25
April, 2026

A News 365Times Venture

25
Saturday
April, 2026

A News 365Times Venture

ಮೈಸೂರು ಅರಣ್ಯ ಭವನಕ್ಕೆ ರೈತಮುಖಂಡರಿಂದ ಮುತ್ತಿಗೆ

Date:

ಮೈಸೂರು,ಫೆಬ್ರವರಿ,19,2026 (www.justkannada.in): ವಿರೋಧದ ನಡುವೆಯೂ ಇಂದಿನಿಂದಲೇ ನಾಗರಹೊಳೆ, ಬಂಡೀಪುರದಲ್ಲಿ ಸಫಾರಿ ಆರಂಭ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ರೈತಸಂಘದಿಂದ ಪ್ರತಿಭಟನೆಗಳಿಗೆ ಕರೆ ನೀಡಿದ್ದು ಇಂದು ರೈತ ಮುಖಂಡರು ಮೈಸೂರಿನ ಅರಣ್ಯ ಭವನಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಸಫಾರಿ ಆರಂಭ ವಿರೋಧಿಸಿ ಮೈಸೂರಿನಲ್ಲಿ ರೈತನಾಯಕ ಹೊನ್ನೂರು ಪ್ರಕಾಶ್, ಮಂಜು ಕಿರಣ್ ಹೋರಾಟದ ಕರೆ ನೀಡಿದ್ದು  ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿಯೂ ಹೋರಾಟ ನಡೆಸಲಾಗುತ್ತಿದೆ.

ಇಂದು ರೈತ ಮುಖಂಡ ಹಳ್ಳಿಕೆರೆ ಭಾಗ್ಯರಾಜ್ ನೇತೃತ್ವದಲ್ಲಿ ರೈತಮುಖಂಡರು  ಮೈಸೂರು ಅರಣ್ಯ ಭವನ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಮತ್ತೊಂದೆಡೆ ಸಫಾರಿ ಪಾಯಿಂಟ್ ಬಳಿಯೂ ಧರಣಿ ನಡೆಸಲಾಗಿದೆ.

ಕಾಡಿನ ಬದಲು ಕಾಸನ್ನು ಕಾಪಾಡಿದ ಕಾಡುಮಂತ್ರಿ ಎಂದು ರೈತಮುಖಂಡರು ಕಿಡಿ ಕಾರಿದ್ದು,  ಎಷ್ಟು ಜನ ರೈತರ ಪ್ರಾಣ ಬೇಕು ನಿಮಗೆ ? ಅಕ್ರಮ ರೆಸಾರ್ಟ್ಸ್ ಮಾಲೀಕರ ಹಣ ತಿಂದು ರೈತರ ಬಲಿ ಕೊಡ್ತೀರಾ? ರೆಸಾರ್ಟ್ಸ್ ಮಾಲೀಕರ ಕಾಸು ತಿಂದು ರೈತರ ಜೊತೆ ಆಟ ಆಡ್ತೀರಾ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಫಾರಿ ಆರಂಭಿಸಿದರೆ ಬೀದಿಗಿಳಿದು ಹೋರಾಟ ಮಾಡುವುದು ಗ್ಯಾರೆಂಟಿ.  ಸಫಾರಿಯಿಂದ ಹಲವು ರೈತರ ಪ್ರಾಣ ಹಾನಿ ಆಗಿದೆ. ಸಫಾರಿ ನಿಂತ ಮೇಲೆ ಹುಲಿ ದಾಳಿ ನಿಂತಿದೆ ಎಂದು ರೈತಮುಖಂಡರು ಹರಿಹಾಯ್ದಿದ್ದಾರೆ.

Key words: Mysore, Aranya Bhavan, besieged, farmer leaders

The post ಮೈಸೂರು ಅರಣ್ಯ ಭವನಕ್ಕೆ ರೈತಮುಖಂಡರಿಂದ ಮುತ್ತಿಗೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಡಾ.ರಾಜ್‌ ಕುಮಾರ್ ವ್ಯಕ್ತಿತ್ವ ಎಲ್ಲರಿಗೂ ಮಾದರಿ: ಶಾಸಕ ಟಿ ಎಸ್ ಶ್ರೀವತ್ಸ

ಮೈಸೂರು,ಏಪ್ರಿಲ್,24,2026 (www.justkannada.in): ಸರಳ, ಸಜ್ಜನ, ನಿಷ್ಠಾವಂತ, ಪ್ರಾಮಾಣಿಕ ಕಲಾವಿದ ಹಾಗೂ ಎಲ್ಲ...

ಕೃಷಿ ಕ್ಷೇತ್ರದಲ್ಲಿನ ಹೊಸ ಬದಲಾವಣೆಗಳು ಪ್ರತಿ ರೈತರನ್ನೂ ತಲುಪಬೇಕು-ಸಿಎಂ  ಸಿದ್ದರಾಮಯ್ಯ

ಬೆಂಗಳೂರು, ಏಪ್ರಿಲ್, 24,2026 (www.justkannada.in):  ಕೃಷಿ ಕ್ಷೇತ್ರದಲ್ಲಿನ ಹೊಸ ಬದಲಾವಣೆಗಳು ಪ್ರತಿ...

ಒಳಮೀಸಲಾತಿ : ಎಲ್ಲರೂ ಒಟ್ಟಿಗೆ ಚರ್ಚೆ ಮಾಡಿ ಒಮ್ಮತದ ನಿರ್ಧಾರ- ಸಚಿವ ಕೆ.ಎಚ್ ಮುನಿಯಪ್ಪ

ಬೆಂಗಳೂರು,ಏಪ್ರಿಲ್,24,2026 (www.justkannada.in):  ರಾಜ್ಯದಲ್ಲಿ ಕಗ್ಗಂಟಾಗಿರುವ ಒಳ ಮೀಸಲಾತಿ ಗೊಂದಲ ವಿಚಾರ ಕುರಿತು...

ದೆಹಲಿಯಲ್ಲಿ ಬಿಜೆಪಿ ಕಿತ್ತೊಗೆಯಬೇಕೆಂಬುದೇ ನಮ್ಮ ಗುರಿ- ಮಮತಾ ಬ್ಯಾನರ್ಜಿ

ಕೋಲ್ಕತ್ತಾ,ಏಪ್ರಿಲ್,24,2026 (www.justkannada.in): ದೆಹಲಿಯಲ್ಲಿ ಬಿಜೆಪಿ ಕಿತ್ತೊಗೆಯಬೇಕೆಂಬುದೇ ನಮ್ಮ ಗುರಿಯಾಗಿದೆ ಎಂದು ಪಶ್ಚಿಮ...