ಬೆಂಗಳೂರು,ಸೆಪ್ಟಂಬರ್,29,2026 (www.justkannada.in): ನೈಸ್ ಯೋಜನೆ ಅಕ್ರಮ ವಿಚಾರವಾಗಿ ಸಿಎಂ ಡಿಕೆ ಶಿವಕುಮಾರ್ ವಿರುದ್ದಆರೋಪಿಸಿದ್ದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಗೆ ಜಲಸಂಪನ್ಮೂಲ ಸಚಿವ ಚಲುವರಾಯಸ್ವಾಮಿ ತಿರುಗೇಟು ನೀಡಿದ್ದಾರೆ.
ಈ ಕುರಿತು ಮಾತನಾಡಿದ ಸಚಿವ ಚಲುವರಾಯಸ್ವಾಮಿ, ಹೆಚ್ ಡಿಕೆ ಎರಡು ಬಾರಿ ಸಿಎಂ ಆದವರು. ಯಾಕೆ ನೈಸ್ ಟೇಕ್ ಓವರ್ ಮಾಡಿಲ್ಲ? ನೈಸ್ ದಾರಿ ತಪ್ಪುವುದಕ್ಕೆ ಹೆಚ್ ಡಿಕೆ ಫ್ಯಾಮಿಲಿ ಕಾರಣ ಎಂದು ಆರೋಪಿಸಿದರು.
ಶಿಶು ದಾರಿ ತಪ್ಪುತ್ತಿದೆ ಅಂದಾಗ ಯಾರು ಸರಿ ಮಾಡಬೇಕು? ನೈಸ್ ಯಾರ ಶಿಶು ಹೇಳಿ? ನೈಸ್ ದೇವೇಗೌಡರ ಮನೆ ಶಿಶು. ಎರಡು ಬಾರಿ ಸಿಎಂ ಆಗಿದ್ರಲ್ಲ ಪ್ರಾಮಾಣಿಕರಿವರು. ಈ ದೇಶ ರಾಜ್ಯಕ್ಕೆ ಪ್ರಾಣಾನೇ ತ್ಯಾಗ ಮಾಡುವಷ್ಟು ಸಿಂಪಲ್ . ಇವರದ್ದು ಬಹಳ ಸಿಂಪಲ್ ಬದುಕು. ಅವರು ಏಕೆ ರದ್ದು ಮಾಡಲಿಲ್ಲ. ನೈಸ್ ಯೋಜನೆಯನ್ನ ಯಾಕೆ ಅವರ ಅವಧಿಯಲ್ಲಿ ರದ್ದುಪಡಿಸಲಿಲ್ಲ? ಎಂದು ಸಚಿವ ಚಲುವರಾಯಸ್ವಾಮಿ ಕುಟುಕಿದರು.




