16
June, 2026

A News 365Times Venture

16
Tuesday
June, 2026

A News 365Times Venture

RSS ಸದಸ್ಯರು ಹಿಂದೂಗಳಲ್ಲ, ಬದಲಿಗೆ ಹಿಂದುತ್ವವಾದಿಗಳು- ಸಚಿವ ಯತೀಂದ್ರ ಸಿದ್ದರಾಮಯ್ಯ

Date:

ಮೈಸೂರು, ಜೂನ್, 16,2026 (www.justkannada.in):  ಆರ್ ಎಸ್ ಎಸ್ ನೋಂದಣಿ ವಿಚಾರಕ್ಕೆ ಸಂಬಂಧಿಸಿದಂತೆ ಮೋಹನ್ ಭಾಗವತ್ ಅವರಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಪತ್ರ ಬರೆದ ವಿಚಾರಕ್ಕೆ ಸಂಬಂಧಿಸಿದಂತೆ ನಗರಾಭಿವೃದ್ದಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಯತೀಂದ್ರ ಸಿದ್ದರಾಮಯ್ಯ, ಆರ್‌ಎಸ್‌ಎಸ್‌ ಸದಸ್ಯರು ಹಿಂದುಗಳಲ್ಲ, ಬದಲಿಗೆ ಹಿಂದುತ್ವವಾದಿಗಳು. ಗೃಹ  ಸಚಿವಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್‌ ನೋಂದಣಿಗೆ ಕೇಳಿರುವುದು ಕಾನೂನು ಪ್ರಕಾರ ಸರಿಯಾಗಿದೆ. ಆರ್‌ಎಸ್‌ಎಸ್‌ ಸಾಂಸ್ಕೃತಿಕ ಸಂಘಟನೆ ಎಂದು ಹೇಳಿಕೊಂಡರೂ, ವಾಸ್ತವದಲ್ಲಿ ಅದೊಂದು ರಾಜಕೀಯ ಸಂಘಟನೆ. ಅದು ಪ್ರತಿಯೊಂದು ಚುನಾವಣೆಯಲ್ಲಿಯೂ ಬಿಜೆಪಿ ಪರವಾಗಿ ಕೆಲಸ ಮಾಡುತ್ತದೆ. ಆದ್ದರಿಂದ, ಆರ್‌ಎಸ್‌ಎಸ್‌ ದೇಶದ ಕಾನೂನುಗಳನ್ನು ಪಾಲಿಸಬೇಕು ಮತ್ತು ತಮ್ಮನ್ನು ನೋಂದಾಯಿಸಿಕೊಳ್ಳಬೇಕು ಎಂದು  ತಿಳಿಸಿದ್ದಾರೆ.

ಆರ್‌ಎಸ್‌ಎಸ್‌ ಅನ್ನು ಕೇವಲ ಸಾಂಸ್ಕೃತಿಕ ಸಂಘಟನೆ ಎಂದು ಪರಿಗಣಿಸಲು ಸಾಧ್ಯವಿಲ್ಲ. ಬದಲಾಗಿ, ಇದು ಬಿಜೆಪಿ ಪರವಾಗಿ ಕಾರ್ಯನಿರ್ವಹಿಸುವ ರಾಜಕೀಯ ಸಂಸ್ಥೆಯಾಗಿದೆ. ಧರ್ಮದ ಹೆಸರಿನಲ್ಲಿ ಏನು ಬೇಕಾದರೂ ಮಾಡುವಂತಿಲ್ಲ. ಆರ್‌ಎಸ್‌ಎಸ್‌ ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿಗಳನ್ನು ಮತ್ತು ಹಣಕಾಸು ವ್ಯವಹಾರಗಳನ್ನು ಹೊಂದಿದೆ. ಈ ಆರ್ಥಿಕ ವ್ಯವಹಾರಗಳಿಗೆ ಲೆಕ್ಕಪತ್ರವನ್ನು ನೀಡಬೇಕು ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.

Key words: RSS members, Hindus, Hindutva, Minister, Yatindra Siddaramaiah

The post RSS ಸದಸ್ಯರು ಹಿಂದೂಗಳಲ್ಲ, ಬದಲಿಗೆ ಹಿಂದುತ್ವವಾದಿಗಳು- ಸಚಿವ ಯತೀಂದ್ರ ಸಿದ್ದರಾಮಯ್ಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ನೀಟ್ ಮರು ಪರೀಕ್ಷೆ:  ಮಾರ್ಗಸೂಚಿ ಕಟ್ಟುನಿಟ್ಟಿನ ಪಾಲನೆಗೆ ಜಿಲ್ಲಾಧಿಕಾರಿ ನಿರ್ದೇಶನ

ಮಂಡ್ಯ,ಜೂನ್,16,2026 (www.justkannada.in): ನೀಟ್ ಮರು ಪರೀಕ್ಷೆಯು ಜೂನ್ 21ರಂದು  ನಡೆಯಲಿದ್ದು, ಪರೀಕ್ಷಾ...

13 ದಿನಗಳ ನಂತರ ಖಾತೆ ವಹಿಸಿಕೊಂಡ ಸಚಿವ ಕೃಷ್ಣಭೈರೇಗೌಡ

ಬೆಂಗಳೂರು,ಜೂನ್,16,2026 (www.justkannada.in): ಪೂರ್ಣ ಪ್ರಮಾಣದ ಖಾತೆ ನೀಡಿಲ್ಲ ಎಂಧು ಅಸಮಾಧಾನಗೊಂಡು ಖಾತೆಯಿಂದ...

ಯಾವುದೇ ಕಾರಣಕ್ಕೂ ಗ್ಯಾರಂಟಿ ನಿಲ್ಲಲ್ಲ : ಅಪಪ್ರಚಾರಕ್ಕೆ ಕಿವಿಗೊಡಬೇಡಿ-ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಜೂನ್,15,2026 (www.justkannada.in): ಪಂಚ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೆ ನಿಲ್ಲಿಸುವುದಿಲ್ಲ. ವಿಪಕ್ಷಗಳ...

ಸರ್ಕಾರಿ ಅಭಿಯೋಜಕರಿಗೆ ಲಂಚ ನೀಡಲು ಯತ್ನ: ಇಬ್ಬರು ಲೋಕಾಯುಕ್ತ ಬಲೆಗೆ

ಕಲಬುರಗಿ,ಜೂನ್,15,2026 (www.justkannada.in): ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಎಸ್‌ಸಿ/ಎಸ್‌ಟಿ ಪ್ರಕರಣದಲ್ಲಿ ಆರೋಪಿತನಿಗೆ ಸಹಾಯ ಮಾಡುವ...