ಮೈಸೂರು,ಜೂನ್,2,2025 (www.justkannada.in): ವಾಹನಗಳ ದಟ್ಟಣೆ ಹಾಗೂ ಪರಿಸರ ಮಾಲಿನ್ಯ ತಡೆಯುವ ಉದ್ದೇಶದಿಂದ ಮೈಸೂರಿನಲ್ಲಿ ಆರಂಭಗೊಂಡ’ಟ್ರಿಣ್ ಟ್ರಿಣ್’ ಸೈಕಲ್ ಯೋಜನೆ ಇದೀಗ ಅನೈರ್ಮಲ್ಯಕ್ಕೆ ಕಾರಣವಾಗುತ್ತಿದೆ. ಟ್ರಿಣ್ ಟ್ರಿಣ್ ಸೈಕಲ್ ಗಳು ತುಂಬಿರಬೇಕಾದ ಟ್ರಿಣ್ ಟ್ರಿಣ್ ಸೈಕಲ್ ಸ್ಟ್ಯಾಂಡ್ ಇದೀಗ ಕುರಿದೊಡ್ಡಿಯಾಗಿ ಪರಿವರ್ತನೆಯಾಗಿದೆ.
ಹೌದು ಮೈಸೂರಿನ ಒಂಟಿಕೊಪ್ಪಲಿನ ಮಾತೃ ಮಂಡಳಿ ವೃತ್ತದ ಬಳಿ ಇರುವ ಟ್ರಿಣ್ ಟ್ರಿಣ್ ಸೈಕಲ್ ನಿಲ್ದಾಣದ ಪರಿಸ್ಥಿತಿ ಇದು. ಜನರ ಆರೋಗ್ಯದ ದೃಷ್ಟಿ ‘ಪರಿಸರ ಸ್ನೇಹಿ’ ಸೈಕಲ್ ಗಳ ಬಳಕೆಯನ್ನು ಉತ್ತೇಜಿಸುವ ಮುಖ್ಯ ಉದ್ದೇಶದಿಂದ ಟ್ರಿಣ್ ಟ್ರಿಣ್ ಸೈಕಲ್ ಯೋಜನೆಯಲ್ಲಿ ಮೈಸೂರಿನಲ್ಲಿ ತರಲಾಗಿತ್ತು. ಇದೀಗ ಸೈಕಲ್ ಗಳು ತುಂಬಿರಬೇಕಿದ್ದ ಸ್ಥಳದಲ್ಲಿ ಕುರಿಗಳನ್ನ ತುಂಬಿದ್ದು, ಇದು ಅಧಿಕಾರಿಗಳ ಗಮನಕ್ಕೂ ಬಂದಿಲ್ಲ. ಈ ಮೂಲಕ ಸಿಎಂ ಸಿದ್ದರಾಮಯ್ಯ ಅವರ ಮಹತ್ತರ ಯೋಜನೆ ಈ ಮೂಲಕ ಹಳ್ಳ ಹಿಡಿಯುವ ಸೂಚನೆ ತೋರಿಸುತ್ತಿದೆ.
ಟ್ರಿಣ್ ಟ್ರಿಣ್ ಯೋಜನೆಯನ್ನ ಸಿಎಂ ಸಿದ್ದರಾಮಯ್ಯ 2016 ರಲ್ಲಿ ಜಾರಿಗೆ ತಂದಿದ್ದರು. ಪ್ರಾಯೋಗಿಕವಾಗಿ ಆರಂಭವಾದ ಯೋಜನೆಗೆ ಸಾರ್ವಜನಿಕರೂ ಸಹ ಉತ್ತಮವಾಗಿ ಸ್ಪಂದಿಸಿ ಸೈಕಲ್ ಬಳಕೆಯತ್ತ ಗಮನ ಹರಿಸಿದ್ದರು. .ಲಕ್ಷಾಂತರ ಮಂದಿ ಟ್ರಿಣ್ ಟ್ರಿಣ್ ಸೈಕಲ್ ವ್ಯವಸ್ಥೆಯನ್ನ ಸಮರ್ಪಕವಾಗಿಯೂ ಬಳಸಿಕೊಂಡಿದ್ದರು.
ಆದರೆ ಇದೀಗ ಸೈಕಲ್ ಸ್ಟ್ಯಾಂಡ್ ಗಳಲ್ಲಿ ಸೈಕಲ್ ಗಳ ಬದಲಾಗಿ ಕುರಿಗಳನ್ನ ತುಂಬಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಸೈಕಲ್ ಗಳನ್ನ ಖರೀದಿಸುವತ್ತ ಮೈಸೂರು ಮಹಾನಗರ ಪಾಲಿಕೆ ಗಮನ ಹರಿಸದ ಕಾರಣ ಸೈಕಲ್ ಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಸೈಕಲ್ ಗಳ ಕೊರತೆಯಿಂದಾಗಿ ಸೈಕಲ್ ಸ್ಟ್ಯಾಂಡ್ ಗಳು ಖಾಲಿಯಾಗುತ್ತಿವೆ. ಇದನ್ನೇ ದುರ್ಬಳಕೆ ಮಾಡಿಕೊಂಡಿರುವ ಖಾಸಗಿ ವ್ಯಕ್ತಿಗಳು ನಿಲ್ದಾಣದಲ್ಲಿ ಕುರಿಗಳನ್ನ ಬಿಟ್ಟು ದೊಡ್ಡಿಯಾಗಿ ಮಾಡಿಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಇನ್ನು ಮುಂದಾದರೂ ಟ್ರಿಣ್ ಟ್ರಿಣ್ ಸೈಕಲ್ ಯೋಜನೆ ಮತ್ತಷ್ಟು ಅಧೋಗತಿಗೆ ಇಳಿಯುವ ಮುನ್ನ ಪಾಲಿಕೆ ಅಧಿಕಾರಿಗಳು ಗಮನ ಹರಿಸಿ ಟ್ರಿಣ್ ಟ್ರಿಣ್ ಸೈಕಲ್ ಯೋಜನೆಗೆ ಚುರುಕು ಮೂಡಿಸುವ ಕೆಲಸವನ್ನ ಮಾಡಬೇಕಿದೆ.
Key words: MYSORE, Trin Trin cycle, stand , Sheep
The post MYSORE: ಟ್ರಿಣ್ ಟ್ರಿಣ್ ಸೈಕಲ್ ಸ್ಟ್ಯಾಂಡ್ ಈಗ ಕುರಿ ದೊಡ್ಡಿ…! appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.