9
July, 2026

A News 365Times Venture

9
Thursday
July, 2026

A News 365Times Venture

SIR ಪ್ರಕ್ರಿಯೆ: ಪ್ರತಿಪಕ್ಷದವರು ನಮ್ಮ ಕೆಲಸಕ್ಕೆ ಅಭಿನಂದನೆ ಸಲ್ಲಿಸಬೇಕು- ಸಿಎಂ ಡಿಕೆ ಶಿವಕುಮಾರ್

Date:

ಬೆಂಗಳೂರು,ಮೇ,6,2026 (www.justkannada.in): ಎಸ್ ಐಆರ್ ಬಗ್ಗೆ ಜಾಹೀರಾತು ನೀಡುತ್ತಿದ್ದೇವೆ. ಜಾಗೃತಿ ಮೂಡಿಸುತ್ತಿದ್ದೇವೆ. ಹೀಗಾಗಿ  ಪ್ರತಿಪಕ್ಷದವರು ನಮ್ಮ ಕೆಲಸಕ್ಕೆ ಅಭಿನಂದನೆ ಸಲ್ಲಿಸಬೇಕು ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ಜನರಿಗೆ ಆರ್ಥಿಕ ಸಹಾಯ ಆಗಬೇಕು ಎಂದು ಗ್ಯಾರಂಟಿ ಕೊಟ್ಟಿದ್ದೇವೆ. ನಾವು ಗ್ಯಾರಂಟಿ ಕೊಟ್ಟ ಮೇಲೆ ಕೇಂದ್ರದವರು ಅಳವಡಿಸುತ್ತಿದ್ದಾರೆ.  ಎಸ್ ಐಆರ್ ಬಗ್ಗೆ ಜಾಹೀರಾತು ನೀಡುತ್ತಿದ್ದೇವೆ. ಜಾಗೃತಿ ಮೂಡಿಸುತ್ತಿದ್ದೇವೆ.  ಎಲ್ಲರಿಗೂ ಮತದಾನದ ಹಕ್ಕು ನೀಡುತ್ತಿದ್ದೇವೆ.  ನಾವು ಮಾಡಿದ ಕೆಲಸಕ್ಕೆ ಪ್ರತಿಪಕ್ಷದವರು ಅಭಿನಂದನೆ ಸಲ್ಲಿಸಬೇಕು. ನಾನೂ ಸಹ ಹುಷಾರಾಗಿರಿ ಎಂದು ನಮ್ಮ ಪಕ್ಷದವರಿಗೆ ಹೇಳಿದ್ದೇವೆ.  ಪ್ರತಿಪಕ್ಷದವರು ಟೀಕೆ ಮಾಡುವುದಕ್ಕೆ ಮಾತ್ರ ಮಾತನಾಡುತ್ತಾರೆ ಎಂದರು.

ಎಸ್ ಐಆರ್ ವಿಚಾರದಲ್ಲಿ ನಮ್ಮದೇ ಆದ ಅಭಿಪ್ರಾಯವಿದೆ. ನಾವು ಎಲ್ಲರಿಗೂ ಮತ ಕೊಡಬೇಕು ಅಂತಾ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ.  ಈಗ ಎಲ್ಲರಿಗೂ ಜಾಗೃತಿ ಮೂಡಿಸುತ್ತಿದ್ದೇವೆ. ಎಲ್ಲಾ ಸಂಘ ಸಂಸ್ಥೆಯವರು ಕೂಡ ಕೆಲಸ ಮಾಡುತ್ತಿದ್ದರು. ಎಸ್ ಐಆರ್ ನಲ್ಲಿ ಸರ್ಕಾರ ಕೂಡ ಮಧ್ಯ ಪ್ರವೇಶ ಮಾಡಲ್ಲ. ಸರ್ಕಾರ ಜಾಗೃತಿ ಮೂಡಿಸುತ್ತಿದೆ ಅಂತಾ  ವಿಪಕ್ಷಗಳಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು  ಸಿಎಂ ಡಿಕೆ ಶಿವಕುಮಾರ್ ಟೀಕಿಸಿದರು.

Key words: SIR, process, Opposition, congratulate, our work, CM, DK Shivakumar

The post SIR ಪ್ರಕ್ರಿಯೆ: ಪ್ರತಿಪಕ್ಷದವರು ನಮ್ಮ ಕೆಲಸಕ್ಕೆ ಅಭಿನಂದನೆ ಸಲ್ಲಿಸಬೇಕು- ಸಿಎಂ ಡಿಕೆ ಶಿವಕುಮಾರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಯಶಸ್ಸಿಗೆ ಶಿಸ್ತು ಮತ್ತು ಅಣುಕು ಪರೀಕ್ಷೆಗಳು ಅತ್ಯಗತ್ಯ: ನಿತೀಶ್ ಪಾಟೀಲ್

ಮೈಸೂರು, ಜುಲೈ,7,2026 (www.justkannada.in): ಅಭ್ಯರ್ಥಿಗಳು ಮನೆಯಲ್ಲಿ ಎಷ್ಟೇ ಓದಿದರೂ ಪರೀಕ್ಷಾ ಕೇಂದ್ರದ...

ರಾಜಕೀಯ ಪ್ರೇರಿತ ದೂರುಗಳಿಗೆ ಚು.ಆಯೋಗ ಬೆಲೆ ಕೊಡಲ್ಲ-ಸಚಿವ ಯತೀಂದ್ರ ಸಿದ್ದರಾಮಯ್ಯ

ಮೈಸೂರು,ಜುಲೈ,7,2026 (www.justkannada.in): ರಾಜ್ಯ ಸರ್ಕಾರ ಎಸ್ ಐಆರ್ ಪ್ರಕ್ರಿಯೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ...

ಬರ ಪರಿಸ್ಥಿತಿ ನಿರ್ವಹಣೆ ನಿರ್ಲಕ್ಷ್ಯ ತೋರಿಸಿದ್ರೆ ಕ್ರಮ- ಅಧಿಕಾರಿಗಳಿಗೆ ಸಿಎಂ ಡಿಕೆಶಿ ಖಡಕ್ ಎಚ್ಚರಿಕೆ

ಕಲಬುರುಗಿ,ಜುಲೈ,7,2026 (www.justkannada.in):  ಬರ ಪರಿಸ್ಥಿತಿ ನಿರ್ವಹಣೆ ನಿರ್ಲಕ್ಷ್ಯ ತೋರಿಸಿದರೇ ಕ್ರಮ ಕೈಗೊಳ್ಳಲಾಗುತ್ತದೆ...

SIR : ಸಾರ್ವಜನಿಕರಿಗೆ ಸೂಕ್ತ ಮಾರ್ಗದರ್ಶನ, ಅರಿವು ಮೂಡಿಸಿ- ಸಚಿವ ಯತೀಂದ್ರ ಸಿದ್ದರಾಮಯ್ಯ ಸೂಚನೆ

ಮೈಸೂರು, ಜುಲೈ 7,2026 (www.justkannada.in):  ಮೈಸೂರು ಜಿಲ್ಲೆಯ ವರುಣ ವಿಧಾನಸಭಾ ಕ್ಷೇತ್ರ...