕಗಳ ಮನೆ ಅಥವಾ ಪುಸ್ತಕಗಳ ಭಂಡಾರ ಎಂದು ಹೇಳಬಹುದಾಗಿದೆ. ಪುಸ್ತಕಗಳ ಸಂಗ್ರಹ ಮಾಡಿದ ಪಾಂಡವಪುರದ ಅಂಕೇಗೌಡರವರಿಗೆ ಭಾರತ ಸರ್ಕಾರವೂ “ಪದ್ಮಶ್ರೀ” ನೀಡಿದೆ ಎಂದು ಸ್ಮರಿಸಿದರು.

ಸಿಲಿಕಾನ್ ಸಿಟಿ ಇಂಟರ್ ನ್ಯಾಷನಲ್ ಸಂಸ್ಥೆಯ ಕಾರ್ಯದರ್ಶಿರವರಾದ ಎಲ್. ರವಿ ರವರು ಮೈಸೂರಿನ ವಿದ್ಯಾರ್ಥಿಗಳ ಅನೂಕೂಲಕ್ಕಾಗಿ ಸಂಸ್ಥೇಯ ಆವರಣದಲ್ಲಿ ಸುಸಜ್ಜೀತ ಈಜುಕೊಳ, ಪುಟಬಾಲ್, ಚೆಸ್,  ಅಥ್ಲೇಟಿಕ್ಸ್ ಟ್ರಾಕ್,  ಈಗ ಬ್ಯಾಸ್ಕೇಟ್ ಬಾಲ್ ಕೋರ್ಟ್ ನಿರ್ಮಿಸುವುದರ ಜೊತೆಗೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡೆಯಲ್ಲಿ ಭಾಗವಹಿಸುವ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತೀರುವುದಕ್ಕೇ ಅಭಿನಂದಿಸಿದರು.

ಮೈಸೂರು ಮಹಾನಗರಪಾಲಿಕೆಯ ಉಪ ಆಯುಕ್ತ ಜಿ.ಎಸ್.ಸೋಮಶೇಖರ್  ಮಾತನಾಡಿ ಬ್ಯಾಸ್ಕೆಟ್ ಬಾಲ್ ಆಟವು ದೇಹದ ಆರೋಗ್ಯಕ್ಕೂ ಹಾಗೂ ಮನಸ್ಸಿನ ಬೆಳವಣಿಗೆಗೂ ಬಹಳ ಉಪಯುಕ್ತವಾಗಿದೆ. ದೇಹವನ್ನು ಚುರುಕಾಗಿ ಮತ್ತು ಬಲಿಷ್ಠವಾಗಿರಿಸುತ್ತದೆ. ಓಡುವುದು, ಜಿಗಿಯುವುದು ಇತ್ಯಾದಿಯಿಂದ ಹೃದಯ ಮತ್ತು ಸ್ನಾಯುಗಳು ಬಲವಾಗುತ್ತವೆ. ದೇಹದ ತೂಕ ನಿಯಂತ್ರಣದಲ್ಲಿರುತ್ತದೆ. ಆಟದ ವೇಳೆ ವೇಗವಾಗಿ ಓಡಬೇಕಾಗಿರುವುದರಿಂದ ಚುರುಕುತನ ಹೆಚ್ಚುತ್ತದೆ.  ದೇಹದ ಸಮತೋಲನ ಮತ್ತು ಕಣ್ಣು-ಕೈ ಸಮನ್ವಯತೆ ಉತ್ತಮವಾಗುತ್ತದೆ ಎಂದರು.

ಬ್ಯಾಸ್ಕೆಟ್ ಬಾಲ್ ಒಂದು ತಂಡ ಆಟವಾಗಿರುವುದರಿಂದ ಆಟಗಾರರು ಒಟ್ಟಾಗಿ ಕೆಲಸ ಮಾಡುವ ಗುಣವನ್ನು ಕಲಿಯುತ್ತಾರೆ. ಒತ್ತಡವನ್ನು ಕಡಿಮೆ ಮಾಡುತ್ತದೆ. ಆತ್ಮವಿಶ್ವಾಸ ಮತ್ತು ಧೈರ್ಯವನ್ನು ಹೆಚ್ಚಿಸುತ್ತದೆ.  ನಾಯಕತ್ವ ಹಾಗೂ ಜವಾಬ್ದಾರಿ ಭಾವನೆ ಹೆಚ್ಚಿಸುತ್ತದೆ. ಆದ್ದರಿಂದ ವಿದ್ಯಾರ್ಥಿಗಳ ಜೀವನದಲ್ಲಿ ಬ್ಯಾಸ್ಕೆಟ್ ಬಾಲ್ ಆಟವು ಆರೋಗ್ಯ, ಸ್ನೇಹಭಾವ ಮತ್ತು ವ್ಯಕ್ತಿತ್ವ ಅಭಿವೃದ್ಧಿಗೆ ಬಹಳ ಸಹಾಯಕವಾಗುತ್ತದೆ ಎಂದು ಜಿ.ಎಸ್. ಸೋಮಶೇಖರ್  ಹೇಳಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರಾದ ಡಾ.ಸುಮಲಿನಿ ಬಿ. ಸ್ವಾಮಿ, ಪ್ರಾಂಶುಪಾಲರಾದ ಡಾ.ದೀಪ್ತಿ ಚತುರ್ವೇದಿ, ಎಂ.ಮೋಹನ್, ಚಂದ್ರಣ್ಣ, ಹರೀಶ್ ಮೋಗಣ್ಣ, ಕೆ.ಎನ್. ಸಂತೋಷ್, ಅಧ್ಯಾಪಕಿಯರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ENGLISH SUMMARY..

Mysuru:
Students should give equal importance to sports along with academics and bring glory to the state and nation, said former Mysuru University Syndicate member Dr. E.C. Ningaraj Gowda.

He spoke after inaugurating a basketball court and library at Silicon City International School in Lalithadripura, Mysuru. He explained that basketball, invented in 1891 by James Naismith, is a popular team sport and encouraged students to actively participate in sports competitions.

Dr. Gowda also highlighted the importance of libraries in developing reading habits and knowledge among students. He recalled that S.R. Ranganathan, known as the father of Library Science in India, played a key role in the public library movement.

Mysuru City Corporation Deputy Commissioner G.S. Somashekhar said basketball improves physical fitness, teamwork, confidence and leadership among students.

School Secretary L. Ravi was appreciated for providing sports facilities and free education for students participating in state and national-level sports.

Directors Dr. Sumalini B. Swamy, Principal Dr. Deepti Chaturvedi, staff members and students were present.

Key words: Students, sports, Dr. E.C. Ningaraj Gowda, Mysore

The post ವಿದ್ಯಾರ್ಥಿಗಳು ಓದಿನ ಜೊತೆಗೆ ಕ್ರೀಡೆಗೂ ಪ್ರಾಶಸ್ತ್ಯ ನೀಡಿ – ಡಾ.ಈ.ಸಿ.ನಿಂಗರಾಜ್ ಗೌಡ. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಇರಾನ್-ಇಸ್ರೇಲ್ ಯುದ್ದ: 4335 ವಿಮಾನಗಳ ಹಾರಾಟ ರದ್ದು

ನವದೆಹಲಿ,ಮಾರ್ಚ್,16,2026 (www.justkannada.in):  ಮಧ್ಯಪ್ರಾಚ್ಯದಲ್ಲಿ ಯುದ್ದ  ಪ್ರಾರಂಭವಾದಾಗಿನಿಂದ ಈವರೆಗೆ 4335 ವಿಮಾನಗಳ ಹಾರಾಟ...

ಅಧಿವೇಶನದಲ್ಲಿ ಕರ್ತವ್ಯ ನಿರ್ಲಕ್ಷ್ಯ ಆರೋಪ: ಮೂವರ ಅಧಿಕಾರಿಗಳ ಅಮಾನತಿಗೆ ಸಿಎಂ ಸೂಚನೆ

ಬೆಂಗಳೂರು,ಮಾರ್ಚ್,16,2026 (www.justkannada.in):  ಬಜೆಟ್ ಅಧಿವೇಶನದ ವೇಳೆ ಕರ್ತವ್ಯ ನಿರ್ಲಕ್ಷ್ಯ ತೋರಿದ ಆರೋಪದ...

ಮೈಸೂರು ಅರಮನೆ ಮುಂಭಾಗ ಟಾಂಗಾ ಸ್ಟ್ಯಾಂಡ್‌ ಗೆ ತೀವ್ರ ವಿರೋಧ.

ಮೈಸೂರು,ಮಾರ್ಚ್,16,2026 (www.justkannada.in): ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯ ಜಾರಿಗೆ ತಂದಿರುವ ‘ಸ್ವದೇಶ...

4,824 ಕೋಟಿ ರೂ. ಮೊತ್ತದ ಬಂಡವಾಳ ಹೂಡಿಕೆಗೆ ಸಮ್ಮತಿ: ಸಚಿವ ಎಂ. ಬಿ. ಪಾಟೀಲ್

ಬೆಂಗಳೂರು,ಮಾರ್ಚ್,14,2026 (www.justkannada.in): ವಿಜಯಪುರ, ಬಾಗಲಕೋಟೆ, ಚಿತ್ರದುರ್ಗ, ಕೋಲಾರ, ರಾಮನಗರ ಸೇರಿದಂತೆ  13...