27
August, 2026

A News 365Times Venture

27
Thursday
August, 2026

A News 365Times Venture

ಮುಸ್ಲೀಂ ಮೀಸಲಾತಿ, ಸಂವಿಧಾನ ಬದಲಾವಣೆ ಹೇಳಿಕೆ: ರಾಜ್ಯಸಭೆಯಲ್ಲಿ ಬಿಜೆಪಿ ಸದಸ್ಯರಿಂದ ಗದ್ದಲ, ಆಕ್ರೋಶ

Date:

ನವದೆಹಲಿ,ಮಾರ್ಚ್,24,2025 (www.justkannada.in):  ಮುಸ್ಲೀಮರಿಗೆ ಮೀಸಲಾತಿ ನೀಡಲು ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು  ಕರ್ನಾಟಕ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ ಎಂದು ಬಿಜೆಪಿ ಆರೋಪಿಸಿದ್ದು, ಈ ವಿಚಾರವಾಗಿ ಇಂದು ರಾಜ್ಯಸಭೆಯಲ್ಲಿ ಗದ್ದಲ ಉಂಟಾಯಿತು.

ಕರ್ನಾಟಕದಲ್ಲಿ ಗುತ್ತಿಗೆಯಲ್ಲಿ ಮುಸ್ಲೀಮರಿಗೆ 4% ಮೀಸಲಾತಿ ನೀಡಿರುವ ಮಸೂದೆ ಅಂಗೀಕರಿಸಿರುವ ವಿಚಾರ ಕುರಿತು ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದ ಕೇಂದ್ರ ಸಚಿವ ಜೆ.ಪಿ ನಡ್ಡಾ, ಕರ್ನಾಟಕದಲ್ಲಿ ಸಂವಿಧಾನ ಉಲ್ಲಂಘಿಸಿ ಮಸೂದೆ ಜಾರಿ ಮಾಡಿದ್ದಾರೆ ಸಂವಿಧಣಾ ಬದಲಿಸುತ್ತೇವೆ ಅಂತ ಡಿಕೆ ಶಿವಕುಮಾರ್ ಹೇಳಿದ್ದಾರೆ ಎಂದರು.

ಈ ವೇಳೆ ಜೆಪಿ ನಡ್ಡಾ ಅವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಮಲ್ಲಿಕಾರ್ಜುನ ಖರ್ಗೆ, ಸಂವಿಧಾನವನ್ನ ಯಾರೂ ಬದಲಿಸಲು ಸಾಧ್ಯವಿಲ್ಲ. ಅಂದು ಸಂವಿಧಾನ ಬದಲಿಸಲಾಗುವುದು ಎಂದಿದ್ದವರು ಇಂದು ಅವರೇ ಇಲ್ಲಿ ಗಲಾಟೆ ಮಾಡುತ್ತಿದ್ದಾರೆ ಅಂಬೇಡ್ಕರ್ ನೀಡಿರುವ ಮೀಸಲಾತಿ ಬದಲಿಸಲು ಸಾಧ್ಯವಿಲ್ಲ. ಸಂವಿಧಾನ ರಕ್ಷಣೆಗೆ ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ಮಾಡಿತ್ತು.  ಬಿಜೆಪಿ ಭಾರತ್ ಥೋಡೋ ಮಾಡುತ್ತಿದೆ ಎಂದು ಕಿಡಿಕಾರಿದರು.

ಮಲ್ಲಿಕಾರ್ಜುನ ಖರ್ಗೆ ಮಾತಿಗೆ ಆಡಳಿತ ಪಕ್ಷಗಳ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಮಾತಿನ ಚಕಮಕಿ ವಾಗ್ವಾದ ನಡೆದು ಗದ್ದಲ ಉಂಟಾಯಿತು.

Key words: Muslim reservation, BJP members, outrage, Rajya Sabha

The post ಮುಸ್ಲೀಂ ಮೀಸಲಾತಿ, ಸಂವಿಧಾನ ಬದಲಾವಣೆ ಹೇಳಿಕೆ: ರಾಜ್ಯಸಭೆಯಲ್ಲಿ ಬಿಜೆಪಿ ಸದಸ್ಯರಿಂದ ಗದ್ದಲ, ಆಕ್ರೋಶ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಕಾಮಗಾರಿ ಅಪೂರ್ಣ, ಬಳಕೆಗೆ ಬಾರದ ಸ್ಥಿತಿ:  “ಸೈನಿಕ” ಉದ್ಯಾನವನಕ್ಕೆ ಗ್ರಹಣವೇ?

ಮೈಸೂರು,ಆಗಸ್ಟ್,27,2026 (www.justkannada.in): ನಗರದ ದಟ್ಟಗಳ್ಳಿ 3ನೇ ಹಂತದಲ್ಲಿ, ಮಹಾಲಕ್ಷ್ಮಿ ದೇವಸ್ಥಾನದ ಸಮೀಪದಲ್ಲಿರುವ...

ಆ.29ಕ್ಕೆ ಡಾ. ಶಿವರಾತ್ರಿ ರಾಜೇಂದ್ರ ಶ್ರೀಗಳ 111ನೇ ಜಯಂತಿ: ಭಾಗಿಯಾಗಲಿದ್ದಾರೆ ಸಿಎಂ ಡಿಕೆಶಿ, ಸಿದ್ದರಾಮಯ್ಯ

ಮೈಸೂರು, ಆಗಸ್ಟ್,27,2026 (www.justkannada.in): ಸುತ್ತೂರು ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠದ...

ಸಂಪುಟದಲ್ಲಿ ಬದಲಾವಣೆ ವಿಚಾರ ತಳ್ಳಿಹಾಕಿದ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಕಲಬುರುಗಿ,ಆಗಸ್ಟ್,27,2026 (www.justkannada.in): ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ ನೀಡುವ ಸಾಧ್ಯತೆ ಇದೆ....

175 ತಾಲ್ಲೂಕುಗಳನ್ನ ಬರಪೀಡಿತ ಎಂದು ಘೋಷಿಸಬೇಕಿತ್ತು- ಆರ್.ಅಶೋಕ್

ಬೆಂಗಳೂರು,ಆಗಸ್ಟ್,27,2026 (www.justkannada.in): ರಾಜ್ಯ ಸರ್ಕಾರ 101 ತಾಲ್ಲೂಕುಗಳನ್ನ ಬರಪೀಡಿತ ಎಂದು ಘೋಷಿಸಿರುವ...