ಬೆಂಗಳೂರು,ಅಕ್ಟೋಬರ್,1,2026 (www.justkannada.in) ಎಸ್ ಐಆರ್ ನೆಪದಲ್ಲಿ ಮತಗಳವು, ಫಾರ್ಮ್7 ದುರ್ಬಳಕೆ ಮಾಡಿಕೊಳ್ಳಲಾಗಿದ್ದು ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸಿಎಂ ಡಿಕೆ ಶಿವಕುಮಾರ್ ಮತ್ತು ಸಂಪುಟದ ಎಲ್ಲಾ ಸಚಿವರು ರಾಜ್ಯ ಚುನಾವಣಾ ಆಯೋಗದ ಮುಂದೆ ಕುಳಿತು ಧರಣಿ ನಡೆಸಿದ್ದಾರೆ.
ಚುನಾವಣಾ ಫಾರ್ಮ್7 ದುರ್ಬಳಕೆ ಈ ಮೂಲಕ ಮತಗಳವು ಆರೋಪಿಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಸಿಎಂ ಡಿಕೆ ಶಿವಕುಮಾರ್ ದೂರು ಸಲ್ಲಿಸಿದರು. ಬಳಿಕ ಹೊರ ಬಂದು ಚುನಾವಣಾ ಆಯೋಗದ ಕಚೇರಿಯ ಮೆಟ್ಟಿಲಿನ ಮೇಲೆಯೇ ಕುಳಿತು ಪ್ರತಿಭಟನೆ ನಡೆಸಿದ್ದಾರೆ.
ಸಚಿವ ಸಂಪುಟ ಸಭೆಯನ್ನ ರದ್ದು ಮಾಡಿದ್ದು ಸಿಎಂ ಡಿಕೆ ಶಿವಕುಮಾರ್ ಪ್ರತಿಭಟನೆಗೆ ಸಚಿವರು, ಶಾಸಕರು ಸಾಥ್ ನೀಡಿದ್ದಾರೆ. ತಪ್ಪಿತಸ್ಥರ ವಿರದ್ದ ದೂರು ದಾಖಲು ಮಾಡಬೇಕೆಂದು ಪಟ್ಟು ಹಿಡಿದಿದ್ದು ದೂರು ದಾಖಲಿಸುವ ತನಕ ಇಲ್ಲೇ ಇರುವುದಾಗಿ ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಚುನಾವಣಾ ಆಯೋಗದ ಫಾರ್ಮ್ 7 ಅನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಹಲವು ಕ್ಷೇತ್ರಗಳಲ್ಲಿ ಅಕ್ರಮವಾಗಿ ಫಾರ್ಮ್ 7 ಸಲ್ಲಿಸಲಾಗಿದೆ. ತಪ್ಪು ಮಾಡಿದವರ ವಿರುದ್ದ ಕಾನೂನಾತ್ಮಕವಾಗಿ ಕ್ರಮ ಆಗಬೇಕು ಫಾರ್ಮ್ 7 ಸಲ್ಲಿಸಿ ಮತದಾರರ ಹೆಸರು ಡಿಲಿಟ್ ಮಾಡುವ ಕೆಲಸವಾಗಿದೆ ಎಂದು ಡಿಕೆ ಶಿವಕುಮಾರ್ ಆರೋಪಿಸಿದರು.




