22
August, 2026

A News 365Times Venture

22
Saturday
August, 2026

A News 365Times Venture

KPSC ಅಧ್ಯಕ್ಷರಾಗಿ ಶಿವಶಂಕರಪ್ಪ ಸಾಹುಕಾರ್ ಮರುನೇಮಕಕ್ಕೆ ಹೈಕೋರ್ಟ್ ಆದೇಶ

Date:

ಬೆಂಗಳೂರು, ಆಗಸ್ಟ್,​​ 18,2026 (www.justkannada.in): ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಕೆಪಿಎಸ್ ಸಿ ಅಧ್ಯಕ್ಷ ಶಿವಶಂಕರಪ್ಪರನ್ನು ಅಮಾನತು ಮಾಡಲಾಗಿದ್ದ ರಾಜ್ಯಪಾಲರ ಆದೇಶವನ್ನು ಹೈಕೋರ್ಟ್ ರದ್ದುಮಾಡಿದೆ.

7 ದಿನಗಳಲ್ಲಿ ಕೆಪಿಎಸ್‌ಸಿ ಅಧ್ಯಕ್ಷರನ್ನಾಗಿ ಶಿವಶಂಕರಪ್ಪ ಅವರನ್ನು ಮರುನೇಮಕ ಮಾಡುವಂತೆ ಹೈಕೋರ್ಟ್  ನ್ಯಾ.ಸೂರಜ್ ಗೋವಿಂದರಾಜ್ ಅವರಿದ್ದ ಪೀಠ ಆದೇಶ ಹೊರಡಿಸಿದೆ.

ಕೆಪಿಎಸ್​​ಸಿ ಅಧ್ಯಕ್ಷರನ್ನು ಅಮಾನತುಗೊಳಿಸುವಂತೆ ಸಚಿವ ಸಂಪುಟ ಸಲಹೆ, ಶಿಫಾರಸು ಮಾಡಿಲ್ಲ. ರಾಜ್ಯಪಾಲರು ಸಚಿವ ಸಂಪುಟದ ತೀರ್ಮಾನವನ್ನಷ್ಟೇ ಅನುಸರಿಸಬೇಕು ಎಂದು ನ್ಯಾಯಪೀಠವು ಅಭಿಪ್ರಾಯಪಟ್ಟಿದೆ.

ಶಿವಶಂಕರಪ್ಪ ಸಾಹುಕಾರ್ ಪುತ್ರಿಯರ ನೇಮಕ ಸಂಬಂಧ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳುವಂತಿಲ್ಲ. ಕೆಪಿಎಸ್  ಸಿ ಅಧ್ಯಕ್ಷರ ವಿರುದ್ಧದ ಆರೋಪದ ಬಗ್ಗೆ ಕೋರ್ಟ್ ತೀರ್ಮಾನಿಸಿಲ್ಲ ಎಂದು ಏಕಸದಸ್ಯ ಪೀಠ ಸ್ಪಷ್ಟನೆಯನ್ನು ನೀಡಿದೆ. ಸಚಿವ ಸಂಪುಟದ ಘಟನೋತ್ತರ ಅನುಮೋದನೆ ಕಾನೂನುಬಾಹಿರವೆಂದು ಶಿವಶಂಕರಪ್ಪ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದಿಸಿದ್ದರು.

Key words: High Court, orders, reappointment, Shivashankarappa, KPSC Chairman

The post KPSC ಅಧ್ಯಕ್ಷರಾಗಿ ಶಿವಶಂಕರಪ್ಪ ಸಾಹುಕಾರ್ ಮರುನೇಮಕಕ್ಕೆ ಹೈಕೋರ್ಟ್ ಆದೇಶ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

MYSORE : ಲಿಂಗಾಂಬುದ್ದಿಪಾಳ್ಯ ಸರ್ಕಾರಿ ಶಾಲಾ ಆವರಣವೇ  ಮದ್ಯವ್ಯಸನಿಗಳ ಅಡ್ಡೆ.!

  ಮೈಸೂರು, AUG.22,2026: ಮಕ್ಕಳಿಗೆ ಅಕ್ಷರ ಕಲಿಸಬೇಕಾದ ಶಾಲಾ ಆವರಣವೇ ಸಂಜೆ ವೇಳೆಗೆ...

3.85 ಕೋಟಿ ರೂ, ವಂಚನೆ ಆರೋಪ: ನಿರ್ದೇಶಕ ಓಂ ಪ್ರಕಾಶ್ ರಾವ್ ವಿರುದ್ದ ದೂರು

ಬೆಂಗಳೂರು,ಆಗಸ್ಟ್,22,2026 (www.justkannada.in):   ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಹಾಗೂ ನಟ ಓಂ...

ಬಿಡದಿ ಟೌನ್ ಶಿಪ್  ಅನ್ನು HD ಕುಮಾರಸ್ವಾಮಿ ಮಾಡಿ ಈಗ ನಮ್ಮ ಮೇಲೆ ಹೇಳುತ್ತಿದ್ದಾರೆ-ಸಚಿವ ಹೆಚ್ ಸಿ ಬಾಲಕೃಷ್ಣ

ರಾಮನಗರ,ಆಗಸ್ಟ್,22,2026 (www.justkannada.in):   ಬಿಡದಿ ಟೌನ್ ಶಿಪ್  ಅನ್ನು ಹೆಚ್ ಡಿ ಕುಮಾರಸ್ವಾಮಿ...

ಭಾರತದ ಶಿಕ್ಷಣ ವ್ಯವಸ್ಥೆ ಈಗ RSS ಅಡ್ಡೆಯಾಗಿದೆ- ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ,ಆಗಸ್ಟ್,22,2026 (www.justkannada.in): ಭಾರತದ  ಶಿಕ್ಷಣ ವ್ಯವಸ್ಥೆ  ಈಗ ಆರ್ ಎಸ್ ಎಸ್...