29
September, 2026

A News 365Times Venture

29
Tuesday
September, 2026

A News 365Times Venture

ಜಿಲ್ಲಾ ನ್ಯಾಯಾಧೀಶರ ವರ್ಗಾವಣೆ: ಮೈಸೂರಿಗೆ ಬಿ. ಜಯಂತ ಕುಮಾರ್

Date:

ಬೆಂಗಳೂರು, ಸೆಪ್ಟಂಬರ್,29, 2026 (www.justkannada.in):  ಕರ್ನಾಟಕ ಹೈಕೋರ್ಟ್ ಜಿಲ್ಲಾ ನ್ಯಾಯಾಧೀಶರ ವೃಂದದ ಇಬ್ಬರು ನ್ಯಾಯಾಂಗ ಅಧಿಕಾರಿಗಳ ವರ್ಗಾವಣೆ ಹಾಗೂ ಹುದ್ದೆ ನಿಯೋಜನೆಗೆ ಆದೇಶ ಹೊರಡಿಸಿದೆ.

ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಎಂ. ಚಂದ್ರಶೇಖರ್ ರೆಡ್ಡಿ ಅವರ ಸಹಿಯೊಂದಿಗೆ ಸೆ.29ರಂದು ಹೊರಡಿಸಿರುವ ಅಧಿಸೂಚನೆಯಂತೆ, ಆಡಳಿತಾತ್ಮಕ ಕಾರಣಗಳು ಹಾಗೂ ಸಾರ್ವಜನಿಕ ಸೇವೆಯ ಹಿತದೃಷ್ಟಿಯಿಂದ ಈ ವರ್ಗಾವಣೆಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಆದೇಶಿಸಲಾಗಿದೆ.

ಬಿ. ಜಯಂತ ಕುಮಾರ್ ಅವರು ಪ್ರಸ್ತುತ ತುಮಕೂರು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರನ್ನು ಮೈಸೂರು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾಗಿ ವರ್ಗಾವಣೆ ಮಾಡಲಾಗಿದೆ. ಮೈಸೂರು ಹುದ್ದೆ ಇದುವರೆಗೆ ಖಾಲಿ (Vacant Court) ಇತ್ತು.

ಅದೇ ರೀತಿ, ರವೀಂದ್ರ ಹೆಗಡೆ ಅವರು ಪ್ರಸ್ತುತ ಚಿಕ್ಕಮಗಳೂರು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾಗಿದ್ದು, ಅವರನ್ನು ಬೆಂಗಳೂರು ನಗರದ ಪ್ರಧಾನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರಾಗಿ ನಿಯೋಜಿಸಲಾಗಿದೆ. ಈ ಹುದ್ದೆಯೂ ಖಾಲಿ ಇತ್ತು.

ಈ ವರ್ಗಾವಣೆ ಮತ್ತು ಹುದ್ದೆ ನಿಯೋಜನೆಗಳು ಕರ್ನಾಟಕ ಹೈಕೋರ್ಟ್ ಆದೇಶದ ಮೇರೆಗೆ ತಕ್ಷಣದಿಂದ ಜಾರಿಗೆ ಬರಲಿವೆ.

 

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಪರಿಸರ ಸಂರಕ್ಷಣೆಗೆ ರಾಷ್ಟ್ರೀಯ ಬದ್ಧತೆ ಅಗತ್ಯ: ಭೂಪೇಂದ್ರ ಯಾದವ್

  ನವದೆಹಲಿ, ಸೆ.29, 2026: ಅರಣ್ಯ, ವನ್ಯಜೀವಿ, ಜೀವವೈವಿಧ್ಯ ಮತ್ತು ನೈಸರ್ಗಿಕ ಪರಂಪರೆಯ...

‘ಪ್ರಗತಿ 50’ ಯೋಜನೆಗೆ ಬೆಂಗಳೂರು, ಮೈಸೂರು ಆಯ್ಕೆ ಹೆಮ್ಮೆಯ ವಿಷಯ-ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ

ಬೆಂಗಳೂರು, ಸೆಪ್ಟೆಂಬರ್, 29,2026 (www.justkannada.in): ದೇಶದ ಆಯ್ದ 50 ನಗರಗಳನ್ನು ಮಾದರಿ...

ಉಪ್ಪು ಸೇವನೆ ಕುರಿತು ಮಾರ್ಗಸೂಚಿ: ನಿಯಮ ಪಾಲಿಸಲು ಸಚಿವ ಯು.ಟಿ ಖಾದರ್ ಮನವಿ

ಬೆಂಗಳೂರು, ಸೆಪ್ಟಂಬರ್, 29,2026 (www.justkannada.in): ಉಪ್ಪು ಸೇವನೆ ಕುರಿತು ಹೊಸ ಮಾರ್ಗಸೂಚಿ...

ಅ.5ರೊಳಗೆ ಯುಜಿ ಕೇಬಲ್ ಕಾಮಗಾರಿ ಪೂರ್ಣಗೊಳಿಸಿ- ರಮೇಶ್ ಬಂಡಿಸಿದ್ದೇಗೌಡ ಕಟ್ಟುನಿಟ್ಟಿನ ಸೂಚನೆ

ಮೈಸೂರು, ಸೆಪ್ಟಂಬರ್,29, 2026 (www.justkannada.in):  ನಗರದಲ್ಲಿ ಚಾಲ್ತಿಯಲ್ಲಿರುವ ಭೂಗತ ವಿದ್ಯುತ್ ಕೇಬಲ್...