30
July, 2026

A News 365Times Venture

30
Thursday
July, 2026

A News 365Times Venture

ಕ್ಯಾನ್ಸರ್ ಪೀಡಿತ ಕುಟುಂಬಗಳ ಮಕ್ಕಳ ಶಿಕ್ಷಣಕ್ಕೆ ನೆರವು: ಸೆ.6 ರಂದು ‘ನಾದೋತ್ಸವ’

Date:

ಮೈಸೂರು,ಜುಲೈ,28,2026 (www.justkannada.in): ಕ್ಯಾನ್ಸರ್ ಪೀಡಿತ ಕುಟುಂಬಗಳ ಮಕ್ಕಳ ಶಿಕ್ಷಣಕ್ಕೆ ನೆರವು ಒದಗಿಸುವ ಉದ್ದೇಶದಿಂದಾಗಿ ಲಕ್ಷ್ಮೀಶ ಫೌಂಡೇಶನ್ (ರಿ)  ವತಿಯಿಂದ ಸೆ.6 ರಂದು ‘ನಾದೋತ್ಸವ’ ಕಾರ್ಯಕ್ರಮ ಆಯೋಜಿಸಲಾಗಿದೆ.

ಕ್ಯಾನ್ಸರ್ ಚಿಕಿತ್ಸೆಗಾಗಿ ಕುಟುಂಬದ ಸಂಪೂರ್ಣ ಆರ್ಥಿಕ ಸಂಪನ್ಮೂಲಗಳು ಖರ್ಚಾಗುವುದರಿಂದ ಅನೇಕ ಕುಟುಂಬಗಳು ಮಕ್ಕಳ ಶಿಕ್ಷಣವನ್ನು ಮಧ್ಯದಲ್ಲೇ ನಿಲ್ಲಿಸಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಿಸುತ್ತಿವೆ. ಇಂತಹ ಸಂಕಷ್ಟದಲ್ಲಿರುವ ಕುಟುಂಬಗಳ ಮಕ್ಕಳ ಶಿಕ್ಷಣಕ್ಕೆ ನೆರವಾಗುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಲಕ್ಷ್ಮೀಶ ಫೌಂಡೇಶನ್ (ರಿ) ಕಳೆದ ಐದು ವರ್ಷಗಳಿಂದ ನೂರಾರು ಮಕ್ಕಳ ಬದುಕಿನಲ್ಲಿ ಆಶಾಕಿರಣವಾಗಿದ್ದು, ಅವರ ವಿದ್ಯಾಭ್ಯಾಸ ಮುಂದುವರಿಯಲು ಮಹತ್ವದ ಪಾತ್ರ ವಹಿಸಿದೆ.

ಈಗ ಆರನೇ ವರ್ಷಕ್ಕೆ ಕಾಲಿಟ್ಟಿರುವ ಫೌಂಡೇಶನ್‌ ಗೆ ಶಿಕ್ಷಣ ಸಹಾಯಕ್ಕಾಗಿ ಅರ್ಜಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಹೆಚ್ಚಿನ ಮಕ್ಕಳಿಗೆ ನೆರವು ಒದಗಿಸಲು ನಿಧಿ ಸಂಗ್ರಹಿಸುವ ಉದ್ದೇಶದಿಂದ ಸೆಪ್ಟೆಂಬರ್ 6, ಭಾನುವಾರ “ನಾದೋತ್ಸವ” ಎಂಬ ವಿಶೇಷ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಸಮಾಜದ ದಾನಿಗಳು, ಕಲಾಭಿಮಾನಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮದ ಟಿಕೆಟ್ ಖರೀದಿಸಿ ಭಾಗವಹಿಸುವ ಮೂಲಕ ಕ್ಯಾನ್ಸರ್ ಪೀಡಿತ ಕುಟುಂಬಗಳ ಮಕ್ಕಳ ಉಜ್ವಲ ಭವಿಷ್ಯಕ್ಕೆ ಕೈಜೋಡಿಸುವಂತೆ ಫೌಂಡೇಶನ್ ಮನವಿ ಮಾಡಿದೆ.

ಕಾರ್ಯಕ್ರಮದ ಟಿಕೆಟ್ ದರ ₹500 ನಿಗದಿಪಡಿಸಲಾಗಿದ್ದು, ಕಾರ್ಯಕ್ರಮದ ಬಳಿಕ ಭಾಗವಹಿಸುವ ಎಲ್ಲರಿಗೂ ಭೋಜನದ ವ್ಯವಸ್ಥೆ ಮಾಡಲಾಗಿದೆ.

“ಒಂದು ಟಿಕೆಟ್ ಖರೀದಿಸುವ ಮೂಲಕ ಒಬ್ಬ ಮಗುವಿನ ಶಿಕ್ಷಣದ ಕನಸಿಗೆ ಬೆಂಬಲ ನೀಡಬಹುದು. ಸಮಾಜದ ಸಹಕಾರವೇ ಈ ಮಕ್ಕಳ ಭವಿಷ್ಯವನ್ನು ರೂಪಿಸಲಿದೆ” ಎಂದು ಲಕ್ಷ್ಮೀಶ ಫೌಂಡೇಶನ್ ತಂಡ ಮನವಿ ಮಾಡಿದೆ.

Key words: education, cancer, families children, ‘Nadatassava

The post ಕ್ಯಾನ್ಸರ್ ಪೀಡಿತ ಕುಟುಂಬಗಳ ಮಕ್ಕಳ ಶಿಕ್ಷಣಕ್ಕೆ ನೆರವು: ಸೆ.6 ರಂದು ‘ನಾದೋತ್ಸವ’ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಮಳೆಯಾಗದಿದ್ದರೇ ಬೆಂಗಳೂರು ನಗರಕ್ಕೆ ನೀರಿನ ಕೊರತೆ- ಜಲಮಂಡಳಿ ಅಧ್ಯಕ್ಷೆ ಮಂಜುಳ

ಬೆಂಗಳೂರು,ಜುಲೈ,30,2026 (www.justkannada.in):  ಸರಿಯಾಗಿ ಮಳೆಯಾಗದಿದ್ದರೇ ಬೆಂಗಳೂರು ನಗರಕ್ಕೆ ನೀರಿನ ಕೊರತೆ ಎದುರಾಗಲಿದೆ...

ಮೈಸೂರಿನಲ್ಲಿ ನಾಳೆ ನಡೆಯಬೇಕಿದ್ದ ಸಿಎಂ ಸ್ವಾಗತ ಕಾರ್ಯಕ್ರಮ ರದ್ದು

ಮೈಸೂರು,ಜುಲೈ,30,2026 (www.justkannada.in): ಆಗಸ್ಟ್ 1 ರಂದು ಪ್ರಧಾನಿ ನರೇಂದ್ರ ಮೋದಿ ಅವರ...

ಪ್ರಧಾನಿ ಮೋದಿ ಮಾಧ್ಯಮ ಜತೆ ಮಾತಾಡಲಿ : ಕೆಪಿಸಿಸಿ ವಕ್ತಾರ ಎಚ್.ಎ. ವೆಂಕಟೇಶ್ ಆಗ್ರಹ.

ಮೈಸೂರು, ಜುಲೈ, 28,2026 (www.justkannada.in): ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್...

ಮೇಕೆದಾಟು ಯೋಜನೆಗೆ ನಾವು ಬದ‍್ಧ: ಕೇಂದ್ರಕ್ಕೆ ಸಿಎಂ ಒತ್ತಡ ಹಾಕುತ್ತಿದ್ದಾರೆ-ಡಿ.ಕೆ ಸುರೇಶ್

ನವದೆಹಲಿ,ಜುಲೈ,29,2026 (www.justkannada.in):  ಮೇಕೆದಾಟು ಯೋಜನೆ ಜಾರಿಗೆ ಸರ್ಕಾರ ಬದ್ಧವಾಗಿದೆ. ಅನುಮತಿ ನೀಡುವಂತೆ...