27
August, 2026

A News 365Times Venture

27
Thursday
August, 2026

A News 365Times Venture

ಆ.29ಕ್ಕೆ ಡಾ. ಶಿವರಾತ್ರಿ ರಾಜೇಂದ್ರ ಶ್ರೀಗಳ 111ನೇ ಜಯಂತಿ: ಭಾಗಿಯಾಗಲಿದ್ದಾರೆ ಸಿಎಂ ಡಿಕೆಶಿ, ಸಿದ್ದರಾಮಯ್ಯ

Date:

ಮೈಸೂರು, ಆಗಸ್ಟ್,27,2026 (www.justkannada.in): ಸುತ್ತೂರು ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠದ 28ನೇ ಪೀಠಾಧಿಪತಿ  ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿ  ಅವರ 111ನೇ ಜಯಂತಿ ಮಹೋತ್ಸವವು ಆಗಸ್ಟ್ 29ರ ಶನಿವಾರ ಮೈಸೂರಿನ ಸುತ್ತೂರು ಶ್ರೀಮಠದಲ್ಲಿ ವಿಜೃಂಭಣೆಯಿಂದ ಜರುಗಲಿದೆ ಎಂದು ಜೆಎಸ್ಎಸ್ ಮಹಾವಿದ್ಯಾಪೀಠ ತಿಳಿಸಿದೆ.

ಈ ಸಂಬಂಧ ಜೆಎಸ್ಎಸ್ ಮಹಾವಿದ್ಯಾಪೀಠ ವತಿಯಿಂದ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಲಾಯಿತು. ಶ್ರೀಗಳು 29-08-1916ರಲ್ಲಿ ಜನಿಸಿ, 28-02-1928ರಲ್ಲಿ 12ನೇ ವಯಸ್ಸಿನಲ್ಲಿ ಪಟ್ಟಾಧಿಕಾರ ವಹಿಸಿ ಅನ್ನ, ಅಕ್ಷರ, ಆರೋಗ್ಯದ ಮೂಲಕ ಸಮಾಜ ಸೇವೆಗೆ ಭದ್ರ ಬುನಾದಿ ಹಾಕಿದವರು.

ರೋಬೋಟ್ ಆನೆ ಮೆರವಣಿಗೆ – ಈ ಬಾರಿಯ ವಿಶೇಷ

ಪ್ರಾಣಿದಯೆ ಮತ್ತು ವನ್ಯಜೀವಿ ಸಂರಕ್ಷಣೆ ಸಂದೇಶಕ್ಕಾಗಿ ಈ ಬಾರಿ ನೈಜ ಆನೆ ಬದಲಿಗೆ ರೋಬೋಟ್ ಆನೆ ಮೇಲೆ ಪೂಜ್ಯರ ಭಾವಚಿತ್ರ ಇರಿಸಿ ಮೆರವಣಿಗೆ ಮಾಡಲು ನಿರ್ಧರಿಸಲಾಗಿದೆ. ಬೆಳಿಗ್ಗೆ ಊಟಿ ರಸ್ತೆಯ ಜೆಎಸ್ಎಸ್ ಕಾಲೇಜಿನಿಂದ ಶ್ರೀಮಠದವರೆಗೆ ರೋಡ್ ಶೋ ನಡೆಯಲಿದೆ.

ಧರ್ಮಸಭೆಯಲ್ಲಿ ಗಣ್ಯರ ದಂಡು

ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಮತ್ತು ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಅವಧೂತ ದತ್ತ ಪೀಠದ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಮತ್ತು ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ದಿವ್ಯ ಸಮ್ಮುಖ ವಹಿಸಲಿದ್ದಾರೆ.

ಕಾರ್ಯಕ್ರಮಗಳ ವಿವರ ಹೀಗಿದೆ…

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾರ್ಯಕ್ರಮ ಉದ್ಘಾಟನೆ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ – ಅಧ್ಯಕ್ಷತೆ

ಡಾ.ಜಿ.ಪರಮೇಶ್ವರ್ – ಜೆಎಸ್ಎಸ್ ವಿಜ್ಞಾನ ವಾಹಿನಿ (Science on Wheels) ಗೆ ಚಾಲನೆ

ಡಾ.ಯತೀಂದ್ರ ಸಿದ್ದರಾಮಯ್ಯ – ‘ರಾಜೇಂದ್ರ ನುಡಿ ನಮನ’ 2ನೇ ಆವೃತ್ತಿ ಬಿಡುಗಡೆ

ಸಚಿವ ಸಿ.ಪುಟ್ಟರಂಗಶೆಟ್ಟಿ – ‘Man with Divinity: Poojya Rajendra Shree’ ಬಿಡುಗಡೆ

ಶಾಸಕ ಡಾ.ಹೆಚ್.ಸಿ.ಮಹದೇವಪ್ಪ – ‘ನಮ್ಮೊಳಗಿಂದ ದೈವ: ಪೂಜ್ಯ ರಾಜೇಂದ್ರ ಶ್ರೀ’ ಬಿಡುಗಡೆ

ಸಂಸದ ಯದುವೀರ್ ಒಡೆಯರ್ – ಪ್ರಸಾದ ವಿಶೇಷ ಸಂಚಿಕೆ ಬಿಡುಗಡೆ

ಮಾಜಿ ಸಂಸದ ಸುನೀಲ್ ಬೋಸ್ – ಜೆಎಸ್ಎಸ್ ವಾರ್ತಾಪತ್ರ ವಿಶೇಷ ಸಂಚಿಕೆ ಬಿಡುಗಡೆ

ಮೈಸೂರು-ಚಾಮರಾಜನಗರ ಜಿಲ್ಲೆಯ ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ನಿವೃತ್ತರಿಗೆ ಅಭಿನಂದನೆ

01-09-2025 ರಿಂದ 31-08-2026ರವರೆಗೆ ನಿವೃತ್ತರಾದ 115 ನೌಕರರು, ಸೇವೆಯಿಂದ ಬಿಡುಗಡೆಗೊಂಡ 51 ಜನರಿಗೆ ಅಭಿನಂದನಾ ಕಾರ್ಯಕ್ರಮ, ಸೇವೆಯಲ್ಲಿರುವಾಗ ಅಗಲಿದ 13 ಜನರ ಕುಟುಂಬಕ್ಕೆ ಸಾಂತ್ವನ ಕಾರ್ಯಕ್ರಮವನ್ನು ಮಧ್ಯಾಹ್ನ 3.30ಕ್ಕೆ ಏರ್ಪಡಿಸಲಾಗಿದೆ, ಹಾಗೆಯೇ  ಎಸ್ಎಸ್ ಎಲ್ಸಿ, ಪಿಯುಸಿ, ಸಿಬಿಎಸ್ ಇ ಟಾಪರ್‌ ಗಳಿಗೆ ಪ್ರತಿಭಾ ಪುರಸ್ಕಾರ, ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಮೈಸೂರು ಮೃಗಾಲಯಕ್ಕೆ 1 ಲಕ್ಷ ರೂ. ದೇಣಿಗೆ, ನೇತ್ರ-ರಕ್ತ-ಅಂಗಾಂಗ ದಾನ ಮಾಹಿತಿ ಕೇಂದ್ರ ಕಾರ್ಯಕ್ರಮ ಜರುಗಲಿದೆ.

ಜೆಎಸ್ಎಸ್ ಗ್ರಂಥಮಾಲೆ ಪುಸ್ತಕಗಳಿಗೆ ಆ.29 ರಿಂದ ಸೆ.30 ರವರೆಗೆ ಶೇ.50 ರಿಯಾಯಿತಿ. ಭಕ್ತಾದಿಗಳಿಗೆ ಬೆಳಗ್ಗೆ, ಮಧ್ಯಾಹ್ನ, ಸಂಜೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ಜೆಎಸ್ಎಸ್ ಮಹಾವಿದ್ಯಾಪೀಠವು ಮಾಹಿತಿ ನೀಡಿದೆ.

Key words: Mysore, Dr. Shivaratri Rajendra Jayanthi, August 29

The post ಆ.29ಕ್ಕೆ ಡಾ. ಶಿವರಾತ್ರಿ ರಾಜೇಂದ್ರ ಶ್ರೀಗಳ 111ನೇ ಜಯಂತಿ: ಭಾಗಿಯಾಗಲಿದ್ದಾರೆ ಸಿಎಂ ಡಿಕೆಶಿ, ಸಿದ್ದರಾಮಯ್ಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಸಂಪುಟದಲ್ಲಿ ಬದಲಾವಣೆ ವಿಚಾರ ತಳ್ಳಿಹಾಕಿದ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಕಲಬುರುಗಿ,ಆಗಸ್ಟ್,27,2026 (www.justkannada.in): ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ ನೀಡುವ ಸಾಧ್ಯತೆ ಇದೆ....

175 ತಾಲ್ಲೂಕುಗಳನ್ನ ಬರಪೀಡಿತ ಎಂದು ಘೋಷಿಸಬೇಕಿತ್ತು- ಆರ್.ಅಶೋಕ್

ಬೆಂಗಳೂರು,ಆಗಸ್ಟ್,27,2026 (www.justkannada.in): ರಾಜ್ಯ ಸರ್ಕಾರ 101 ತಾಲ್ಲೂಕುಗಳನ್ನ ಬರಪೀಡಿತ ಎಂದು ಘೋಷಿಸಿರುವ...

ಆಸ್ತಿ ಉಯಿಲಿನ ಸಾಕ್ಷಿ ಬಂಧನ ಹಿನ್ನೆಲೆ: ತನಿಖಾಧಿಕಾರಿಗೆ 3 ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್

ಬೆಂಗಳೂರು,ಆಗಸ್ಟ್,27,2026 (www.justkannada.in): ಆಸ್ತಿ ಉಯಿಲಿನ ಸಾಕ್ಷಿಯೊಬ್ಬರನ್ನು ಪೊಲೀಸರು ಬಂಧಿಸಿದ ಹಿನ್ನೆಲೆ,  ಬಂಧನವನ್ನು...

ಲಿಂಗಾಂಬುಧಿ ಕೆರೆ ಪ್ರವೇಶ ಶುಲ್ಕ ವಿರೋಧಿಸಿ ವಾಯುವಿಹಾರಿಗಳ ಪ್ರತಿಭಟನೆ

ಮೈಸೂರು,ಆಗಸ್ಟ್,27,2026 (www.justkannada.in):  ಲಿಂಗಾಂಬುಧಿ ಕೆರೆ ನಿರ್ವಹಣೆಯ ಹೆಸರಿನಲ್ಲಿ ಅರಣ್ಯ ಇಲಾಖೆ ವಿಧಿಸಲು...