25
May, 2026

A News 365Times Venture

25
Monday
May, 2026

A News 365Times Venture

MYSORE CRIME : ನಶೆಯಲ್ಲಿ ಪುಡಿ ರೌಡಿಗಳ ಹಾವಳಿ ; ಹಾಡಹಗಲೇ ದೌರ್ಜನ್ಯ, ಭಯದಲ್ಲಿ ನಾಗರಿಕರು!

Date:

 

ಮೈಸೂರು, ಮೇ.೨೩,೨೦೨೬:  ನಗರದ ಹೃದಯ ಭಾಗಗಳಲ್ಲೇ ಗಾಂಜಾ ಮತ್ತು ಅಫೀಮ್ ನಶೆಯಲ್ಲಿ ತೇಲುವ ಪುಡಿ ರೌಡಿಗಳ ಹಾವಳಿ ಹೆಚ್ಚುತ್ತಿದ್ದು, ಸಾರ್ವಜನಿಕರ ಆತಂಕಕ್ಕೂ ಕಾರಣವಾಗಿದೆ. ಶಾಂತಲ ಚಿತ್ರಮಂದಿರ ರಸ್ತೆಯ ರಾಘವೇಂದ್ರ ದೇವಾಲಯದ ಬಳಿ ಶುಕ್ರವಾರ ಮಧ್ಯಾಹ್ನ ನಡೆದ ಘಟನೆ ಇದಕ್ಕೆ ತಾಜಾ ಉದಾಹರಣೆ.

ಮಧ್ಯಾಹ್ನ ಸುಮಾರು 3.30ರ ವೇಳೆಗೆ 20 ರಿಂದ 25 ವರ್ಷದ ಯುವಕನೊಬ್ಬ ಅಮಾಯಕ ವ್ಯಕ್ತಿಯ ಮೇಲೆ ಏಕಾಏಕಿ ದಾಳಿ ನಡೆಸಿದ್ದಾನೆ. ಮೊದಲು ಕಣ್ಣಿಗೆ ಪೆಪ್ಪರ್ ಸ್ಪ್ರೇ ಎರಚಿ, ಬಳಿಕ ಚಾಕುವಿನಿಂದ ಇರಿಯಲು ಯತ್ನಿಸಿದ್ದಾನೆ. ಅಪಾಯ ಅರಿತ ವ್ಯಕ್ತಿ ಸಮೀಪದ ಕಟ್ಟಡದೊಳಗೆ ಓಡಿ ಜೀವ ಉಳಿಸಿಕೊಂಡಿದ್ದಾರೆ.

ಕಣ್ಣಿಗೆ ಖಾರದ ಪುಡಿ ಬಿದ್ದ ಪರಿಣಾಮ ಉರಿ ತಾಳಲಾರದೆ ಸಹಾಯಕ್ಕಾಗಿ ಕೂಗಾಡಿದರೂ, ಸ್ಥಳೀಯರು ಭಯದಿಂದ ಮುಂದೆ ಬರಲು ಹಿಂದೇಟು ಹಾಕಿದ್ದಾರೆ. ಆರೋಪಿಯ ದೌರ್ಜನ್ಯ ಸ್ವಭಾವ ಹಾಗೂ ಹಿನ್ನಲೆ ತಿಳಿದಿದ್ದರಿಂದ ಜನ ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾಗಿದೆ.

ಈ ವೇಳೆ ಧೈರ್ಯದಿಂದ ಪ್ರಶ್ನಿಸಲು ಮುಂದಾದ ಮತ್ತೊಬ್ಬ ಯುವಕನ ಮೇಲೂ ಪುಂಡ ಹಲ್ಲೆಗೆ ಯತ್ನಿಸಿದ್ದಾನೆ. ಸ್ಥಳೀಯರ ಪ್ರಕಾರ ಆರೋಪಿ ಗಾಂಜಾ ಮತ್ತು ಅಫೀಮ್ ನಶೆಯಲ್ಲಿದ್ದನು. ಆತ habitual offender ಆಗಿದ್ದು, ಈ ಹಿಂದೆಯೂ ಇದೇ ರೀತಿಯ ಹಲವಾರು ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

ಸುಮಾರು ಹತ್ತು ರಿಂದ ಹದಿನೈದು ನಿಮಿಷಗಳ ಕಾಲ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಗಾಯಗೊಂಡ ವ್ಯಕ್ತಿ ಸಮೀಪದ ಕಣ್ಣಾಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ. ಆದರೆ ಘಟನೆ ನಡೆದ ಶಾಕ್‌ನಿಂದ ಅವರು ಇನ್ನೂ ಹೊರಬರಲಾಗಿಲ್ಲ.

ಅತ್ಯಂತ ಆತಂಕಕಾರಿ ಅಂಶವೆಂದರೆ, ಘಟನೆ ಕುರಿತು ಪೊಲೀಸರಿಗೆ ದೂರು ನೀಡಲು ಸಹ ಜನ ಹಿಂದೇಟು ಹಾಕುತ್ತಿರುವುದು. ಆರೋಪಿಯ ಬಗ್ಗೆ ಪೊಲೀಸರಿಗೆ ಈಗಾಗಲೇ ಮಾಹಿತಿ ಇದ್ದರೂ, ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿಲ್ಲ ಎಂಬುದು ಸ್ಥಳೀಯರ ಆರೋಪ. “ದೂರು ಕೊಟ್ಟರೂ ಏನು ಪ್ರಯೋಜನವಾಗುವುದಿಲ್ಲ” ಎಂಬ ನಿರಾಶೆಯ ಮನೋಭಾವ ಸಾರ್ವಜನಿಕರಲ್ಲಿ ಮೂಡಿದೆ.

ನಗರದಲ್ಲಿ ಹೆಚ್ಚುತ್ತಿರುವ ನಶೆ ಜಾಲ:

ಇತ್ತೀಚಿನ ದಿನಗಳಲ್ಲಿ ಮೈಸೂರಿನ ಕೆಲ ಪ್ರದೇಶಗಳಲ್ಲಿ ಗಾಂಜಾ, ಅಫೀಮ್ ಹಾಗೂ ಇತರ ಮಾದಕ ವಸ್ತುಗಳ ಬಳಕೆ ಹೆಚ್ಚುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ನಶೆಗೆ ಒಳಗಾದ ಯುವಕರು ಸಾರ್ವಜನಿಕ ಸ್ಥಳಗಳಲ್ಲೇ ಗಲಾಟೆ, ಹಲ್ಲೆ, ಬೆದರಿಕೆ ಹಾಗೂ ದೌರ್ಜನ್ಯ ಎಸಗುತ್ತಿರುವುದು ನಾಗರಿಕರ ಆತಂಕಕ್ಕೆ ಕಾರಣವಾಗಿದೆ.

ಸ್ಥಳೀಯರ ಪ್ರಕಾರ, ಕೆಲ ಪುಡಿ ರೌಡಿಗಳ ಬಗ್ಗೆ ಪೊಲೀಸರಿಗೆ ಸ್ಪಷ್ಟ ಮಾಹಿತಿ ಇದ್ದರೂ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದ ಕಾರಣ ಅವರ ದೌರ್ಜನ್ಯ ಹೆಚ್ಚುತ್ತಿದೆ. ಸಣ್ಣ ಪ್ರಕರಣಗಳಲ್ಲಿ ಬಂಧನವಾದರೂ, ಕೆಲವೇ ದಿನಗಳಲ್ಲಿ ಹೊರಬಂದು ಮತ್ತೆ ಅದೇ ಚಟುವಟಿಕೆಯಲ್ಲಿ ತೊಡಗುತ್ತಿದ್ದಾರೆ ಎಂಬ ಆರೋಪವೂ ಕೇಳಿಬರುತ್ತಿದೆ.

ಮೈಸೂರು ಶಾಂತಿಯ ನಗರ ಎಂಬ ಹೆಗ್ಗಳಿಕೆಗೆ ಧಕ್ಕೆ ತರುವ ಇಂತಹ ಘಟನೆಗಳು ಮರುಕಳಿಸದಂತೆ ಪೊಲೀಸ್ ಇಲಾಖೆ ಹಾಗೂ ಆಡಳಿತ ತುರ್ತು ಕ್ರಮ ಕೈಗೊಳ್ಳಬೇಕಿದೆ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

Key words: Rising Menace, Drug-Fueled, Rowdyism, Mysuru, crime news, mysuru

SUMMARY: 

Rising Menace of Drug-Fueled Rowdyism in Mysuru

A shocking daylight incident near the Raghavendra Temple on Shantala Theatre Road in Mysuru has raised serious concerns over the growing menace of drug-fueled rowdyism in the city.

Around 3:30 PM on Friday, a youth aged between 20 and 25 allegedly attacked an innocent man using pepper spray and later attempted to stab him with a knife. The victim managed to escape into a nearby building and later received treatment at a nearby eye hospital.

Locals say the accused was under the influence of ganja and opium and is known as a habitual offender involved in several such incidents earlier. Fear gripped the area for nearly 15 minutes as bystanders hesitated to intervene.

Residents allege that drug abuse among youth and the activities of “pudi rowdies” are increasing in parts of Mysuru. They also expressed frustration over the lack of strict action despite police allegedly being aware of such offenders.

The incident has once again sparked debate over the rising drug culture and public safety concerns in Mysuru.

The post MYSORE CRIME : ನಶೆಯಲ್ಲಿ ಪುಡಿ ರೌಡಿಗಳ ಹಾವಳಿ ; ಹಾಡಹಗಲೇ ದೌರ್ಜನ್ಯ, ಭಯದಲ್ಲಿ ನಾಗರಿಕರು! appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ತಂದಿದ್ದೇವೆ: ಟೀಕಾಕಾರರಿಗೆ ಸಚಿವ ಮಧು ಬಂಗಾರಪ್ಪ ತಿರುಗೇಟು

ಮೈಸೂರು,ಮೇ,23,2026 (www.justkannada.in): “ಒಬ್ಬ ಶಿಕ್ಷಣ ಸಚಿವನಾಗಿ ಸಾಹಿತಿ ದೇವನೂರು ಮಹದೇವ ಅವರ...

ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಸಿಎಂ  ಸಿದ್ದರಾಮಯ್ಯ

ಬೆಂಗಳೂರು,ಮೇ,23,2026 (www.justkannada.in): ಸೂರ್ಯನಗರದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗುವ ಮೂಲಕ...

ರಾಜಕಾರಣ ಬರುತ್ತೆ ಹೋಗುತ್ತೆ ಮಾತಿನ ಮೇಲೆ ನಿಗಾ ಇರಲಿ- ಶಾಸಕ ಇಕ್ಬಾಲ್ ಹುಸೇನ್ ಆಕ್ರೋಶ

ರಾಮನಗರ,ಮೇ,23,2026 (www.justkannada.in): ಡಿಸಿಎಂ ಡಿಕೆ ಶಿವಕುಮಾರ್ ವಿರುದ್ದ ಟೀಕಿಸಿದ್ದ ಜೆಡಿಎಸ್ ಯುವ...

ಸದ್ಯಕ್ಕೆ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ- ಪರೋಕ್ಷವಾಗಿ ತಾನೂ ಸಿಎಂ ಸ್ಥಾನದ ಆಕಾಂಕ್ಷಿಎಂದ್ರಾ ಸಚಿವ ಮಹದೇವಪ್ಪ

ಚಾಮರಾಜನಗರ, ಮೇ,23,2026 (www.justkannada.in): ಹೆಚ್ ಸಿ ಮಹದೇವಪ್ಪ ಮುಂದಿನ ಸಿಎಂ ಎಂದು...